ವಿಲ್ಸನ್, ರಾಬರ್ಟ್ ವುಡ್‍ರೋ (1936--) ೧೯೭೮ ಅಸಂಸಂ-ಭೌತಶಾಸ್ತ್ರ- ವಿಶ್ವಾತ್ಮಕವಾದ ಸೂಕ್ಷ್ಮ ತರಂಗಾಂತರ ಹಿನ್ನೆಲೆ ವಿಕಿರಣದ ಸಹ ಅನಾವರಣಕಾರ.
ವಿಲ್ಸನ್, ರೈಸ್ ವಿಶ್ವವಿದ್ಯಾಲಯ, ಹೌಸ್ಟನ್, ಕ್ಯಾಲ್‍ಟೆಕ್‍ನಲ್ಲಿ ತನ್ನ ಶಿಕ್ಷಣ ಪೂರೈಸಿದನು. ನಂತರ ಬೆಲ್ ಪ್ರಯೋಗಾಲಯಗಳಲ್ಲಿದ್ದನು. ಮುಂದೆ 1976ರಲ್ಲಿ ನ್ಯೂಜೆರ್ಸಿಯ ಹೋಮ್‍ಡೆಲ್‍ನ ರೇಡಿಯೋ ಭೌತಶಾಸ್ತ್ರ ವಿಭಾಗದ ಸಂಶೋಧನಾ ಮುಖ್ಯಸ್ಥನಾದನು. ಬೆಲ್ ಪ್ರಯೋಗಾಲಯದಲ್ಲಿರುವಾಗ, ವಿಲ್ಸನ್, ಪೆಂಜಿಯಾಸ್ ಜೊತೆಗೆ, ಉಪಗ್ರಹಗಳ ಸಂಪರ್ಕಕ್ಕಾಗಿ ನಿರ್ಮಿಸಲಾಗಿದ್ದ, ಬೃಹತ್ ರೇಡಿಯೋ ದೂರದರ್ಶಕಗಳನ್ನು ಬಳಸಿ ಪ್ರಯೋಗಗಳನ್ನು ಹಮ್ಮಿಕೊಂಡನು. ಇವರು 1964ರಲ್ಲಿ ಎಲ್ಲಾ ದಿಕ್ಕುಗಳಲ್ಲಿ ಒಂದೇ ರೀತಿಯಲ್ಲಿ ಒಂದೇ ತೀವ್ರತೆಯಲ್ಲಿರುವ ವಿಕಿರಣದ ಹಿನ್ನೆಲೆಯನ್ನು ಗುರುತಿಸಿದರು. ವಿಕಿರಣದ ಚೈತನ್ಯ ವಿತರಣೆ 3.5 ಕೆಲ್ವಿನ್ ತಾಪಮಾನದಲ್ಲಿರುವ ಕಪ್ಪುಕಾಯಕ್ಕೆ ಸಮನಾಗಿದ್ದಿತು. ಡಿಕ್ ಹಾಗೂ ಪಿ.ಜೆ.ಇ ಪೀಬಲ್ಸ್ ಈ ವಿಕಿರಣ ಮಹಾಬಾಜಣೆಯ (BIG BANG) ಉಳಿಕೆಯೆಂದು ಹೇಳಿದರು. ಈ ಹಿನ್ನೆಲೆ ವಿಕಿರಣದ ಅಸ್ತಿತ್ವವನ್ನು ಗ್ಯಾಮೊವ್, ಆಲ್ಫರ್ ಹಾಗೂ ಆರ್.ಸಿ.ಹೆರ್ಮಾನ್ ಮುನ್ಸೂಚಿಸಿದ್ದರು. ವಿಲ್ಸನ್ ಹಾಗೂ ಪೆಂಜಿಯಾಸ್ 1978ರ ನೊಬೆಲ್ ಪ್ರಶಸ್ತಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/14/2019