ಮಾಟ್, ಸರ್ ನೆವಿಲ್ ಫಾ್ರನ್ಸಿಸ್ (1905--) ೧೯೭೭ ಬ್ರಿಟನ್-ಭೌತಶಾಸ್ತ್ರ- ಕ್ರಮವಿಹೀನ ಸಾಮಾಗ್ರಿಗಳ ಎಲೆಕ್ಟ್ರಾನಿಕ್ ರಚನೆ ಅನಾವರಣಗೊಳಿಸಿದಾತ.
ಮಾಟ್‍ನ ತಂದೆ ತಾಯಿಗಳಿಬ್ಬರೂ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಕೆಲಸಕ್ಕಿದ್ದರು. ಮಾಟ್ ಕೇಂಬ್ರಿಜ್‍ನಲ್ಲಿ ಗಣಿತ ವ್ಯಾಸಂಗ ಮಾಡಿ. ಅಲ್ಲಿಯೇ ಉಪನ್ಯಾಸಕನಾಗಿ, ಫೆಲೋ ಆಗಿ ಗುರುತಿಸಿಕೊಂಡನು. ಕೆಲಕಾಲ ರುದರ್ಫೋರ್ಡ್ ಹಾಗೂ ಬೋಹ್ರ್ ಜೊತೆಗೆ ಕೆಲಸ ಮಾಡಿದನು. ಎಚ್. ಮ್ಯಾಸ್ಸೆಯ ಸಂಗಡ ಕಣಗಳ ಚದುರಿಕೆ ಕುರಿತು ಸಂಶೋಧಿಸಿ ಹೊಸ ಕ್ಷೇತ್ರವೊಂದಕ್ಕೆ ಭದ್ರ ಬುನಾದಿ ಹಾಕಿದನು. 28ನೇ ವಯಸ್ಸಿನಲ್ಲಿ ಬ್ರಾಸ್ಟಲ್‍ನಲ್ಲಿ ಪ್ರಾಧ್ಯಾಪಕನಾದ ಮಾಟ್, ಎಚ್.ಜೋನ್ಸ್‍ನ ಪ್ರಭಾವದಿಂದ ಘನಸ್ಥಿತಿ ಭೌತಶಾಸ್ತ್ರದಲ್ಲಿ ಆಸಕ್ತಿ ತಳೆದನು. ಜೇಮ್ಸ್‍ನೊಂದಿಗೆ ಲೋಹ ,ಮಿಶ್ತ ಲೋಹಗಳನ್ನು ಕುರಿತಾಗಿ ಮತ್ತು ಅರ್ ಡಬ್ಲ್ಯೂ .ಗರ್ನಿಯೊಂದಿಗೆ ಅಯಾನಿಕ ಸ್ಫಟಿಕಗಳ ಬಗೆಗೆ ಪ್ರಯೋಗಗಳನ್ನು ನಡೆಸಿದನು. ಈ ಪ್ರಯೋಗಗಳಿಂದ ಸಾಮಾಗ್ರಿಗಳಲ್ಲಿನ ಸ್ಥಾನ ಪಲ್ಲಟ ಹಾಗೂ ಅವುಗಳ ಸತ್ತ್ವಗಳ ಬಗೆಗೆ ಹೊಸ ವಿಚಾರಗಳು ತಿಳಿದು ಬಂದವು. ಸ್ಪಟಿಕಗಳಲ್ಲದ ಅರೆವಾಹಕಗಳ ಅರಿವಿಗೆ ಮಾಟ್ ಶ್ರಮಿಸಿದನು. ಮಾಟ್‍ನಿಂದಾಗಿ ಘನಸ್ಥಿತಿ ಭೌತಶಾಸ್ತ್ರ ಮತ್ತು ಸಾಮಾಗ್ರಿಗಳ ವಿಜ್ಞಾನಗಳಿಗೆ ಹೊಸ ಹುರುಪು ಬಂದಿತು. 1962ರಲ್ಲಿ ನೈಟ್ ಪದವಿಗೇರಿದ ಮಾಟ್, 1977ರ ನೊಬೆಲ್ ಪ್ರಶಸ್ತಿಯನ್ನು ಫಿಲೆಫ್ವಾರೆನ್ ಆ್ಯಂಡರ್‍ಸನ್ ಹಾಗೂ ಜಾನ್ ಹಾಸ್‍ಬ್ರಕ್ ವ್ಯಾನ್ ವ್ಲೆಕ್‍ರೊಂದಿಗೆ ಹಂಚಿಕೊಂಡನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020