ಗರ್ಡ್, ಬಿನ್ನಿಂಗ್ (1947--) ೧೯೮೬
ಜರ್ಮನಿ-
ಬಿನ್ನಿಂಗ್ 1947ರಲ್ಲಿ ಫ್ರಾಂಕ್’ಫರ್ಟ್‍ನಲ್ಲಿ ಜನಿಸಿದನು. ಎರಡನೇ ಜಾಗತಿಕ ಯುದ್ದದ ಪರಿಣಾಮಗಳು ಬಿನ್ನಿಂಗ್‍ನನ್ನು ಬಾಲ್ಯದಲ್ಲಿಯೇ ಕಾಡಿ, ಅವನ ಜೀವನವನ್ನು ರೂಪಿಸಿದವು. ಫ್ರಾಂಕ್’ಫರ್ಟ್ ಹಾಗೂ ಬಫೆನ್ ಬಖ್‍ಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದನು. ಬಾಲ್ಯದಿಂದಲೇ ದೊಡ್ಡ ವಿಜ್ಞಾನಿಯಾಗಬೇಕೆಂದು ಆಶೆ ಅವನಲ್ಲಿ ಮನೆಮಾಡಿದ್ದಿತಾದರೂ ಬೆಳೆದು ದೊಡ್ಡವಾನಾದಂತೆ ಸೈದ್ಧಾಂತಿಕ ಭೌತಶಾಸ್ತ್ರ ಬಹು ತಾಂತ್ರಿಕವೂ, ತಾತ್ತ್ವಿಕತೆವೂ ಹಾಗೂ ಕಲ್ಪನಾತೀತವೂ ಆಗಿರುವಂತೆ ಬಿನ್ನಿಂಗ್‍ಗೆ ಭಾಸವಾಗತೊಡಗಿತು. ಇದು ಬಿನ್ನಿಂಗ್ ಸಂಗೀತದತ್ತ ಹೊರಳಿ, ಅತ್ಯುತ್ತಮ ವಯೋಲಿನ್ ವಾದಕನಾಗುವಂತೆ ಮಾಡಿತು. ಡಾ|| ಮಾರ್ಟಿಯೆನ್ಸನ್ ಹಾಗೂ ಇ,ಹೊಯ್‍ನಿಗ್ ಮಾರ್ಗದರ್ಶನದಲ್ಲಿ, ಡಿಪ್ಲಮೋ ಕಾಲೇಜಿಗೆ ಸೇರಿದಾಗ, ಭೌತಶಾಸ್ತ್ರವನ್ನು ಓದುವದಕ್ಕಿಂತ, ಅದರಲ್ಲಿ ಕಾರ್ಯಶೀಲನಾಗುವುದು ಉತ್ತಮವೆಂದು ಕಂಡುಕೊಂಡ, ಬಿನ್ನಿಂಗ್ ಕ್ರಮೇಣವಾಗಿ ಭೌತಶಾಸ್ತ್ರದತ್ತ ಆಕರ್ಷಿತನಾದನು. 1978ರಲ್ಲಿ ಝೂರಿಕ್‍ನಲ್ಲಿದ್ದ ಐ.ಬಿ.ಎಂನ ಸಂಶೋಧನಾ ಪ್ರಯೋಗಾಲಯದಿಂದ, ಭೌತಶಾಸ್ತ್ರಜ್ಞ ಹುದ್ದೆಗೆ ಅಹ್ವಾನ ಬಂದಿತು. ಇಲ್ಲಿ ಹೀನ್ರಿಕ್ ರೋಹ್ರರ್‍ನ ಸಾಂಗತ್ಯ ದಕ್ಕಿತು. ಕ್ರಿಸ್ಟೋಫ್ಗೆರ್ಬರ್, ಎಡ್ಮಂಡ್ ವೀಬಲ್‍ನಂತಹ ಖ್ಯಾತ ಭೌತಶಾಸ್ತ್ರಜ್ಞರೊಂದಿಗಿನ ಕೆಲಸದಲ್ಲಿ ಬಿನ್ನಿಂಗ್ ತಲ್ಲೀನನಾದನು. ಇವರೆಲ್ಲರೊಂದಿಗೆ ಬಿನ್ನಿಂಗ್ ಸಹ ಜರ್ಮನಿಯ ಭೌತಶಾಸ್ತ್ರದ ಪ್ರಶಸ್ತಿ, ಒಟ್ಟೋ ಕ್ಲುಂಗ್ ಪ್ರಶಸ್ತಿ , ಹೆವೆಲ್‍ಟ್ ಪ್ಯಾಕರ್ಡ್ ಪ್ರಶಸ್ತಿಗಳು ದಕ್ಕಿದವು. 1986ರಲ್ಲಿ ಬಿನ್ನಿಂಗ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/19/2019