ಜೇಮ್ಸ್, ವ್ಯಾಟ್ಸನ್ ಕ್ರೊನಿನ್ (1931--) ೧೯೮೦ ಅಸಂಸಂ-ಬೈಜಿಕ ಭೌತಶಾಸ್ತ್ರ- ಕೆ-ಮೆಸಾನ್ ಶೈಥಿಲ್ಯಗಳಲ್ಲಿ ಸಾಮ್ಯತೆ ಭಂಗವಾಗುವುದನ್ನು ಅನಾವರಣಗೊಳಿಸಿದಾತ.
ಇಲಿನಾಯ್ ಪ್ರಾಂತದ ಚಿಕಾಗೋದಲ್ಲಿ 29 ಸೆಪ್ಟೆಂಬರ್ 1931ರಲ್ಲಿ ಜೇಮ್ಸ್‍ನ ಜನನವಾಯಿತು. 1951ರಲ್ಲಿ ಚಿಕಾಗೋ ವಿಶ್ವವಿದ್ಯಾಲಯ ಸೇರಿ ಭೌತಶಾಸ್ತ್ರದ ಶಿಕ್ಷಣ ಪಡೆದನು. ಇಲ್ಲಿ ಎನ್ರಿಕೋಫರ್ಮಿ, ಮಾರಿಯಾ ಮೇಯರ್ ಮಾರ್ವಿನ್ ಗೋಲ್ಡ್ ಬರ್ಜರ್, ಮುರ್ರೆ ಗೆಲ್‍ಮನ್‍ನಂತಹ ಖ್ಯಾತರು ಉಪನ್ಯಾಸ ನೀಡುತ್ತಿದ್ದರು. ಗೆಲ್‍ಮನ್‍ನ ಉಪನ್ಯಾಸಗಳಿಂದ ಕಣ ಭೌತಶಾಸ್ತ್ರದಲ್ಲಿ ಜೇಮ್ಸ್‍ಗೆ ಆಸಕ್ತಿ ಮೂಡಿತು. 1955ರಲ್ಲಿ ಡಾಕ್ಟರೇಟ್ ಗಳಿಸಿ ಜೇಮ್ಸ್ ಬ್ರೂಕ್ ಹೇವನ್ ಕಾಸ್ಮೊಟ್ರಾನ್‍ನ ವೇಗೋತ್ಕರ್ಷಕದಲ್ಲಿ ಸಂಶೋಧನೆ ನಡೆಸುತ್ತಿದ್ದ ರೋಡನಿ ಕೂಲ್ ತಂಡ ಸೇರಿದನು. ಈ ಕಾಲದಲ್ಲಿ ಕಣಗಳ ಕ್ಷೀಣಬಲಗಳ ಅಂತಕ್ರಿಯೆಯಲ್ಲಿ ಸಾಮ್ಯತೆ (PARITY) ಭಂಗವಾಗುವುದೆಂದು ಅನಾವರಣಗೊಂಡಿದ್ದಿತು. ಕಣ ಶೈಥಿಲ್ಯವಾಗುವಾಗಲೂ (DECAY) ಈ ಭಂಗ ವಿರುವುದೇ ಎಂದು ತಿಳಿಯಲು ಜೇಮ್ಸ್ ಹಲವಾರು ಪ್ರಯೋಗಗಳನ್ನು ರೂಪಿಸಿದನು. ವ್ಯಾಲ್ ಫಿÛಚ್‍ನೊಂದಿಗೆ ನಡೆಸಿದ ಪ್ರಯೋಗಾತ್ಮಕ ಫಲಿತಾಂಶಗಳಿಂದ ಕೆ-ಮೆಸಾನ್ ಶೈಥಿಲ್ಯಗಳಲ್ಲಿ ಸಾಮ್ಯತೆ ಭಂಗವಾಗುವುದು ತಿಳಿದು ಬಂದಿತು. ಈ ಸಂಶೋಧನೆಗಾಗಿ ಜೇಮ್ಸ್ 1980ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/17/2020