ಜಾನ್ , (ಹ್ಯಾಸ್ ಬ್ರಾಕ್) ವ್ಯಾನ್‍ವ್ಲೆಕ್ (1899-1980) ೧೯೭೭ ಕಾಂತ ವ್ಯವಸ್ಥೆಗಳ ಬಗ್ಗೆ ಆಧುನಿಕ ಸಿದ್ಧಾಂತಗಳನ್ನು ನೀಡಿದಾತ.
ವ್ಯಾನ್‍ವ್ಲೆಕ್‍ನ ತಂದೆ ಹಾಗೂ ತಾತ, ಉತ್ತಮ ಗಣಿತಶಾಸ್ತ್ರಜ್ಞರಾಗಿದ್ದರು. ವಿಸ್ಕಾನ್ಸಿಸ್, ಹಾರ್ವರ್ಡ್‍ಗಳಲ್ಲಿ ಶಿಕ್ಷಣ ಪೂರೈಸಿದ ವ್ಯಾನ್‍ವ್ಲೆಕ್ 1923ರಲ್ಲಿ ಮಿನ್ನೆಸೊಟಾ ವಿಶ್ವವಿದ್ಯಾಲಯ ಸೇರಿದನು. ನಂತರ ವಿಸ್ಕಾನ್ಸಿನ್ ಹಾಗೂ ಹಾರ್ವರ್ಡ್ ಪೀಠಗಳನ್ನಲಂಕರಿಸಿದ್ದನು. ವ್ಯಾನ್‍ವ್ಲೆಕ್, ಡಿರಾಕ್‍ನ ಕ್ವಾಂಟಂ ಬಲ ವಿಜ್ಞಾನದ ಸಾಧಕ ,ಬಾಧಕಗಳನ್ನು ಅಧ್ಯಯನ ಮಾಡಿ, ಪರಮಾಣುಗಳ ಕಾಂತೀಯ ಗುಣಗಳನ್ನು ವಿಶದೀಕರಿಸಿದನು. 1932ರಲ್ಲಿ ಥಿಯರಿ ಆಫ್ ಎಲೆಕ್ಟ್ರಿಕ್ ಅಂಡ್ ಮ್ಯಾಗ್ನಿಟಿಕ್ ಸಸೆಪ್ಟಬಿಲಿಟೀಸ್ ಪುಸ್ತಕ ಪ್ರಕಟಿಸಿದನು. ಇದರಲ್ಲಿ ಪರಮಾಣುಗಳ ಅನುಕಾಂತೀಯ ಗುಣಗಳನ್ನು ಚರ್ಚಿಸಿದ್ದನು. ತಾಪಮಾನ ಸ್ವತಂತ್ರವಾದ ಕಾಂತೀಯ ಸಂವೇದನೆ (SUSCEPTIBILITY) ಯನ್ನು ಈಗ ವ್ಯಾನ್‍ವ್ಲೆಕ್ ಅನುಕಾಂತೀಯತೆ (PARAMAGNETISM) ಎಂದು ಕರೆಯಲಾಗುತ್ತದೆ. ವ್ಯಾನ್‍ವ್ಲೆಕ್ ಸ್ಪಟಿಕಗಳಲ್ಲಿನ ರಾಸಾಯನಿಕ ಬಂಧಗಳನ್ನು ಕುರಿತು ಅಧ್ಯಯನ ನಡೆಸಿ, ಸಿದ್ಧಾಂತಗಳನ್ನು ಮಂಡಿಸಿದನು. ಈ ಸಿದ್ಧಾಂತಗಳು ಲೋಹ ಸಂಯುಕ್ತ ಪರಮಾಣುಗಳ ವೈದ್ಯುತ್, ಕಾಂತೀಯ ಹಾಗೂ ರೋಹಿತದ ಗುಣ ಲಕ್ಷಣಗಳ ಮುನ್ಸೂಚನೆ ಪಡೆಯಲು ನೆರವಾಗುತ್ತವೆ. ವ್ಯಾನ್‍ವ್ಲೆಕ್ ಸ್ಥಳೀಯ ಮಟ್ಟದಲ್ಲಿನ ಕಾಂತೀಯ ಭ್ರಾಮ್ಯತೆಗಳು, ಎಲೆಕ್ಟ್ರಾನ್‍ಗಳ ಅಂತರಕ್ರಿಯೆಗೆ ಹೇಗೆ ನೆರವಾಗುತ್ತವೆಯೆಂದು ವಿವರಿಸಿದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ವ್ಯಾನ್‍ವ್ಲೆಕ್ ವಾತಾವರಣದಲ್ಲಿನ ನೀರು ಹಾಗೂ ಆಮ್ಲಜನಕ, ರಡಾರ್ ಸಂಜ್ಞೆಗಳನ್ನು ಹೀರಿಕೊಳ್ಳುವುದನ್ನು ತೋರಿಸಿದನು. ಸದಾ ಹಸನ್ಮುಖಿಯೂ, ಸ್ನೇಹಶೀಲನೂ ಆಗಿದ್ದ ವ್ಯಾನ್‍ವ್ಲೆಕ್ 1977ರಲ್ಲಿ ಫಿಲೆಫ್ವಾರೆನ್ ಆ್ಯಂಡರ್ಸನ್ ಹಾಗೂ ನೆವಿಲ್ ಫಾ್ರನ್ಸಿಸ್ ಮಾಟ್‍ರೊಂದಿಗೆ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/6/2020