ರಿಕ್ಟರ್, ಬರ್ಟನ್ (1931--) 1976 ಭೌತಶಾಸ್ತ್ರ- ಪ್ರಯೋಗಗಳಿಂದ ಚಾರ್ಮ್ ಕ್ವಾರ್ಕ್‍ಗಳ ಅಸ್ತಿತ್ವವನ್ನು ಪ್ರತಿಪಾದಿಸಿದಾತ. ಮೂಲ: ವಿಜ್ಞಾನಿಗಳು
ರಿಕ್ಟರ್ ಮೆಸಾಚುಸೆಟ್ಸ್ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಶಾಸ್ತ್ರದ ಪದವಿ ಪಡೆದು, ಸ್ಟ್ಯಾನ್’ಫೋರ್ಡ್ ವಿಶ್ವವಿದ್ಯಾಲಯದ ಅಧಿಕ ಚೈತನ್ಯ ಭೌತಶಾಸ್ತ್ರದ ಪ್ರಯೋಗಾಲಯ ಸೇರಿದನು. 1967ರಲ್ಲಿ ಇಲ್ಲಿಯೇ ಪ್ರಾಧ್ಯಾಪಕನಾದನು. ಅಧಿಕ ಚೈತನ್ಯದಲ್ಲಿರುವ ಪಾಸಿಟ್ರಾನ್ ಹಾಗೂ ಎಲೆಕ್ಟ್ರಾನ್‍ಗಳನ್ನು ಸಂಘಟಿಸಿದಾಗ ಪ್ರಾಥಮಿಕ ಕಣಗಳು ದಕ್ಕುತ್ತವೆ. ಇದಕ್ಕಾಗಿ ರಿಕ್ಟರ್ ಸ್ಟ್ಯಾನ್’ಫೋರ್ಡ್ ಪಾಸಿಟ್ರಾನ್-ಎಲೆಕ್ಟ್ರಾನ್ ಆ್ಯಕ್ಸಿಲೆರೇಟಿಂಗ್ ರಿಂಗ್ ಹೆಸರಿನ ಯಂತ್ರ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದನು. 1974ರಲ್ಲಿ ಈ ಯಂತ್ರ ಬಳಸಿ ರಿಕ್ಟರ್ ನೇತೃತ್ವದ ತಂಡ ಜೆ ಅಥವಾ ಸೈ ಹ್ಯಾಡ್ರಾನ್‍ಗಳನ್ನು ಪಡೆಯಿತು. ಇದು ಮೊದಲು ಗುರುತಿಸಲಾದ ಉಪಪರಮಾಣವಿಕ ಕಣ (SUBATOMIC PARTICLE). ಇಂತಹ ಕಣಗಳಿಗೆ ಬಹು ಅಪರೂಪದ ಗುಣಗಳಿದ್ದು ಗ್ಲಾಷೋ ಮುನ್ಸೂಚಿಸಿದ ಚಾರ್ಮ್ ಕ್ವಾರ್ಕ್‍ಗಳ ಅಸ್ತಿತ್ವಕ್ಕೆ ಬೆಂಬಲ ದೊರೆಯಿತು. ಇದಕ್ಕೆ ಸಂಬಂಧಿಸಿದ ಬೇರೆ ಕಣಗಳು ಅಲ್ಪಾವಧಿಯಲ್ಲೇ ಪತ್ತೆಯಾದವು. ಇವು ಕಣ ಭೌತಶಾಸ್ತ್ರದ ಸಿದ್ಧಾಂತಗಳು ಹೊಸ ದೃಷ್ಟಿ ತಳೆಯಬೇಕಾದ ಅನಿವಾರ್ಯತೆಯನ್ನು ತಂದವು. ಬ್ರೂಕ್‍ಹೇವೆನ್ ಪ್ರಯೋಗಾಲಯದಲ್ಲಿದ್ದ ಸ್ಯಾಮ್ಯುಯೆಲ್ ಟಿಂಗ್ ಇದೇ ಸಮಯದಲ್ಲಿ ಸ್ವತಂತ್ರವಾಗಿ ಜೆ/ಪೈ ಮಸಾನ್‍ಗಳನ್ನು ಪಡೆದಿದ್ದನು. 1976ರಲ್ಲಿ ರಿಕ್ಟರ್ ಹಾಗೂ ಟಿಂಗ್ ನೊಬೆಲ್ ಪ್ರಶಸ್ತಿ ಪಡೆದರು
ಕೊನೆಯ ಮಾರ್ಪಾಟು : 4/23/2020