ಹೆವಿಷ್, ಆ್ಯಂಟೊನಿ (1924--) ೧೯೭೪ ಬ್ರಿಟನ್- ರೇಡಿಯೋ ಖಗೋಳಶಾಸ್ತ್ರ-ಪಲ್ಸಾರ್ ಗುರುತಿಸಿದ ಮೊದಲಿಗ.
ಹೆವಿಷ್, ಕೇಂಬ್ರಿಜ್‍ನಿಂದ ಭೌತಶಾಸ್ತ್ರದ ಪದವಿ ಗಳಿಸಿದನು. ಇಲ್ಲಿ ರೈಲ್ವೆ ಇಲಾಖೆಯೊಂದಿಗೆ ರೇಡಿಯೋ ದೂರದರ್ಶಕ ಬಳಸುವ ಸಂಶೋಧನೆ ನಡೆಸಿದನು. ತಾರೆಗಳು ವಿಭಿನ್ನ ಪ್ರಕಾಶತೆಯಿಂದಾಗಿ ಮಿನುಗುತ್ತವೆ. ಇದರ ಸಾಮ್ಯತೆಯಲ್ಲಿ ಕೆಲವು ತಾರೆಗಳು ರೇಡಿಯೋ ತರಂಗಗಳನ್ನು ಹೊರಹೊಮ್ಮಿಸುತ್ತವೆ. ತಾರಾಂತರ ಅಂತರಿಕ್ಷದಲ್ಲಿನ ಮೇಘ ಮತ್ತು ಸೌರ ವಾಯುಗಳ ವೀಕ್ಷಣೆಯಲ್ಲೂ ಹೆವಿಷ್ ಆಸಕ್ತಿ ಹೊಂದಿದ್ದನು. 1967ರಲ್ಲಿ ಹೆವಿಷ್ ವಿಶಿಷ್ಟ್ ಬಗೆಯ ದೂರದರ್ಶಕವನ್ನು ವಿನ್ಯಾಸಗೊಳಿಸಿದನು. ತನ್ನ ಶಿಷ್ಯ ಜೊಸೆಲಿನ್ ಬೆಲ್ (ಬರ್ನೆಲ್) ಜೊತೆ ಸೇರಿ ಹೆವಿಷ್ ಕ್ಷೀರಪಥ ಬ್ರಹ್ಮಾಂಡದಲ್ಲಿ ಕ್ರಮಬದ್ಧವಾಗಿ ರೇಡಿಯೋ ತರಂಗಗಳನ್ನು ಹೊಮ್ಮಿಸುವ ತಾರೆಯನ್ನು ಗುರುತಿಸಿದನು. ಇವುಗಳನ್ನು ಪಲ್ಸಾರ್ಗಳೆನ್ನುತ್ತಾರೆ. ಇದಾದ ಮೇಲೆ ಇಂತಹ ಹತ್ತಾರು ಪಲ್ಸಾರ್‍ಗಳನ್ನು ಗುರುತಿಸಲಾಗಿದೆ. ಪಲ್ಸಾರ್‍ಗಳು ಸರಿ ಸುಮಾರು 15 ರಿಂದ 29 ಕಿ.ಮೀ ಗಾತ್ರದವಾಗಿದ್ದು ಆವರ್ತಿಸುವ ನ್ಯೂಟ್ರಾನ್ ತಾರೆಗಳೆಂದು ಈಗ ಗುರುತಿಸಲಾಗಿದೆ. 1974ರಲ್ಲಿ ಪಲ್ಸಾರ್ ಪತ್ತೆ ಹಚ್ಚಿದ್ದಕ್ಕಾಗಿ ಹೆವಿಷ್ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020