ಬೊಹ್ರ್ , ಆಗೆ ನೀಲ್ಸ್–(1922--) ೧೯೭೫ ಡೆನ್ಮಾರ್ಕ್-ಭೌತಶಾಸ್ತ್ರ-ಪರಮಾಣುವಿನ ಬೀಜದಲ್ಲಿ ಕಣವೊಂದರ ಚಲನೆ ಹಾಗೂ ಕಣಗಳ ಸಮಷ್ಟಿ ಚಲನೆಯ ಮಧ್ಯದ ಸಂಬಂಧವನ್ನು ನಿರ್ಧರಿಸಿದಾತ.
ಅಗೆ 19 ಜೂನ್ 1922ರಂದು ಕೊಪೆನ್‍ಹೆಗ್‍ನಲ್ಲಿ ವಿಶ್ವ ವಿಖ್ಯಾತ ವಿಜ್ಞಾನಿ ನೀಲ್ಸ್ ಬೊಹ್ರ್‍ನ ಮಗನಾಗಿ ಜನಿಸಿದನು. ಬಾಲ್ಯದಲ್ಲಿ ತಂದೆಯನ್ನು ಕಾಣಲು ಬರುತ್ತಿದ್ದ ಹಿರಿಯ ವಿಜ್ಞಾನಿಗಳ ಅಕ್ಕರೆ ಹಾಗೂ ಬಾಂಧವ್ಯದ ಸವಿ ಅಗೆಗೆ ದಕ್ಕಿತು. 1940ರಲ್ಲಿ ಜರ್ಮನಿ, ಡೆನ್ಮಾರ್ಕ್‍ನ್ನು ಆಕ್ರಮಿಸಿದ ಕೆಲ ತಿಂಗಳುಗಳಲ್ಲೇ ಅಗೆ ಕೊಪೆನ್‍ಹೇಗ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿಗೆ ಸೇರಿದನು. ಈ ಮೊದಲೇ ವೈಜ್ಞಾನಿಕ ಸಂಶೋಧನೆಗಳ ಲೇಖನ ಬರೆಯುವಲ್ಲಿ ಮುದ್ರಿಸುವಲ್ಲಿ ತಂದೆಗೆ ನೆರವಾಗುತ್ತಿದ್ದನು. 1943ರಲ್ಲಿ ನಾಝಿಗಳ ಬಂಧನದಿಂದ ತಪ್ಪಿಸಿಕೊಳ್ಳಲು ಬೊಹ್ರ್ ಕುಟುಂಬ ಸ್ವೀಡನ್‍ಗೆ ಪಲಾಯನಗೈದಿತು. ಸ್ವೀಡನ್‍ನಲ್ಲಿ ಇವರಿಗೆ ಬಹು ಆದರದ ಸ್ವಾಗತ ದಕ್ಕಿತು. ನಂತರ ಅಗೆಯ ತಂದೆ ನೀಲ್ಸ್ ಇಂಗ್ಲೇಂಡಿಗೆ ಹೋಗಿ ಪರಮಾಣು ಶಕ್ತಿಯ ಯೋಜನೆಯಲ್ಲಿ ಪಾಲ್ಗೊಂಡನು. ಯುದ್ದ ಮುಗಿದ ನಂತರ 1946ರಲ್ಲಿ ಡೆನ್ಮಾರ್ಕ್‍ಗೆ ಮರಳಿ, ಅಗೆ ತನ್ನ ಪದವಿ ಪೂರ್ಣಗೊಳಿಸಿದನು. 1948ರಲ್ಲಿ ವೈಜ್ಞಾನಿಕ ತಂಡದ ಸದಸ್ಯನಾಗಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿದ್ದ ವಿಜ್ಞಾನಿ ಐ.ಐ.ರಬಿಯನ್ನು ಭೇಟಿ ಮಾಡಿದನು. ಇದರ ಫಲಿತಾಂಶವಾಗಿ ಒಂದು ವರ್ಷ ಕಾಲ ಇಲ್ಲಿ ಡ್ಯುಟೇರಿಯಂನ ಅತಿ ಸೂಕ್ಷ್ಮವಾದ ರಾಚನಿಕ ಸ್ವರೂಪ ಕುರಿತು ಸಂಶೋಧನೆ ನಡೆಸಿದನು. ನಂತರ ತಾಯ್ನಾಡಿಗೆ ಮರಳಿ ನೀಲ್ಸ್ ಬೊಹ್ರ್ ಸಂಸ್ಥೆಯಲ್ಲಿ ನೆಲೆಸಿದನು. ಭೌತಶಾಸ್ತ್ರದ ಸೈದ್ಧಾಂತಿಕ ಹಾಗೂ ಪ್ರಯೋಗದ ಕ್ಷೇತ್ರಗಳಲ್ಲಿ ಅಗೆ ಮಧ್ಯವರ್ತಿ ಕಾರ್ಯ ನಿರ್ವಹಿಸಿದನು. ಪರಮಾಣುವಿನ ಬೀಜದಲ್ಲಿ ಕಣವೊಂದರ ಚಲನೆ ಹಾಗೂ ಕಣಗಳ ಸಮಷ್ಟಿ ಚಲನೆಯ ಮಧ್ಯದ ಸಂಬಂಧವನ್ನು ನಿರ್ಧರಿಸಿ, ಇದರ ಆಧಾರದ ಮೇಲೆ ಪರಮಾಣುವಿನ ರಚನೆಯನ್ನು ವಿವರಿಸುವ ಸಿದ್ಧಾಂತವನ್ನು ಮಂಡಿಸಿದನು. ಇದಕ್ಕಾಗಿ ಅಗೆ 1974ರಲ್ಲಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/17/2020