ಅಬ್ದಸ್ , ಸಲಾಂ (1926- ) ೧೯೭೯ ಪಾಕಿಸ್ತಾನ-ಸೈದ್ಧಾಂತಿಕ ಭೌತಶಾಸ್ತ್ರ- ಕ್ಷೀಣ ಬೈಜಿಕ ಬಲ ಹಾಗೂ ವೈದ್ಯುತ್ ಕಾಂತೀಯತೆಗಳ ಐಕ್ಯ ಸಿದ್ಧಾಂತ ಅಭಿವೃದ್ಧಿಗೊಳಿಸಿದಾತ.
ಅಬ್ದಸ್ ಸಲಾಂ, ಈಗಿನ ಪಾಕಿಸ್ತಾನದಲ್ಲಿರುವ ಜಾಂಗ್ ಎಂಬ ಬಹು ಹಿಂದುಳಿದ ಹಳ್ಳಿಯಲ್ಲಿ ಜನಿಸಿದನು. ಅಬ್ಬಸ್‍ನ ತಂದೆ, ಶಿಕ್ಷಕನಾಗಿದ್ದು ಶೈಕ್ಷಣಿಕವಾಗಿ ಬಹು ಹಿಂದುಳಿದಿದ್ದ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದನು. ಮೆಟ್ರಿಕ್ಯುಲೇಷನ ಪರೀಕ್ಷೆಯಲ್ಲಿ ಇಡೀ ಪಂಜಾಬ್ ಪ್ರಾಂತ್ಯಕ್ಕೆ ಮೊದಲನೆಯನಾಗಿ, ದಾಖಲೆ ಅಂಕಗಳಿಸಿದ ಅಬ್ದಸ್ ಲಾಹೋರ್‍ನಿಂದ ಸೈಕಲ್‍ನಲ್ಲಿ ತನ್ನ ಊರಿಗೆ ಬಂದಾಗ, ಇಡೀ ಊರಿಗೆ ಊರೇ ಅವನನ್ನು ಸ್ವಾಗತಿಸಿತು. ವಿದ್ಯಾರ್ಥಿ ವೇತನ ಗಳಿಸಿದ ಅಬ್ದಸ್ ಪಂಜಾಬ್ ವಿಶ್ವವಿದ್ಯಾಲಯದಿಂದ 1946ರಲ್ಲಿ ಎಂ.ಎ ಪದವಿ ಪೂರ್ಣಗೊಳಿಸಿದನು. ಇದೇ ವರ್ಷ ದಕ್ಕಿದ ಅನುದಾನದಿಂದಾಗಿ ಕೇಂಬ್ರಿಜ್‍ನ ಸೇಂಟ್ ಜಾನ್ ಕಾಲೇಜ್ ಸೇರಿದನು. ಇಲ್ಲಿ ಗಣಿತ ಹಾಗೂ ಭೌತಶಾಸ್ತ್ರಗಳೆರಡರಲ್ಲಿ ಅತ್ಯಧಿಕ ಅಂಕ ಗಳಿಸಿ ತೇರ್ಗಡೆ ಹೊಂದಿದನು. 1950ರಲ್ಲಿ ಡಾಕ್ಟರೇಟ್ ಅಧ್ಯಯನಕ್ಕೆ ಮುಂಚೆ ಸಿದ್ಧಪಡಿಸಿದ ಲೇಖನಕ್ಕಾಗಿ ಸ್ಮಿತ್ ಪ್ರಶಸ್ತಿ ಗಳಿಸಿದನು. 1951ರಲ್ಲಿ ಕೇಂಬ್ರಿಜ್‍ನಿಂದ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪದವಿ ಗಳಿಸಿದನು. 1951ರಲ್ಲಿ ಪಾಕಿಸ್ತಾನಕ್ಕೆ ಮರಳಿದ ಅಬ್ದಸ್, ಲಾಹೋರ್‍ನ ಸರ್ಕಾರಿ ಕಾಲೇಜಿನಲ್ಲಿ ಗಣಿತದ ಅಧ್ಯಾಪಕನಾದನು. 1952 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥನಾದನು ಪಾಕಿಸ್ತಾನದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕೆಂದು ಲಂಡನ್‍ನಿಂದ ತಾಯ್ನಾಡಿಗೆ ಬಂದಿದ್ದ ಅಬ್ದಸ್‍ಗೆ ಅತ್ಯಲ್ಪ ಕಾಲದಲ್ಲೇ ಭ್ರಮ ನಿರಸನವಾಯಿತು. ಅಭಿವೃದ್ಧಿಶೀಲ ದೇಶಗಳ ಪ್ರತಿಭಾವಂತರಿಗೆ ಅವಕಾಶಗಳು ಅಲಭ್ಯವಾಗಿರುವುದನ್ನು ಮನಗಂಡ ಅಬ್ಬಸ್ ಮುಂದೆ ಅವರ ನೆರವಿಗಾಗಿ ಟ್ರಸ್ಟೆಯಲ್ಲಿ ಐಸಿಟಿಪಿ ಸಂಸ್ಥೆ ಸ್ಥಾಪಿಸಿದನು. 