অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜಾರ್ಜ್, ಬೆಡ್‍ನೋರ್ಜ್

ಜಾರ್ಜ್, ಬೆಡ್‍ನೋರ್ಜ್

ಜಾರ್ಜ್, ಬೆಡ್‍ನೋರ್ಜ್ (1950--) ೧೯೮೭

ಜರ್ಮನಿ -ಭೌತಶಾಸ್ತ್ರ-ಪಿಂಗಾಣಿಗಳಲ್ಲಿನ ಅತಿವಾಹಕತೆಯನ್ನು ಕುರಿತಾಗಿ ಸಂಶೋಧಿಸಿದಾತ.

ಜಾರ್ಜ್, 16 ಮೇ 1950ರಂದು ಜನಿಸಿದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಜಾರ್ಜ್‍ನ ತಂದೆ ತಾಯಿಗಳು ಪರಸ್ಪರ ಸಂಪರ್ಕವಿರದಂತೆ ಕಣ್ಮರೆಯಾಗಿದ್ದರು.  ಜಾರ್ಜ್‍ನ ತಾಯಿ ಮಗನನ್ನು ಉತ್ತಮ ಸಂಗೀತಗಾರನನ್ನಾಗಿ ರೂಪಿಸಲು ಯತ್ನಿಸಿದಳಾದರೂ, ಜಾರ್ಜ್‍ಗೆ ಬಾಲ್ಯದಿಂದಲೂ , ಯಂತ್ರ ದುರಸ್ತಿಗಳಲ್ಲೇ  ಅಧಿಕ ಉತ್ಸಾಹವಿದ್ದಿತು.  ರಸಾಯನಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ಜಾರ್ಜ್ 1968ರಲ್ಲಿ ಮುನ್ಸ್‍ಟರ್ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕೆ ನೊಂದಾಯಿತನಾದನು.  ರಸಾಯನಶಾಸ್ತ್ರದಲ್ಲಿ ಭಾರಿ ಸಂಖ್ಯೆಯ ವಿದ್ಯಾರ್ಥಿಗಳು ಇದ್ದುದರಿಂದ ಭೌತ ಹಾಗೂ ರಸಾಯನಶಾಸ್ತ್ರಗಳೆರಡಕ್ಕೂ ಬೆಸುಗೆಯಂತಿದ್ದ ಸ್ಪಟಿಕಾಲೇಖಶಾಸ್ತ್ರಕ್ಕೆ ವರ್ಗಾವಣೆಗೊಂಡನು.  1972ರಲ್ಲಿ ತನ್ನ ಪ್ರಾಧ್ಯಾಪಕನಾದ ವೂಲ್ಫ್‍ಗ್ಯಾಂಗ್ ಹೌಫ್’ಮನ್ಮತ್ತು  ಹೊರ್ಸಾಟ್ ಬೊಹ್ಮ್ ನೆರವಿನಿಂದ ಐಬಿಎಂ ಝೂರಿಕ್ ಸಂಶೋಧನಾ ಪ್ರಯೋಗಾಲಯ ಸೇರಿದನು.  ಇಲ್ಲಿ ಸ್ಪಟಿಕಗಳ ಬೆಳವಣಿಗೆ ಗುಣ ಲಕ್ಷಣಗಳ ಬಗೆಗೆ ಅಧ್ಯಯನ ನಡೆಸಿದನು.  1977ರಲ್ಲಿ ಸ್ವಿಸ್  ಫೆಡೆರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಘನಸ್ಥಿತಿ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಸಂಶೋಧಕನಾಗಿ ಸೇರಿದನು. ಪರ್ವೊಸ್ಕೈಟ್ ರೀತಿಯ ಘನ ದ್ರಾವಣಗಳ ರಾಚನಿಕ, ಪಾರವೈದ್ಯುತ್ (DIAELECTRIC)  , ಫೆರೋವೈದ್ಯುತ್ ಗುಣಗಳ ಬಗೆಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಗಳಿಸಿದನು. ಕ್ಯಾಮರ್‍ಲಿಂಗ್ ಒನ್ನೆಸ್  1911ರಲ್ಲಿ ಕೆಲವು ಲೋಹಗಳು 00 K ತಾಪಮಾನದಲ್ಲಿ ವಿದ್ಯುತ್ ಹರಿವಿಗೆ ಯಾವುದೇ ಪ್ರತಿರೋಧ ಒಡ್ಡದಿರುವುದನ್ನು ಗಮನಿಸಿದ್ದನು.  