ಐವರ್, ಗಯಾಯೆವರ್ (1929--) ೧೯೭೩
ನಾರ್ವೆ-
ಐವರ್ 5 ಏಪ್ರಿಲ್ 1929ರಂದು ಬರ್ಜೆನ್ ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಔಷಧಿ ವ್ಯಾಪಾರಿಯಾಗಿದ್ದನು. ಐವರ್ ಟೊಟೆನ್ ಹಾಗೂ ಹ್ಯಾಮರ್‍ಗಳಲ್ಲಿ ಶಿಕ್ಷಣ ಗಳಿಸಿದನು. ನಂತರ ಒಂದು ವರ್ಷದ ಕಾಲ ಕೌಫಾನ್ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡಿದನು. ಈ ಮೂಲಕ 1948ರಲ್ಲಿ ನಾರ್ವೆ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದನು. 1952ರಲ್ಲಿ ಕಾರ್ಪೋರೆಟ್ ಹುದ್ದೆಗೇರಿದನು. ನಂತರ ನಾರ್ವೆ ಸರ್ಕಾರದ ಪೇಟೆಂಟ್ ಇಲಾಖೆಯಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದನು. 1954ರಲ್ಲಿ ಕೆನಡಾಕ್ಕೆ ಹೋಗಿ ಅಲ್ಲಿ ವಾಸ್ತುಶಿಲ್ಪಿಯೊಬ್ಬನ ಸಹಾಯಕನಾದನು. ಇಲ್ಲಿರುವಾಗ ಕೆನಡಾದ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಇಂಜಿನಿಯರಿಂಗ್‍ನಲ್ಲಿ ಮುಂದುವರೆದ ಶಿಕ್ಷಣ ಪಡೆದನು. 1956ರಲ್ಲಿ ಅಸಂಸಂಕ್ಕೆ ವಲಸೆ ಹೋಗಿ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಎ,ಬಿ,ಸಿ ಪರೀಕ್ಷೆ ಮುಗಿಸಿದನು. ಹಲವಾರು ಕಡೆ ಉದ್ಯೋಗ ಮಾಡಿ 1958ರಲ್ಲಿ ಜನರಲ್ ಎಲೆಕ್ಟ್ರಿಕ್ ಕಂಪನಿಯ ಸಂಶೋಧನಾ ವಿಭಾಗ ಸೇರಿದನು. ರೆನ್ಸೆಲೇರ್ ಪಾಲಿಟೆಕ್ನಿಕ್ ನಲ್ಲಿ ಭೌತಶಾಸ್ತ್ರದ ಸಂಶೋಧನೆ ಮಾಡಿ 1964ರಲ್ಲಿ ಡಾಕ್ಟರೇಟ್ ಗಳಿಸಿದನು. 1958ರಿಂದ 1969ರ ಅವಧಿಯಲ್ಲಿ ಐವರ್ ತೆಳುಪೊರೆ, ಅತಿವಾಹಕತೆ ಸುರಂಗೀಕರಣಗಳಲ್ಲಿ ಸಂಶೋಧನಾ ನಿರತನಾಗಿದ್ದನು. ಸುರಂಗೀಕರಣ ಹಾಗೂ ಅತಿ ವಾಹಕತೆಗಳಲ್ಲಿ ಸಂಯೋಜಿತ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದನು. ಕೇಂಬ್ರಿಜ್‍ನಲ್ಲಿ ಕೆಲಕಾಲವಿದ್ದು ಜೀವ ಭೌತಶಾಸ್ತ್ರದಲ್ಲಿ ಶ್ರಮಿಸಿದನು. ಘನ ಮೇಲೈಗಳ ಮೇಲೆ ಪ್ರೋಟೀನ್‍ಗಳ ನಡವಳಿಕೆಯಲ್ಲಿ ಅಧ್ಯಯನದಲ್ಲಿ ನಿರತನಾಗಿದ್ದನು. ಅತಿವಾಹಕತೆ ಹಾಗೂ ಸುರಂಗ ವಿದ್ಯಾಮಾನಗಳಲ್ಲಿ ನಡೆಸಿದ ಸಂಶೋಧನೆಗಳಿಗಾಗಿ ಐವರ್ 1973ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/30/2019