ಬೆಂಜಮಿನ್, ರಾಯ್ ಮಾಟೆಲ್‍ಸನ್ (1926--) ೧೯೭೫ ಅಸಂಸಂ-ಭೌತಶಾಸ್ತ್ರ-ಬೈಜಿಕ ಭೌತಶಾಸ್ತ್ರದ ಮುಂಚೂಣಿಗ.
ಬೆಂಜಮಿನ್, ಇಂಜಿನಿಯರ್’ನ ಮೂರು ಮಕ್ಕಳಲ್ಲಿ ಎರಡನೆಯವನು. ಇಲಿನಾಯ್ ರಾಜ್ಯದ ಲಗ್ರಾಂಜ್ ಹಳ್ಳಿಯಲ್ಲಿ 9 ಜುಲೈ 1926 ರಂದು ಬೆಂಜಮಿನ್ ಜನನವಾಯಿತು. ಲಂಗ್ರಾಂಜ್‍ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದನು. ಈ ಕಾಲಕ್ಕೆ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ಯುಎಸ್ ನೇವಿಯಡಿಯಲ್ಲಿ ಪಡ್ರ್ಯೂ ವಿಶ್ವವಿದ್ಯಾಲಯಕ್ಕೆ ವಿ 12 ಕಾರ್ಯಕ್ರಮದಡಿಯಲ್ಲಿ ಸೇರಿಸಲ್ಪಟ್ಟನು. 1947ರಲ್ಲಿ ಇಲ್ಲಿಂದ ವಿಜ್ಞಾನದ ಪದವಿಯೊಂದಿಗೆ ಹೊರಬಂದನು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಗಳಿಸಿ ಜೂಲಿಯನ್ ಷ್ವೈಂಜರ್ ಮಾರ್ಗದರ್ಶನದಲ್ಲಿ ಬೈಜಿಕ ಭೌತಶಾಸ್ತ್ರದಲಿ ಡಾಕ್ಟರೇಟ್ ಗಳಿಸಿದನು. ಹಾರ್ವರ್ಡ್‍ನಿಂದ ಪ್ರವಾಸಿ ಫೆಲೋಷಿಪ್ ಗಳಿಸಿ, 195ರಿಂದ ಒಂದು ವರ್ಷದ ಕಾಲ ಕೊಪೆನ್‍ಹೇಗ್‍ನ ಸೈದ್ಧಾಂತಿಕ ಭೌತಶಾಸ್ತ್ರದ ನೀಲ್ಸ್ ಬೋಹ್ರ್ ಸಂಸ್ಥೆಯಲ್ಲಿ ಸಂಶೋಧನೆ ಮುಂದುವರಿಸಿದನು. ಅಸಂಸಂಗಳ ಪರಮಾಣು ಶಕ್ತಿ ವಿಭಾಗದಿಂದ ದೊರೆತ ಫೆಲೋಷಿ¥SÓÏನಿಂದಾಗಿ, ಇನ್ನೆರಡು ವರ್ಷ ಕೊಪೆನ್‍ಹೇಗನಲ್ಲಿರುವ ಅವಕಾಶ ಬೆಂಜಮಿನ್‍ಗೆ ದಕ್ಕಿತು. ಈ ಅವಧಿಯಲ್ಲಿ ಬೈಜಿಕ ಸಂಶೋಧನೆಗೆ ಸ್ಥಾಪಿತವಾಗಿರುವ ಸಿ.ಇ.ಆರ್.ಎನ್.ಸಂಸ್ಥೆಯಲ್ಲಿ ಸಂಶೋಧಕನ ಸ್ಥಾನ ದಕ್ಕಿತು. 1959ರಲ್ಲಿ ಕೊಪೆನ್‍ಹೇಗ್‍ನಲ್ಲಿ ಪ್ರಾರಂಭವಾದ ನಾರ್ಡಿಕ್ ಇನ್ಸ್ಟಿಟ್ಯೂಟ್ ಫಾರ್ ಥಿಯೋರೆಟಿಕಲ್ ಅಟಾಮಿಕ್ ಫಿಸಿಕ್ಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾದನು. 1959 ರಿಂದ ಬಕ್ರ್ಲೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾದನು. ಬೋಹ್ರ್ ಸಂಸ್ಥೆಯಲ್ಲಿ ನೀಲ್ಸ್ ಬೋಹ್ರ್‍ನ ಮಗನಾದ ಆಗೆ ಬೋಹ್ರ್ ಜೊತೆಗೆ ಬೈಜಿಕ ಭೌತಶಾಸ್ತ್ರದಲ್ಲಿ ನಡೆಸಿದ ಸಂಶೋಧನೆಗಳಿಗಾಗಿ ಬೆಂಜಮಿನ್ 1975ರ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/9/2020