ಹಾಗೂ ಈ ವಿದ್ಯಾಮಾನವನ್ನುಕುರಿತಾಗಿ ಬಾರ್ಡಿನ್ ಹಾಗೂ ಸಹ ಸಂಶೋಧಕರು ಬಿ.ಸಿ.ಎಸ್. ಸಿದ್ಧಾಂತವನ್ನು 1957ರಲ್ಲಿ ಮಂಡಿಸಿದ್ದರು. ಲೋಹಗಳಲ್ಲಿ ಅತಿವಾಹಕತೆ 00 K ಬದಲಾಗಿ , ದ್ರವ ಸಾರಜನಿಕ ಕುದಿಯುವ 770 K ಯಲ್ಲಿ ಸಾಧ್ಯವಾಗುವುದಾದರೆ, ಎಲೆಕ್ಟಾನಿಕ್  ಉಪಕರಣಗಳ ದಕ್ಷತೆ ಹಾಗೂ ಸಾಮರ್ಥ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಸಾಧ್ಯತೆ ವಿಜ್ಞಾನಿಗಳ ಸಮುದಾಯಕ್ಕೆ ವೇದ್ಯವಾಗಿದ್ದಿತು. 1986ರಲ್ಲಿ ಬೆಡ್‍ನಾಟ್ರ್ಸ್ ಹಾಗೂ ಮೂಲರ್ ಲ್ಯಾಂಥನಂ ಬೇರಿಯಂ ಹಾಗೂ ತಾಮ್ರಗಳ ಆಕ್ಸೈಡ್‍ಗಳ ಮಿಶ್ರ ಲೋಹ 3060K ತಾಪಮಾನದಲ್ಲಿ ಅತಿವಾಹಕವಾಗಿರುವುದಾಗಿ ಸಾಧಿಸಿ ತೋರಿಸಿದರು.  ಸಂಶೋಧನೆ ಪ್ರಕಟವಾದ ಕೆಲವು ದಶಕಗಳ ನಂತರವೇ ನೊಬೆಲ್ ಪ್ರಶಸ್ತಿ ದಕ್ಕುವುದು ಸಂಪ್ರದಾಯವೇನೋ ಎನ್ನುವಷ್ಟು ಸಹಜವಾಗಿದೆ ಇದಕ್ಕೆ ಅಪವಾದವೆಂಬಂತೆ ಸಂಶೋಧನೆ ಪ್ರಕಟವಾದ  ಒಂದೇ ವರ್ಷದಲ್ಲಿ ನೊಬೆಲ್ ಇತಿಹಾಸದಲ್ಲೇ ಆಶ್ಚರ್ಯವೆನಿಸುವಂತೆ ಬೆಡೆನಾಟ್ರ್ಸ್ ಹಾಗೂ ಮೂಲರ್ ಪ್ರಶಸ್ತಿ ಪಡೆದರು.  1987ರಲ್ಲಿ ಅಮೆರಿಕನ್ ಫಿಸಿಕಲ್ ಸೊಸೈಟಿ ನ್ಯೂಯಾರ್ಕ್‍ನಲ್ಲಿ ಅತಿವಾಹಕಗಳ ಮೇಲೆ ವಿಶೇಷ ಸಮಾವೇಶವೊಂದನ್ನು ಕರೆದಾಗ ವಿರಳ ಭೂಧಾತುಗಳು (RARE EARTH ELEMENTS) ಲ್ಯಾಂಥನಂ, ಓರಿಟ್ರಿಂ  ಬೇರಿಯಂ, ತಾಮ್ರ ಹಾಗೂ ಇವುಗಳ ಆಕ್ಸೈಡ್‍ಗಳ  ಬಗೆಯ ಮಿಶ್ರಲೋಹಗಳು 900ಏ ತಾಪಮಾನದಲ್ಲಿ ಅತಿವಾಹಕವಾಗಿರುವವೆಂದು ಘೋಷಿಸಲಾಯಿತು. 1976ರಲ್ಲಿ ಐಬಿಎಂ ಜೂರಿಕ್‍ನ್ನು ಸೇರಿದ ಬೆಡ್‍ನಾಟ್ರ್ಸ್ , ಮೂಲರ್ ಮಾರ್ಗದರ್ಶನದಲ್ಲಿ 1976ರಲ್ಲಿ ಪದವಿಗಳಿಸಿ, 1982ರಿಂದ ಶಿಕ್ಷಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/23/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate