ಜೊಸೆಫ್'ಸನ್ , ಬ್ರಿಯಾನ್ ಡೇವಿಡ್ (1940--) ೧೯೭೩ ಬ್ರಿಟನ್-ಸೈದ್ಧಾಂತಿಕ ಭೌತಶಾಸ್ತ್ರ- ಅತಿವಾಹಕಗಳ ಮಧ್ಯದ ಸುರಂಗ (TUNNELING) ಪರಿಣಾಮ ಅನಾವರಣಗೊಳಿಸಿದಾತ.
ಕೇಂಬ್ರಿಜ್‍ನಲ್ಲಿ ವಿದ್ಯಾಭ್ಯಾಸ ಮಾಡಿದ ಜೊಸೆಫ್ಸನ್ 1974ರಲ್ಲಿ ಅಲ್ಲಿಯೆೀ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1962ರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದನು. ಆಗ ಆತ ಜೊಸೆಫ್ಸನ್ ಪರಿಣಾಮ ಕಂಡು ಹಿಡಿದನು. ಒಂದರಿಂದ ಎರಡು ನ್ಯಾನೋಮೀಟರ್ ದೂರದಲ್ಲಿರಿಸಿದ, ಅತಿವಾಹಕ ವಲಯಗಳ ಮಧ್ಯೆ ಯಾವುದೇ ವಿಭವ (TUNNELING) ಇಲ್ಲದಿದ್ದಾಗಲೂ ವಿದ್ಯುತ್ ಪ್ರವಾಹ ಹರಿಯುವುದೆಂದು ತೋರಿಸಿದನು. ಇದನ್ನು ಈಗ ಜೋಸೆಫ್’ಸನ್ ಪರಿಣಾಮವೆಂದು ಕರೆಯಲಾಗುತ್ತಿದೆ. ಜೆಲ್ ಪ್ರಯೋಗಾಲಯದ ಜೆ.ಎಂ.ರೊವೆಲ್ ಮತ್ತು ಪಿ.ಡಬ್ಲ್ಯು ಆ್ಯಂಡರ್‍ಸನ್ ಇದನ್ನು ಪ್ರಯೋಗಳಿಂದ ಖಚಿತಗೊಳಿಸಿದನು. ಜೊಸೆಫ್ಸನ್ ಪರಿಣಾಮವನ್ನು ಗಣಕಗಳಲ್ಲಿ ಬಳಸಿಕೊಳ್ಳಲಾಗುತ್ತದೆ. 1973ರಲ್ಲಿ ನೊಬೆಲ್ ಪ್ರಶಸ್ತಿ ಹಂಚಿಕೊಂಡ ಜೊಸೆಫ್ಸನ್, ಈಗ ಮಾನಸಿಕ ಪ್ರೇರಣೆಯ ವಿದ್ಯಾಮಾನದ ಸಂಶೋಧನೆ ಹಾಗೂ ಸಂಗೀತಗಳಲ್ಲಿ ಆಸಕ್ತನಾಗಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/4/2019