1954ರಲ್ಲಿ ಕೇಂಬ್ರಿಜ್‍ಗೆ ಹೋಗಿ ಅಲ್ಲಿ ಪ್ರಾಧ್ಯಾಪಕನಾದನು. ಆದರೆ ಅಬ್ದಸ್‍ಗೆ ತಾಯ್ನಾಡಿನ ಸೆಳೆತ ಬಹುವಾಗಿದ್ದಿತು. ಆದ್ದರಿಂದ ಪಾಕಿಸ್ತಾನದ ವೈಜ್ಞಾನಿಕ ನೀತಿ ನಿಯಮಗಳ ರೂಪಿಸಿಕೆಯಲ್ಲಿ ಅಬ್ದಸ್ ಪಾತ್ರ ಗಣನೀಯ. 1954 ರಿಂದ 1974 ರವರೆಗೆ ಅಬ್ದಸ್ ಪಾಕಿಸ್ತಾನದ ಅಧ್ಯಕ್ಷರ ಪ್ರಧಾನ ವೈಜ್ಞಾನಿಕ ಸಲಹೆಗಾರನಾಗಿದ್ದನು. ನಲವತ್ತು ವರ್ಷಗಳಿಗೂ ಅಧಿಕ ಕಾಲದಿಂದ ಮೂಲ ಕಣಗಳ ಸಂಶೋಧನೆಯಲ್ಲಿ ಅಬ್ದಸ್ ಸಲಾಂದು ಜಗದ್ವಿಖ್ಯಾತ ಹೆಸರು. ಈ ವಿಶ್ವದಲ್ಲಿ ಗುರುತ್ವ, ವೈದ್ಯುತ್ ಕಾಂತೀಯತೆ, ಪ್ರಬಲ ಹಾಗೂ ಕ್ಷೀಣ ಬೈಜಿಕವೆಂಬ ನಾಲ್ಕು ಬಗೆಯ ಬಲಗಳಿವೆ. ಪ್ರಬಲ ಹಾಗೂ ಕ್ಷೀಣ ಬಲಗಳು ಪರಮಾಣುವಿನ ಬೀಜದ ಸನಿಹ ಮಾತ್ರ ಪ್ರಭಾವಶಾಲಿಯಾಗಿರುತ್ತವೆ. ಸಲಾಂ ಕ್ಷೀಣ ಬೈಜಿಕ ಬಲ (WEAK NUCLEAR FORCE) ಹಾಗೂ ವೈದ್ಯುತ್‍ಕಾಂತೀಯ ಬಲಗಳ ಸಂಬಂಧವನ್ನು ವಿವರಿಸಿದನು. ವೀಯ್ನ್‍ಬರ್ಗ್ ಹಾಗೂ ಗ್ಲಾಷೋ ಸ್ವತಂತ್ರವಾಗಿ ಇದೇ ವಿವರಣೆ ನೀಡಿದರು. ಈ ಮೂವರು 1979ರ ನೊಬೆಲ್ ಪ್ರಶಸ್ತಿ ಪಡೆದರು. ಇವರ ಸಿದ್ಧಾಂತ ತಟಸ್ಥ ಪ್ರವಾಹಗಳ ಮುನ್ಸೂಚನೆ ನೀಡಿದ್ದಿತು. 1913ರಲ್ಲಿ ಇದು ಪ್ರಯೋಗಗಳಿಂದ ಖಚಿತಗೊಂಡಿತು. ಬಿಡುವು, ರಜೆ, ವಿಶ್ರಾಂತಿ, ಮನರಂಜನೆ ಅಬ್ಬಾಸ್ ದಿನಚರಿಯಿಂದ ದೂರ. ವೈಜ್ಞಾನಿಕ ಚಿಂತನೆ, ಪರಿಶ್ರಮಗಳೇ ಆತನ ಉಸಿರು ಜೀವಾಳ. ಕಣ ಭೌತಶಾಸ್ತ್ರದಲ್ಲಿ ಅಬ್ಬಸ್ ಸಲಾಂನ ಸಾಧನೆಗಾಗಿ 1979ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸ್ವಯಂಪರಿಶ್ರಮ, ಆಸಕ್ತಿಗಳಿಂದ ಅಬ್ದಸ್ ಸಂಸ್ಕೃತದಲ್ಲಿ ಪಾಂಡಿತ್ಯ ಸಂಪಾದಿಸಿದ್ದನು. ಏಕಂ ಸತ್ ವಿಪ್ರಾ ಬಹುಧಾ ವದಂತಿ- ಸತ್ಯವೊಂದೇ ಬಲ್ಲವರು ಬಹು ಬಗೆಯಲ್ಲಿ ಕಾಣುತ್ತ್ತಾರೆ -ಎಂಬ ಉಕ್ತಿ ಅಬ್ದಸ್‍ಗೆ ಬಹು ಮೆಚ್ಚಿಗೆಯಾಗಿದ್ದಿತು
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/17/2020