ಪೆಂಜಿಯಾಸ್, ಅರ್ನೋ ಅ್ಯಲನ್ (1933--) ೧೯೭೮ ಅಸಂಸಂ-ಖಗೋಳಶಾಸ್ತ್ರ- 3ಕೆ ಸೂಕ್ಷ್ಮ ತರಂಗಗಳ ಹಿನ್ನೆಲೆ ವಿಕಿರಣತೆ ಅನಾವರಣಗೊಳಿಸಿದಾತ.
ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಅಸಂಸಂಗಳಿಗೆ ಪಲಾಯನಗೊಂಡ ಕುಟುಂಬದಲ್ಲಿ ಪೆಂಜಿಯಾಸ್ ಜನಿಸಿದನು. ನ್ಯೂಯಾರ್ಕ್‍ನಲ್ಲಿ ವ್ಯಾಸಂಗ ಮಾಡಿದ ಪೆಂಜಿಯಾಸ್ 1961ರಲ್ಲಿ ಬೆಲ್ ಲ್ಯಾಬ್‍ಗೆ ಸೇರಿದನು. ಮಹಾಬಾಜಣೆ (BIG BANG) ವಾದದ ಪ್ರಕಾರ ಪರಮಾದಿ ಪರಮಾಣು ಅಸ್ಫೋಟಗೊಂಡು , ಈ ವಿಶ್ವದ ಉಗಮ ಪ್ರಾರಂಭವಾಗಿದೆ,. ಇದರ ಆಧಾರದ ಮೇಲೆ 1948ರಲ್ಲಿ ಗ್ಯಾಮೋವ್, ಆಲ್ಫರ್, ಹಾಗೂ ಆರ್.ಹೆರ್ಮಾನ್, ಇಂತಹ ಮಹಾಬಾಜಣೆಯಾದಾಗ ಉದಿಸಿದ ವಿಕಿರಣ, ವಿಶ್ವದಾದ್ಯಂತ ಹರಡಿದ್ದು, ಕಾಲಾನುಕ್ರಮೇಣ ಇದು ತಂಪಾಗಿ, ಸರಿ ಸುಮಾರು 5ಕೆ ತಾಪಮಾನದಲ್ಲಿರಬಹುದೆಂದು ಸೂಚಿಸಿದರು. 1964ರಲ್ಲಿ ಡಿಕೆ ಹಾಗೂ ಪಿ.ಜೆ.ಪಿಬ್ಲ್ಸ್ ಇವರ ವಾದವನ್ನು ವಿಸ್ತರಿಸಿದರು. ಇದೇ ಸಮಯದಲ್ಲಿ ಇವರಿಗರಿವಿಲ್ಲದಂತೆ ಪೆಂಜಿಯಾಸ್ ಹಾಗೂ ಆರ್.ಡಬ್ಲ್ಯು.ವಿಲ್ಸನ್ ಬೆಲ್ ಪ್ರಯೋಗಾಲಯದ ಯೋಜನೆಯೊಂದರಲ್ಲಿ ನ್ಯೂಜೆರ್ಸಿಯಲ್ಲಿ ಸ್ಥಾಪಿಸಿದ್ದ 6ಮೀ ವ್ಯಾಸದ ರೇಡಿಯೋ ದೂರದರ್ಶಕದ ಮೂಲಕ ಆಕಾಶಗಂಗೆಯನ್ನು ಜಾಲಾಡುತ್ತಿದ್ದರು. ಹೀಗಿರುವಾಗ 7 ಸೆಂ ಮೀ. ತರಂಗಾಂತರದಲ್ಲಿ (WAVE LENGTH) ಅವರಿಗೆ ಭಾರಿ ಬಾಹ್ಯ ಆಡಚಣೆಗಳುಂಟಾದವು. ಇವುಗಳಿಗೆ ಯಾವುದೇ ಭೂಮೂಲವಾದ ಆಕರವನ್ನು ಗುರುತಿಸಲಾಗಲಿಲ್ಲ,. ಈ ತರಂಗ ಸಂಕೇತಗಳು ಎಲ್ಲ ದಿಶೆಗಳಿಂದಲೂ ಒಂದೇ ಬಗೆಯ ಸಾಮಥ್ರ್ಯ ಹೊಂದಿದ್ದು, ಕಪ್ಪು ಕಾಯವೊಂದಎಂದ ಹೊಮ್ಮುವ 3.5ಕೆ ತಾಪಮಾನದ ವಿಕಿರಣಗಳಿಗೆ ಸಮವಾಗಿದ್ದವು. ಈ ಅನಾವರಣದಿಂದ ಮಹಾಬಾಜಣೆ ಸಿದ್ಧಾಂತಕ್ಕೆ ಪ್ರಬಲವಾದ ಬಾಹ್ಯ ಸಾಕ್ಷಿ ದಕ್ಕಿದಂತಾಯಿತು. ಪೆಂಜಿಯಾಸ್ ಹಾಗೂ ವಿಲ್ಸನ್, 1978ರ ನೊಬೆಲ್ ಪ್ರಶಸ್ತಿ ಗಳಿಸಿದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019