ಅಲೆಕ್ಸ್ ,ಮುಲ್ಲರ್ ಕೆ. –(1927--)೧೯೮೭
ಆಸ್ಟ್ರಿಯಾ-ಭೌತಶಾಸ್ತ್ರ -ಪಿಂಗಾಣಿ ವಸ್ತುಗಳಲ್ಲಿನ ಅತಿವಾಹಕತೆ ಅನಾವರಣಗೊಳಿಸಿದಾತ.
ಅಲೆಕ್ಸ್ 20 ಏಪ್ರಿಲ್ 1927ರಂದು ಸ್ವಿಟ್ಸಲ್ರ್ಯಾಂಡಿನ ಬೇಸಲ್‍ನಲ್ಲಿ ಜನಿಸಿದನು. ಬೇಸಲ್‍ನಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ಇಡೀ ಯುರೋಪ್ ಯುದ್ದದ ಸುಳಿಯಲ್ಲಿ ಸಿಲುಕಿದ್ದರೆ, ತಟಸ್ಥ ನೀತಿ ಅನುಸರಿಸಿದ ಸ್ವಿಟ್ಸಲ್ರ್ಯಾಂಡ್ ಯುದ್ದ ಸಂಬಂಧಿ ತಾಕಲಾಟಗಳಿಂದ ದೂರವಾಗಿ ಶಾಂತಸ್ಥಿತಿಯಲ್ಲಿದ್ದಿತು. ಹತ್ತೊಂಬತ್ತನೇ ವಯಸ್ಸಿನಲ್ಲಿ ಮಿಲಿಟರಿ ಶಿಕ್ಷಣಕ್ಕೆ ದಾಖಲಾಗಿ, ನಂತರ ಝೂರಿಕ್‍ನಲ್ಲಿರುವ ಸರ್ಕಾರದ ತಾಂತ್ರಿಕ ಕಾಲೇಜಿನ ಭೌತಶಾಸ್ತ್ರ ಹಾಗೂ ಗಣಿತ ವಿಭಾಗದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದನು. ಇಲ್ಲಿ ಭೌತಶಾಸ್ತ್ರದ ಅಧ್ಯಯನಕ್ಕೆ ಅಂತಹ ಉತ್ತಮ ಭವಿಷ್ಯ ಕಾಣದಿದ್ದುದರಿಂದ ಅಲೆಕ್ಸಾ ವೈದ್ಯುತ್ ಇಂಜಿನಿಯರಿಂಗ್‍ಗೆ ವರ್ಗಾವಣೆಗೊಳ್ಳಲು ಯತ್ನಿಸಿದನು. ಆದರೆ ಪ್ರಾಧ್ಯಾಪಕನೊಬ್ಬನ ಸಲಹೆಯ ಮೇರೆಗೆ ಭೌತಶಾಸ್ತ್ರ ಅಧ್ಯಯನ ಮುಂದುವರಿಸಿದನು. 1955ರಲ್ಲಿ ಶಿಕ್ಷಣ ಪೂರೈಸಿದ ಅಲೆಕ್ಸಾ ಜಿನೇವಾದ ಬ್ಯಾಟೆಲ್ಲೆ ಮೆಮೋರಿಯಲ್ ಇನ್ಸ್ಟಿಟ್ಯೂಟ್‍ನಲ್ಲಿ ಬೋಧಕ ಸಿಬ್ಬಂದಿಯಾಗಿ ಜೀವನ ಪ್ರಾರಂಭಿಸಿದನು. 1963ರಲ್ಲಿ ಐಬಿಎಂ ಸಂಶೋಧನಾ ಪ್ರಯೋಗಾಲಯ ಸೇರಿ ಸಂಯುಕ್ತಗಳ ದ್ಯುತಿವರ್ಣಗಳ ಕುರಿತಾಗಿ ಪ್ರಯೋಗಗಳನ್ನು ಹಮ್ಮಿಕೊಂಡನು. ಅಲೆಕ್ಸಾನಿಂದ ವಿಸ್ತೃತವಾಗಿ ಜರುಗಿದ ಅಧ್ಯಯನ ಹಾಗೂ ಪ್ರಯೋಗಗಳಿಂದ ಪಿಂಗಾಣಿ ವಸ್ತುಗಳಲ್ಲಿನ ಅತಿವಾಹಕತೆ ಅನಾವರಣಗೊಂಡಿತು. ಇದಕ್ಕಾಗಿ ಅಲೆಕ್ಸ್ 1987ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/6/2019