ಜಾನ್ ,ರಾಬರ್ಟ್ ಷ್ರೀಫೆರ್ (1931) ೧೯೭೨ ಅಸಂಸಂ-ಭೌತಶಾಸ್ತ್ರ-ಅತಿವಾಹಕತೆಯನ್ನು ಅನಾವರಣಗೊಳಿಸಿದಾತ.
ಜಾನ್ 31 ಮೇ 1931 ರಂದು ಇಲಿನಾಯ್ ರಾಜ್ಯದ ಓಕ್ ಪಾರ್ಕ್‍ನಲ್ಲಿ ಜನಿಸಿದನು. 1947ರಲ್ಲಿ ಫ್ಲೋರಿಡಾದ ಯುಸ್ಟಿಸ್‍ನ ನಗರಕ್ಕೆ ಹೋದನು. 1949ರಲ್ಲಿ ಯುಸ್ಟಿಸ್ ಶಾಲೆಯಿಂದ ಪ್ರೌಢಶಿಕ್ಷಣ ಮುಗಿಸಿ, ಪದವಿಗಾಗಿ ಎಂಐಟಿ ಸೇರಿದನು.ಇಲ್ಲಿ ಮೊದಲೆರಡು ವರ್ಷ ವೈದ್ಯುತ್ ಇಂಜಿನಿಯರಿಂಗ್ ವಿಭಾಗದಲ್ಲಿದ್ದು ನಂತರ ಭೌತಶಾಸ್ತ್ರಕ್ಕೆ ಬದಲಾಯಿಸಿದನು. ಇಲ್ಲಿ ಜಾನ್.ಸಿ.ಸ್ಲೇಟರ್ ಮಾರ್ಗದರ್ಶನದಲ್ಲಿ ಭಾರ ಪರಮಾಣುಗಳ ವಿವಿಧ ಬಗೆಯ ರಚನೆಗಳ ಬಗೆಗೆ ಅಧ್ಯಯನ ಮಾಡಿ ಪದವಿ ಗಳಿಸಿದನು. ಇದಾದ ನಂತರ ಘನಸ್ಥಿತಿ ಭೌತಶಾಸ್ತ್ರದತ್ತ ತನ್ನ ಗಮನ ಹರಿಸಿ ಜಾನ್ ಬಾರ್ಡೀನ್‍ನ ಮಾರ್ಗದರ್ಶನದಲ್ಲಿ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಂದುವರೆಸಿದನು. ಅರೆವಾಹಕಗಳ ಮೇಲ್ಮೈ ಮೇಲಿನ ವೈದ್ಯುತ್ ಪ್ರವಾಹವನ್ನು ಕುರಿತಾಗಿ ಮೊದಲೆರಡು ವರ್ಷ ಅಧ್ಯಯನಶೀಲನಾದನು. ಮೂರನೇ ವರ್ಷ ಬಾರ್ಡೀನ್ ಹಾಗೂ ಕೂಪರ್‍ರೊಂದಿಗೆ ಅತಿವಾಹಕತ್ವದಲ್ಲಿ ಕ್ರಿಯಾಶೀಲನಾಗಿ, ಸಂಪ್ರಬಂಧ, ಮಂಡಿಸಿ ಡಾಕ್ಟರೇಟ್ ಗಳಿಸಿದನು. 1957 ಹಾಗೂ 1958ರಲ್ಲಿ ನ್ಯಾಷನಲ್ ಸೈನ್ಸ್ ಫೌಂಡೇಷನ್ ಫೆಲೋ ಆಗಿ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯ ಹಾಗೂ ಕೊಪೆನ್‍ಹೇಗ್‍ನ ಬೊಹ್ರ್ ಸಂಸ್ಥೆಗಳಲ್ಲಿ ಅತಿವಾಹಕತೆಯಲ್ಲಿ ಸಂಶೋಧನೆಯನ್ನು ಮುಂದುವರೆಸಿದನು. ಮುಂದಿನ ವರ್ಷ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. 1959ರಲ್ಲಿ ಇಲ್ಲಿಂದ ಇಲಿನಾಯ್‍ಗೆ ಹೋಗಿ 1960ರಲ್ಲಿ ಅಲ್ಲಿಯೇ ಬೋಧಕ ಸಿಬ್ಬಂದಿಯಾದನು. ಇದೇ ವರ್ಷದ ಬೇಸಿಗೆಯಲ್ಲಿ ಕೆಲಕಾಲ ಬೋಹ್ರ್ ಸಂಸ್ಥೆಯಲ್ಲಿದ್ದನು. 1962ರಲ್ಲಿ ಷ್ರೀಫೆರ್ ಫಿಲೆಡೆಲ್ಫಿಯಾದ ಪೆನ್‍ಸಿಲ್ವೇನಿಯಾ “ವಿಶ್ವವಿದ್ಯಾಲಯ ಸೇರಿದನು. 1964ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1980ರಲ್ಲಿ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯಕ್ಕೆ ಸೇರಿದನು. 1984 ರಿಂದ 1989ರವರೆಗೆ ಸಂಟಾ ಬಾರ್ಬರಾ ಹಾಗೂ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯಗಳನ್ನು ಸೇವೆ ಸಲ್ಲಿಸಿದನು. 1992ರಲ್ಲಿ ಫ್ಲೋರಿಡಾ ರಾಜ್ಯದ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿ ಹಾಗೂ ನ್ಯಾಷನಲ್ ಹೈ ಮ್ಯಾಗ್ನೇಟಿಕ್ ಫೀಲ್ಡ್ ಲ್ಯಾಬೋರೇಟರಿಯ ಮುಖ್ಯಸ್ಥನಾಗಿ ನೇಮಕಗೊಂಡನು. ಮ್ಯೂನಿಕ್ ಜಿನೇವಾ ಫಿಲೆಡೆಲ್ಫಿಯಾ ಇಲಿನಾಯ್ ಸಿನ್‍ಸಿನಟ್ಟಿ ಟೆಲ್ ಅವಿವ್ ಅಲಬಾಮಾ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‍ನಿಂದ ಪ್ರಶಸ್ತಿ ಗೌರವಗಳು ಜಾನ್‍ಗೆ ದಕ್ಕಿವೆ. ಅತಿವಾಹಕತೆಯನ್ನು ಕುರಿತಾದ ಸಂಶೋಧನೆಗಾಗಿ ಜಾನ್, ಬಾರ್ಡೀನ್ ಮತ್ತು ಕೂಪರ್‍ರೊಂದಿಗೆ 1972ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 9/7/2019