ಕೂಪರ್, ಲಿಯಾನ್ ನೀಲ್ (1970--) ೧೯೭೨
ಅಸಂಸಂ - ಭೌತಶಾಸ್ತ್ರ - ಅತಿವಾಹಕತೆಯ ¨ಸಿಎಸ್ ಸಿದ್ಧಾಂತಕ್ಕೆ ಕೊಡುಗೆ ನೀಡಿದಾತ.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಕೂಪರ್ , 1954ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದನು. ಇಲಿನಾಯ್‍ನಲ್ಲಿ ಬಾರ್ಡಿನ್, ಷ್ರೀಫರ್ ಜೊತೆಗೂಡಿ , ಅತಿವಾಹಕತೆಯ ಸಿದ್ಧಾಂತವನ್ನು ಮಂಡಿಸಿದನು. ಡಾಕ್ಟರೇಟ್ ಗಳಿಸಿದ ಅಲ್ಪಕಾಲದಲ್ಲೇ ಕೂಪರ್ , ನಿಮ್ನ ತಾಪಮಾನಗಳಲ್ಲಿ ಎಲೆಕ್ಟ್ರಾನ್‍ಗಳ ಬದ್ದ ಜೋಡಿ ಅಸ್ತಿತ್ವವನ್ನು ಸೂಚಿಸಿದನು. ಎರಡು ಒಂದೇ ವಿದ್ಯುದಾವೇಶದ ಎಲೆಕ್ಟ್ರಾನಗಳು ಪರಸ್ಪರ ವಿಕರ್ಷಿಸುವುದು ಸಹಜವಾದರೂ, ಧನಾತ್ಮಕ ಅಯಾನ್‍ಗಳ ಪದರಗಳಿಂದ ಸುತ್ತುವರೆಯಲ್ಪಟ್ಟ ಸ್ಥಿತಿಯಲ್ಲಿ ಅವು ಬೇರೆಯಾಗಿಯೇ ವರ್ತಿಸುತ್ತವೆ. ಈ ಸ್ಥಿತಿಯಲ್ಲಿ ಒಂದು ಎಲೆಕ್ಟ್ರಾನ್ ಧನಾತ್ಮಕ ಪದರವನ್ನು ತನ್ನೆಡೆಗೆ ಆಕರ್ಷಿಸಿ ವಿರೂಪಗೊಳಿಸುತ್ತಿದ್ದರೆ, ಮತ್ತೊಂದು ಎಲೆಕ್ಟ್ರಾನ್ ಮೊದಲ ಎಲೆಕ್ಟ್ರಾನ್‍ನಿಂದ ವಿಕರ್ಷಿತಗೊಂಡು ವಿರೂಪವಾಗಿ, ಅಧಿಕ ಸಾಂದ್ರಗೊಂಡ ಧನಾತ್ಮಕ ಪದರದಿಂದ ಆಕರ್ಷಿಸಲ್ಪಡುತ್ತದೆ. ಪರಸ್ಪರ ವಿರುದ್ದ ಇಳಿಜಾರುಗಳಿಂದ, ಒಂದೇ ತಗ್ಗಿನ ಕಡೆ ಉರುಳುತ್ತಿರುವ ಚೆಂಡಿನ ಸ್ಥಿತಿಯಲ್ಲಿ ಈ ಎಲೆಕ್ಟ್ರಾನ್‍ಗಳಿರುತ್ತವೆ. ಈ ಎಲೆಕ್ಟ್ರಾನ್‍ಗಳು ನಿಮ್ನ ತಾಪಮಾನಗಳಲ್ಲಿದ್ದಾಗ, ಔಷ್ಣೀಕ ಕಂಪನಗಳು (THERMAL VIBRATIONS) ಇರದಿರುವುದರಿದ, ಎಲೆಕ್ಟ್ರಾನ್‍ಗಳು ಧನಾತ್ಮಕ ಕಣ ಪದರಗಳಿಂದ ಆಕರ್ಷಣೆ ವಿಕರ್ಷಣೆಗಳಿಂದ ಬದ್ದ ಜೋಡಿ ಎಲೆಕ್ಟ್ರಾನಗಳಾಗಿ ರೂಪುಗೊಳ್ಳುತ್ತವೆ. ಇವನ್ನು ಕೂಪರ್ ಜೋಡಿಗಳೆನ್ನುತ್ತಾರೆ. ಹೀಗಿರುವಾಗ, ಈ ಜೋಡಿ ಎಲೆಕ್ಟ್ರಾನ್‍ಗಳು ಅವುಗಳ ಪದಭ್ರಷ್ಟಗೊಳಿಸುವ, ಯಾವುದೇ ಪರಮಾಣ್ವಿಕ ಕಲ್ಮಶಕ್ಕಿಂತಲೂ ಪ್ರಬಲವಾಗಿದ್ದು, ಸ್ವಲ್ಪವೂ ಚದುರದೆ ಅಣುಪದರಗಳ ಮೂಲಕ ಸಾಗಿ, ಅತಿವಾಹಕತೆಗೆ ಕಾರಣವಾಗುತ್ತವೆಯೆಂದು ಬಿಸಿಎಸ್ ಸಿದ್ಧಾಂತ ವಿವರಿಸುತ್ತದೆ, ಈ ಸಿದ್ಧಾಂತದ ಕೊಡುಗೆಗಳಾಗಿ 1972ರಲಿ ಬಾರ್ಡೀಸ್, ಕೂಪರ್ ಹಾಗೂ ಷೀಫರ್ ನೊಬೆಲ್ ಪ್ರಶಸ್ತಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 9/26/2019