ವೀಯ್ನ್‍ಬರ್ಗ್, ಸ್ಟೀವೆನ್ (1933--) ೧೯೭೯ ಅಸಂಸಂ-ಭೌತಶಾಸ್ತ್ರ- ವೈದ್ಯುತ್ ಕಾಂತೀಯ ಮತ್ತು ದುರ್ಬಲ ಬೈಜಿಕ ಬಲಗಳ ಐಕ್ಯತಾ ಸಿದ್ಧಾಂತ ನೀಡಿದಾತ.
ವೀಯ್ನ್‍ಬರ್ಗ್‍ನ ತಂದೆ ನ್ಯೂಯಾರ್ಕ್‍ನ ನ್ಯಾಯಾಲಯದಲ್ಲಿ ಬೆರಳಚ್ಚುಗಾರನಾಗಿದ್ದನು. ಕಾರ್ನೆಲ್ ಹಾಗೂ ಪ್ರಿನ್ಸ್’ಟನ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪೂರೈಸಿದ ವೀಯ್ನ್‍ಬರ್ಗ್ ಬರ್ಕ್‍ಲಿ, ಎಂಐಟಿಗಳಲ್ಲಿ ವೃತ್ತಿ ಜೀವನ ಸಾಗಿಸಿದನು. 1986ರಲ್ಲಿ ಆಸ್ಟಿನ್‍ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. 1967ರಲ್ಲಿ ವೀಯ್ನ್‍ಬರ್ಗ್ ಪರಾಮರ್ಶನ ಬದಲಾವಣೆಗೆಗೆ ಸಂಬಂಧಿಸಿದ ಸಮಸ್ಯೆಯ ಅಧ್ಯಯನ ಪ್ರಾರಂಭಿಸಿದನು. ವೈದ್ಯುತ್ ಕಾಂತೀಯ ಹಾಗೂ ಶೈಥಿಲ್ಯಕ್ಕೆ ಕಾರಣವಾದ ಕ್ಷೀಣ ಬೈಜಿಕ ಬಲಗಳ ಮದ್ಯದಲ್ಲಿ ನೂರು ಕೋಟಿಯಷ್ಟು ವ್ಯತ್ಯಾಸವಿದೆ. ವೀಯ್ನ್‍ಬರ್ಗ್ ನೀಡಿದ ಸಿದ್ಧಾಂತದಲ್ಲಿ ಇವೆರಡರ ಮಧ್ಯೆ ಸಂಬಂಧವನ್ನು ಸ್ಪಷ್ಟಗೊಳಿಸಲಾಯಿತು. ಈ ಸಿದ್ಧಾಂತ ಭಾರವಾದ ಅವಿಷ್ಟರಹಿತ ಕಣ Z0 ಬೋಸಾನ್ ವಿನಿಮಯಗೊಂಡು ಕಣಗಳ ಮಧ್ಯದಲ್ಲಿ ಉಗಮವಾಗುವ ಆಕರ್ಷಕ ಬಲವನ್ನು ಇದು ಮುನ್ಸ್ಸೂಚಿಸಿತು. ಇದು ತಟಸ್ಥ ಪ್ರವಾಹಗಳ ಮುನ್ಸೂಚನೆ ನೀಡಿತು. ಈ ಕಣ, ಮುಕ್ತವಾಗಿರುವಾಗ ಅತ್ಯಲ್ಪ ಆಯಸ್ಸನ್ನು ಹೊಂದಿರುತ್ತದೆ. ಇಂತಹ ಕಣವನ್ನು 1983ರಲ್ಲಿ ಜೀನೇವಾದಲ್ಲಿನ ಸಿ.ಎ.ಅರ್.ಎನ್ ಪ್ರಯೋಗಾಲಯದಲ್ಲಿ ಪ್ರೋಟಾನ್-ಪ್ರತಿ ಕಣಗಳ ತಾಡನದಿಂದ ಪಡೆಯಲಾಯಿತು,. ಇದು ವೀಯ್ನ್‍ಬರ್ಗ್ ಸಿದ್ಧಾಂತಗಳಿಗೆ ಪ್ರಬಲ ಸಾಕ್ಷಾಯೊದಗಿಸಿತು. ಇಂತಹುದೇ ಸಿದ್ಧಾಂತವನ್ನು ಪಾಕಿಸ್ತಾನದ ವಿಜ್ಞಾನಿ ಅಬ್ದಸ್ ಸಲಾಂ ಸಹ ನೀಡಿದನು. ಆದುದರಿಂದ ಇದನ್ನು ವೀಯ್ನ್‍ಬರ್ಗ್ ಸಲಾಂ ಸಿದ್ಧಾಂತವೆಂದು ಕರೆಯಲಾಗುತ್ತಿದೆ. ಗ್ಲಾಷೋನಿಂದ ಈ ಸಿದ್ಧಾಂತ ಪರಿಪೂರ್ಣಗೊಂಡಿತು. 1979ರಲ್ಲಿ ವೀಯ್ನ್‍ಬರ್ಗ್, ಗ್ಲಾಷೋ ಹಾಗೂ ಸಲಾಂ ನೊಬೆಲ್ ಪ್ರಶಸ್ತಿ ಪಡೆದ
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/17/2020