অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅ್ಯಂಡರ್‍ಸನ್ ಫಿಲಿಫ್ ವಾರೆನ್

ಅ್ಯಂಡರ್‍ಸನ್ ಫಿಲಿಫ್ ವಾರೆನ್

ಅ್ಯಂಡರ್‍ಸನ್ ಫಿಲಿಫ್ ವಾರೆನ್ (1923- ) - ೧೯೭೭ ಅಸಂಸಂ- ಭೌತಶಾಸ್ತ್ರ -ಕಾಂತೀಯ ಹಾಗೂ ಕ್ರಮಭಂಗಿತ ವ್ಯವಸ್ಥೆಗಳ ಎಲೆಕ್ಟ್ರಾನ್ ರಾಚನಿಕ ಸ್ವರೂಪವನ್ನು ಅನಾವರಣಗೊಳಿಸಿದಾತ.

ಅ್ಯಂಡರ್‍ಸನ್ ಡಾಕ್ಟರೇಟ್‍ಗಾಗಿ ವ್ಯಾನ್‍ವ್ಲೆಕ್ ಜೊತೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. 1943-45ರ ಅವಧಿಯಲ್ಲಿ ‘ನೇವಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ಅ್ಯಂಟೆನಾ ಇಂಜಿನಿಯರಿಂಗ್ ಕುರಿತಾದಂತಹ ಸಂಶೋಧನೆಗಳನ್ನು ಕೈಗೊಂಡನು.  ಅ್ಯಂಡರ್‍ಸನ್ ವೃತ್ತಿಪರ ಜೀವನ ಬೆಲ್ ಟೆಲಿಫೆÇೀನ್ ಲ್ಯಾಬೋರೇಟರಿಯೊಂದಿಗೆ ಬಹು ದೀರ್ಘವಾಗಿ ಬೆಸಿದುಕೊಂಡಿದ್ದಿತು.  ಆದರೆ 1975ರಲ್ಲಿ ಪ್ರಿನ್ಸ್‍ಟನ್‍ನಲ್ಲಿ ಪ್ರಾಧ್ಯಾಪಕನಾಗಿಯೂ ಕೆಲಸ ಮಾಡಿದನು.  ಒತ್ತಡದಿಂದಾಗಿ ಅಗಲಗೊಳ್ಳುವ ರೋಹಿತ ರೇಖೆಗಳ ಬಗ್ಗೆ ಅ್ಯಂಡರ್‍ಸನ್ ಆಸಕ್ತಿ ವಹಿಸಿದ್ದನು. 1958ರಲ್ಲಿ ಕ್ರಮಭಂಗಿತ ಮಾಧ್ಯಮದಲ್ಲಿ ಎಲೆಕ್ಟ್ರಾನ್ ಸ್ಥಿತಿಗಳನ್ನು ಕುರಿತು ಸಂಪ್ರಬಂಧ (THESIS) ಮಂಡಿಸಿದನು.  ಇದಎಂದ ಇಂತಹ ವ್ಯವಸ್ಥೆಯಲ್ಲಿ ಎಲೆಕ್ಟ್ರಾನ್‍ಗಳು ಒಂದು ಮಿತಿಧಾರಕ ವಲಯಕ್ಕೆ ಬದ್ಧವಾಗಿದ್ದು, ಮುಕ್ತ ಚಲನೆಯನ್ನು ಹೊಂದಿರುವುದಿಲ್ಲವೆಂದು ಸಾಧಿಸಿ ತೋರಿಸಿದನು.  ಇದು ಈಗ ‘ಆ್ಯಂಡರಸನ್ ಸ್ಥಳೀಕರಣ’ ಎಂದು ಗುರುತಿಸಲ್ಫಟ್ಟಿದೆ.  ಮಧ್ಯಸ್ಥಿಕೆ ವಹಿಸುವ   ಪರಮಾಣುವಿನ ಉಪಸ್ಥಿತಿಯಲ್ಲಿ ಎರಡು ಕಾಂತೀಯ ಪರಮಾಣುಗಳು ಹೇಗೆ ಪರಸ್ಪರ ಸಂಪರ್ಕ ಸಾಧಿಸುತ್ತವೆಯೆಂದು, ಗಣಿತೀಯ ಮಾದರಿಯ ಮೂಲಕ ವಿವರಿಸಿದನು.  1961ರಲ್ಲಿ ಸಾಮಗ್ರಿಗಳ ಕಾಂತತ್ವಕ್ಕೆ ಕಾರಣವಾದ ಸೂಕ್ಷ್ಮ ಸ್ಥಿತಿಯನ್ನು ಕುರಿತು ಲೇಖನ ಪ್ರಕಟಿಸಿದನು.  ಆ್ಯಂಡರ್‍ಸನ್‍ನ ಈ ಮಾದರಿ ಕ್ವಾಂಟಂ ಬಲವಿಜ್ಞಾನದ ಮಾದರಿಯಾಗಿರುವುದಲ್ಲದೆ, ಸ್ಥಳೀಕರಣಗೊಂಡ ವಲಯಗಳು ಹಾಗೂ ಈ ವಲಯಗಳು ಮುಕ್ತವಲಯಗಳಾಗಿ ಮಾರ್ಪಾಡಾಗುವ  ಸಂದರ್ಭವನ್ನು ವಿಶದೀಕರಿಸುತ್ತದೆ.  ಮಾದರಿ ಕಾಂತೀಯ ಸಾಮಾಗ್ರಿಗಳ ಕಲ್ಮಶ, ಅತಿವಾಹಕತೆ, ಅತಿಪ್ರವಾಹಿತತೆ ಸಾಧ್ಯತೆಗಳ ಅಧ್ಯಯನಕ್ಕೆ ಕುರಿತಾದಂತೆ ಅ್ಯಂಡರ್‍ಸನ್ ಹೀಲಿಯಂ-3ನ್ನು ಆದ್ಯಂತ ಅಧ್ಯಯನ ಮಾಡಿದನು.  1977ರಲ್ಲಿ ಅ್ಯಂಡರ್‍ಸನ್ ನೆವಿಲ್ ಫ್ರಾನ್ಸಿಸ್ ಮಾಟ್ ಹಾಗೂ ಜೇಮ್ಸ್ ಜೊತೆಗೆ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/24/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate