ಹ್ಯಾನ್ಸ್ , (ಡೇನಿಯಲ್) ಜೆನ್ಸನ್ (ಜೊಹಾನೆಸ್) (1907--)೧೯೬೩
ನೆದರ್’ಲ್ಯಾಂಡ್-ಭೌತಶಾಸ್ತ್ರ-ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕ
ಹ್ಯಾನ್ಸ್‍ನ ತಂದೆ, ತೋಟದ ಉಸ್ತುವಾರಿಗಾರನಾಗಿದ್ದನು. 25 ಜೂನ್ 1907ರಂದು ಹ್ಯಾನ್ಸ್‍ನ ಜನನವಾಯಿತು. ಹ್ಯಾಂಬರ್ಗ್, ಫ್ರೀಬರ್ಗ್‍ಗಳಲ್ಲಿ ಕಾಲೇಜು ಶಿಕ್ಷಣ ಪೂರೈಸಿದ ಹ್ಯಾನ್ಸ್ 1932ರಲ್ಲಿ ಡಾಕ್ಟರೇಟ್ ಗಳಿಸಿದನು. ಹ್ಯಾಂಬರ್ಗ್ ವಿಶ್ವವಿದ್ಯಾಲಯದ ಸೈದ್ಧಾಂತಿಕ ಭೌತಶಾಸ್ತ್ರ ಸಂಸ್ಥೆ ಸೇರಿ, ಅಲ್ಲಿ ವೈಜ್ಞಾನಿಕ ಸಹಾಯಕನಾದನು. 1936 ರಲ್ಲಿ ಹ್ಯಾಂಬರ್ಗ್‍ನಿಂದ ಹ್ಯಾಬಿಲ್ ಕೈಕೆಳಗೆ ಸಂಶೋಧನೆ ಕೈಗೊಂಡು, ಸಂಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಳಿಸಿದನು. 1937 ರಿಂದ ವೃತ್ತಿ ಜೀವನ ಪ್ರಾರಂಭಿಸಿ, 1941ರಲ್ಲಿ ಹ್ಯಾನೋವರ್ ಟೆಕ್ನಿಷ್‍ಹಾಕ್‍ಷುಲೆಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪ್ರಾದ್ಯಾಪಕನಾದನು. 1949ರಲ್ಲಿ ಹೈಡೆಲ್‍ಬರ್ಗ್‍ನಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧಾಪಕನಾಗಿ ನೇಮಕಗೊಂಡನು. 1947ರಲ್ಲಿ ಹ್ಯಾಂಬರ್ಗ್‍ನಲ್ಲಿ ಪ್ರಾಧ್ಯಾಪಕ ಸ್ಥಾನ ದಕ್ಕಿತು. 1969ರಲ್ಲಿ ಫ್ಲೋರಿಡಾದ ಫೋರ್ಟ್ ಲೆಡರ್ ಡೇಲ್‍ನ ಗೌರವ ನಾಗರಿಕನಾಗಿ ಆಯ್ಕೆಗೊಂಡನು. 1947ರಿಂದ ಹ್ಯಾನ್ಸ್ ಹೈಡೆಲ್ ಅಕಾಡೆಮಿ ಆಫ್ ಸೈನ್ಸ್‍ನ ಸದಸ್ಯನಾಗಿದ್ದಾನೆ. 1960 ರಿಂದ ವಿಸ್ಕಾನ್ಸಿನ್, 1952 ರಿಂದ ಪ್ರಿನ್ಸ್’ಟನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಸ್ಟಡಿ, ಬಕ್ರ್ಲೆಯ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/5/2019