ಟಿಂಗ್, ಸ್ಯಾಮುಯೆಲ್ ಖಾವೊ ಚುಂಗ್ (1936--) ೧೯೭೬ ಭೌತಶಾಸ್ತ್ರ- ಜೆ/ಪೈ ಕಣಗಳನ್ನು ಅನಾವರಣಗೊಳಿಸಿದಾತ.
ಟಿಂಗ್ ಅಸಂಸಂಗಳಲಿ ಜನಿಸಿದನಾದರೂ, ಅವನು ಆರಂಭಿಕ ಶಿಕ್ಷಣ ಪಡೆದದ್ದು ಚೀನಾ ಹಾಗೂ ತೈವಾನ್‍ಗಳಲ್ಲಿ. ಪದವಿ ಪಡೆದದ್ದು ಮಿಷಿಗನ್ ವಿಶ್ವವಿದ್ಯಾಲಯದಿಂದ ಜೆನೆವಾದಲ್ಲಿನ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ ಸಂಸ್ಥೆಯಲ್ಲಿ ತನ್ನ ಸಂಶೋಧನಾ ಜೀವನ ಪ್ರಾರಂಭಿಸಿದ ಟಿಂಗ್ 29ನೇ ವಯಸ್ಸಿನಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಹ್ಯಾಂಬರ್ಗ್‍ನಲ್ಲಿ ಜರ್ಮನಿಯ ಸಿಂಕ್ಲೋಟ್ರಾನ್ ಯೋಜನೆಯ ಮುಂದಾಳತ್ವವನ್ನು ಟಿಂಗ್ ವಹಿಸಿದ್ದನು. 1967 ರಿಂದ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಿದನು. ಬ್ರೂಕ್‍ಹೆವೆನ್ ನ್ಯಾಷನಲ್ ಲ್ಯಾಬೋರೇಟರಿಯಲ್ಲಿ ಟಿಂಗ್, ಬೆರಿಲಿಯಂ ಲಕ್ಷ್ಯದ ಮೇಲೆ ಪ್ರೋಟಾನ್‍ಗಳನ್ನು ಹಾಯಿಸಿ, ಆ ಕ್ರಿಯೆಯಲ್ಲಿ ದೀರ್ಘಾವಧಿ ಉಳಿದ ಕಣಗಳ ಅಧ್ಯಯನ ಮಾಡಿದನು. ಆಗ ಪತ್ತೆಯಾದ ಹೊಸ ಕಣವನ್ನು ಜೆ ಕಣವೆಂದು ಕರೆದನು. ಇದೇ ಕಾಲಕ್ಕೆ ಸ್ವತಂತ್ರವಾಗಿ, ಬಿ.ರಿಕ್ಟರ್ , ಸ್ಟ್ಯಾನ್ ಪೋರ್ಡ್‍ನಲ್ಲಿ ಈ ಕಣಗಳನ್ನು ಗುರುತಿಸಿ ಪೈ ಕಣಗಳೆಂದು ಹೆಸರಿಸಿದ್ದನು. ಈಗ ಇವು ಜೆ/ಪೈ ಕಣಗಳೆಂದು ಕರೆಯಲ್ಪಡುತ್ತವೆ. ಇದಾದ ಅಲ್ಪ ಕಾಲದಲ್ಲೇ ಈ ಕಣಗಳ ಸಂಬಂಧಿಗಳಾದ ಹೊಸ ಕಣಗಳು ದಕ್ಕಿದವು. ಟಿಂಗ್ ಹಾಗೂ ರಿಕ್ಟರ್ 1976ರಲ್ಲಿ ನೊಬೆಲ್ ಪ್ರಶಸ್ತಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/11/2020