ಗ್ಲಾಷೋ, ಷೆಲ್ಡಾನ್ ಲೀ (1932--) ೧೯೭೯ ಅಸಂಸಂ-ಭೌತಶಾಸ್ತ್ರ- ವೈದ್ಯುತ್ ಕಾಂತತ್ವ ಮತ್ತು ಕ್ಷೀಣ ಬೈಜಿಕ ಅಂತಕ್ರಿಯೆಗಳನ್ನು ಒಗ್ಗೂಡಿಸಿ ಸಮಗ್ರಗೊಳಿಸಿದಾತ.
ಗ್ಲಾಷೋ ಕಾರ್ನೆಲ್, ಹಾರ್ವರ್ಡ್‍ನಲ್ಲಿ ವಿದ್ಯಾಭ್ಯಾಸ ಮಾಡಿ, ಜೀನಿವಾದಲ್ಲಿರುವ ಯುರೋಪಿಯನ್ ಆರ್ಗಾನೈಸೇಷನ್ ಫಾರ್’ ನ್ಯೂಕ್ಲಿಯರ್ ರಿಸರ್ಚ್ ಮತ್ತು ಬೊಹ್ರ್ ಸಂಸ್ಥೆಗಳಲ್ಲಿ ಕೆಲಸ ಮಾಡಿದನು. 1967 ರಲ್ಲಿ ಹಾರ್ವರ್ಡ್‍ಗೆ ಮರಳಿ ಪ್ರಾಧ್ಯಾಪಕನಾದನು. ಹಾರ್ವರ್ಡ್‍ನಲ್ಲಿರುವಾಗ ಗ್ಲಾಷೋ,ವೈದ್ಯುತ್ ಕಾಂತತ್ವ ಮತ್ತು ಕ್ಷೀಣ ಅಂತಕ್ರಿಯೆಗಳ (WEAK INTERACTIONS) ಸಂಬಂಧ ತಿಳಿಸುವ ಗಣಿತದ ಮಾದರಿಗಳನ್ನು ಮೊದಲಿಗೆ ರೂಪಿಸಿದನು. “ವೀಯ್ನ್‍ಬರ್ಗ್ ಮತ್ತು ಅಬ್ಬಸ್ ಸಲಾಂ, ಇದನ್ನು ಮುಂದುವರೆಸಿ ಲೆಪ್ಟಾನ್ಸ್ (ಎಲೆಕ್ಟ್ರಾನ್ ಮತ್ತು ನ್ಯೂಟ್ರಿನೋ) ಕಣಗಳಿಗೆ ಸಮರ್ಪಕವಾಗಿ ಅನ್ವಯಿಸಿದರು. ಗ್ಲಾಷೋ ಇವರ ಸಿದ್ಧಾಂತವನ್ನು, ಇನ್ನು ಮುಂದುವರೆಸಿ, ಮೂಲಕಣಗಳನ್ನು ವಿವರಿಸುವ ‘ಚಾರ್ಮ್’ ಎಂದು ಕರೆಯಲಾಗುತ್ತಿರುವ ಹೊಸ ಲಕ್ಷಣಗಳನ್ನು ಸೇರಿಸಿದನು. ‘ಚಾರ್ಮ್’ ಗುಣ ಲಕ್ಷಣದಿಂದ ಬೇರಿಯಾನ್ಸ್, ಮೆಸಾನ್ಸ್ ಕಣಗಳನ್ನು ವಿವರಿಸುವುದು ಸಾಧ್ಯವಾಯಿತು. ಗೆಲ್‍ಮನ್. ಮೂಲಕಣಗಳನ್ನು ಕ್ವಾರ್ಕ್ ಎನ್ನುವ ಕಣಗಳಿಂದಾಗಿದೆಯೆಂಬ ಸಿದ್ಧಾಂತ ಮಂಡಿಸಿದ್ದನು. ಗ್ಲಾಷೋ ,ಕ್ವಾರ್ಕ್‍ಗಳು ಸಂಖ್ಯೆಯಲ್ಲಿ ನಾಲ್ಕು ಇರಬೇಕೆಂದು ತಿಳಿಸಿದನು. ಈ ಆಧಾರದ ಮೇಲೆ ಮೂಲ ಕಣಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಜೆ ಅಥವಾ ಸೈ ಎಂದು ಕರೆಯಲಾಗುವ ಕಣವನ್ನು 1974ರಲ್ಲಿ ಟಿಂಗ್ ಮತ್ತು ರಿಕ್ಟರ್ ಪತ್ತೆ ಹಚ್ಚಿದರು. ಗ್ಲಾಷೋ ಸಿದ್ಧಾಂತ ಮೂಲಕಣಗಳ ಅರಿವಿನತ್ತ ಇಟ್ಟ ಮಹತ್ತರ ಹೆಜ್ಜೆಯೆಂದು ದಾಖಲಾಗಿದೆಯಲ್ಲದೆ. ಅದಕ್ಕಾಗಿ 1979ರ ನೊಬೆಲ್ ಪ್ರಶಸ್ತಿ ಗ್ಲಾಷೋಗೆ ಸಂದಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019