ರೈಲ್ (ಸರ್) ಮಾರ್ಟಿನ್ (1918-1984) ೧೯೭೪ ಬ್ರಿಟನ್-ಖಗೋಳಶಾಸ್ತ್ರ- ರೇಡಿಯೋ ಆಗಸದ ವಿವರವಾದ ನಕಾಶೆ ಪ್ರಕಟಿಸಿದ ಮೊದಲಿಗ.
ಜಾನ್ಸಕಿ ಹಾಗೂ ರೆಬೆರ್ ಅಂತರಿಕ್ಷದ ರೇಡಿಯೋ ಆಕರಗಳನ್ನು ಪತ್ತೆ ಹಚ್ಚಿದ್ದರು. ಎರಡನೇ ಜಾಗತಿಕ ಯುದ್ದದ ನಂತರ ರೈಲ್, 1950ರಲ್ಲಿ ಕೇಂಬ್ರಿಜ್‍ನಿಂದ ಅಂತರಿಕ್ಷದ ರೇಡಿಯೋ ಆಕರಗಳನ್ನು ಪತ್ತೆ ಹಚ್ಚಲು ಪ್ರಾರಂಭಿಸಿ, 1965ರ ವೇಳೆಗೆ 5000ಕ್ಕೂಅಧಿಕ ತಾಣಗಳನ್ನು ಗುರುತಿಸಿದ್ದನು. ಇವುಗಳ ಸ್ಥಾನ ಸೂಚಿಸುವ ನಕಾಶೆ ತಯಾರಿಸಿದನು. ಇದರಿಂದ ಕ್ಪೆಸಾರ್, ಪಲ್ಸಾರ್‍ಗಳ ಅಧ್ಯಯನಕ್ಕೆ ನೆರವೊದಗಿತು. ವಿಶ್ವದ ಬಹು ದೂರದ ತಾಣಗಳು, ಸನಿಹದ ತಾಣಗಳಿಂದ ಬೇರೆಯಾಗಿ ಕಾಣುವುವೆಂದು ರೈಲ್ ತೋರಿಸಿದನು. ರೈಲ್ ಪ್ರಯೋಗಗಳು ಮಹಾಬಾಜಣೆ (BIG BANG) ಸಿದ್ಧಾಂತಕ್ಕೆ ಬೆಂಬಲವೊದಗಿಸಿ, ಹಲವಾರು ಕಾರಣಗಳಿಂದ ಹೊಯ್ಲ್ ಜೊತೆಗಿನ ವಿವಾದಕ್ಕೆ ಕಾರಣವಾದವು. 1972ರಲ್ಲಿ ಅಸ್ಟ್ರೋನಾಮರ್ ರಾಯಲ್ ಎಂದು ಗೌರವಿತನಾದ ರೈಲ್ 1974ರ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/13/2019