ರೇನ್‍ವಾಟರ್, ಲಿಯೋ ಜೇಮ್ಸ್ (1917-1986) ೧೯೭೫ ಅಸಂಸಂ-ಭೌತಶಾಸ್ತ್ರ- ಪರಮಾಣುವಿನ ಎರಡು ವಿಭಿನ್ನ ಸೈದ್ಧಾಂತಿಕ ಮಾದರಿಗಳನ್ನು ಐಕ್ಯಗೊಳಿಸಿದಾತ.
ಕ್ಯಾಲ್‍ಟೆಕ್‍ನಲ್ಲಿ ಭೌತಶಾಸ್ತ್ರ ವ್ಯಾಸಂಗ ಮಾಡಿದ ರೇನ್‍ವಾಟರ್, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸೇರಿ, 1952ರಲ್ಲಿ ಪ್ರಾಧ್ಯಾಪಕನಾದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಅಣ್ವಸ್ತ್ರ ತಯಾರಿಕೆಯ ಮ್ಯಾನ್‍ಹಟ್ಟನ್ ಯೋಜನೆಯಲ್ಲಿ ಭಾಗವಹಿಸಿದ್ದನು. 1950ರ ಅವಧಿಯಲ್ಲಿ ಪರಮಾಣು ರಚನೆಯನ್ನು ಕುರಿತಾಗಿ ಎರಡು ವಿಭಿನ್ನ ಸಿದ್ಧಾಂತಗಳಿದ್ದವು. ಇವೆರಡಕ್ಕೂ ಪ್ರಾಯೋಗಿಕ ಫಲಿತಾಂಶದ ಬೆಂಬಲವಿದ್ದಿತು. ಒಂದು ಮಾದರಿಯಲ್ಲಿ ಬೈಜಿಕ ಕಣಗಳು ಸಂಕೇಂದ್ರಿತ ಶಲ್ಕಗಳಲ್ಲಿ ಜೋಡಣೆಗೊಂಡಿದ್ದರೆ ಮತ್ತೊಂದು ಮಾದರಿಯಲ್ಲಿ ಅದನ್ನು ದ್ರವದ ಹನಿಗೆ ಸಮಾನವಾಗಿ ಕಾಣಲಾಗಿದ್ದಿತು. ಆದರೆ ಕೆಲವು ಪರಮಾಣು ಬೀಜಗಳಲ್ಲಿ ವೈದ್ಯುತ್ ಕ್ರಿಯಾಶೀಲತೆ ಸಮಾಂಗೀಯವಲ್ಲವೆಂದು ಪ್ರಯೋಗಗಳು ತೋರಿಸಿದ್ದವು. ಪರಮಾಣುವಿನ ಎರಡೂ ಮಾದರಿಗಳು ಇದನ್ನು ವಿವರಿಸುವಲ್ಲಿ ವಿಫಲಗೊಂಡಿದ್ದವು. ರೇನ್‍ವಾಟರ್, 1950ರಲ್ಲಿ ನೀಲ್ಸ್ ಬೊಹ್ರ್‍ನ ಮಗನಾದ ಅಗೆ ಬೋಹ್ರ್ ಮತ್ತು ಮಾಲ್‍ಸನ್ ಜೊತೆಗೂಡಿ ಇವೆರಡರ ಪರಿಕಲ್ಪನೆಗಳನ್ನು ಸಮನ್ವಯಗೊಳಿಸಿದನು. ಇದು ಎಲ್ಲ ಬಗೆಯ ಪ್ರಯೋಗಗಳಫಲಿತಾಂಶಗಳಿಗೂ ಸಮರ್ಪಕವಾಗಿರುವುದನ್ನು ಸಾಬೀತುಗೊಳಿಸಿದ್ದಕ್ಕಾಗಿ ಈ ಮೂವರು 1975ರ ನೊಬೆಲ್ ಪ್ರಶಸ್ತಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/30/2020