ಚಂದ್ರಶೇಖರ ಸುಬ್ರಹ್ಮಣ್ಯಂ (1910-1995) ೧೯೮೩ ಭಾರತ-ಅಸಂಸಂ -ಭೌತಶಾಸ್ತ್ರ -ಶ್ವೇತ ಕುಜ್ಬಗಳ ( WHIITE DWARF ) ಸಿದ್ಧಾಂತ ಅಭಿವೃದ್ದಿಗೊಳಿಸಿದಾತ.
1910 ಅಕ್ಟೋಬರ್ 10 ರಂದು ಲಾಹೋರ್‍ನಲ್ಲಿ ಚಂದ್ರಶೇಖರ್ ಜನನವಾಯಿತು. 18ನೇ ವಯಸ್ಸಿನಲ್ಲಿರುವಾಗ 1928ರಲ್ಲಿ ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿಯ ಪತ್ರಿಕೆಯಲ್ಲಿ ಕಾಂಪ್ಟನ್ ಪರಿಣಾಮ ಕುರಿತಾದ ತನ್ನ ಮೊದಲ ಸಂಶೋಧನಾ ಲೇಖನ ಪ್ರಕಟಿಸಿದನು. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿಎಸ್‍ಸಿ ಆನರ್ಸ್ ಪದವಿ ಪಡೆದು ನಚಿತರ ಸರ್ಕಾರದ ವಿದ್ಯಾರ್ಥಿವೇತನ ಪಡೆದು ಕೇಂಬ್ರಿಜ್‍ಗೆ ಹೋದನು. ಇಲ್ಲಿ ಆರ್ ಎಚ್. ಫೆಲರ್ ಮತ್ತು ಡಿರಾಕ್‍ರ ಮಾರ್ಗದರ್ಶನದಲ್ಲಿ 1933ರಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದಲಿ ಪಿಎಚ್‍ಡಿ ಗಳಿಸಿದನು. ನಂತರ 1936ರಿಂದ ಅಸಂಸಂಗಳಲ್ಲಿ ನೆಲೆಸಿದನು. ಚಂದ್ರಶೇಖರ ನಕ್ಷತ್ರಗಳ ವಿಕಸನದ ಅಂತಿಮ ಹಂತಗಳಲ್ಲಿ ಆಸಕ್ತನಾಗಿದ್ದನು. ತಾರೆಯಲ್ಲಿನ ಬೈಜಿಕ ಇಂಧನ ಮುಗಿದ ನಂತರ , ಗುರುತ್ವದಿಂದಾಗಿ ಅದು ಅದರ ಕೇಂದ್ರಮುಖಿಯಾಗಿ ಒಳ ಕುಸಿಯತೊಡಗುತ್ತದೆ. ಆದರೆ ಒಂದು ಸ್ಥಿತಿಯ ನಂತರ ಬಹು ಒತ್ತಡಕ್ಕೆ ಒಳಗಾದ ಅನಿಲದಿಂದಾಗಿ ಕುಸಿತ ನಿಲುಗಡೆ ಹೊಂದುತ್ತದೆ. ಇಂತಹ ಸ್ಥಿತಿಯಲ್ಲಿ ನಕ್ಷತ್ರ ಅತ್ಯಂತ ಸಾಂದ್ರ ಬಿಳಿ ಕುಜ್ಬವಾಗುತ್ತದೆಯೆಂದುದು ಸೂಚಿಸಿದನು. ದ್ರವ್ಯರಾಶಿ ಅಧಿಕವಾದಷ್ಟು ಚಿಕ್ಕಗಾತ್ರದ್ದಾಗುವ ವೈಲಕ್ಷಣ ಶ್ವೇತ ಕುಬ್ಜದ್ದಾಗಿರುತ್ತದೆ. ಯಾವುದೇ ತಾರೆ ಶ್ವೇತ ಕುಬ್ಜವಾಗಲೂ ಅದರ ದ್ರವ್ಯರಾಶಿ ಕನಿಷ್ಟವೆಂದರೆ ಸೂರ್ಯನ ದ್ರವ್ಯರಾಶಿಯ 1.4ರಷ್ಟಿರಬೇಕು . ಈ ಮಿತಿ ‘ಚಂದ್ರಶೇಖರ ಮಿತಿ’ ಗುರುತಿಸಲ್ಪಟ್ಟಿದೆ. ಈವರೆಗೆ ವೀಕ್ಷಿಸಲಾದ ಎಲ್ಲಾ ತಾರೆಗಳೂ ಈ ಮಿತಿಯ ನಿಯಮದಲ್ಲಿವೆ. ಚಂದ್ರಶೇಖರ 1983ರ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/17/2020