অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹ್ಯಾನ್ಸ್, ಆಲ್‍ಬ್ರೆಕ್ಟ್ ಬೆಥೆ

ಹ್ಯಾನ್ಸ್, ಆಲ್‍ಬ್ರೆಕ್ಟ್ ಬೆಥೆ

ಹ್ಯಾನ್ಸ್, ಆಲ್‍ಬ್ರೆಕ್ಟ್ ಬೆಥೆ (1906-2005) ೧೯೬೭

ಜರ್ಮನಿ-ಭೌತಶಾಸ್ತ್ರ-ತಾರೆಗಳಲ್ಲಿನ ಬೈಜಿಕ ಕ್ರಿಯೆಗಳನ್ನು ವಿವರಿಸಿದಾತ.

ಹ್ಯಾನ್ಸ್ 2 ಜುಲೈ 1906 ರಂದು ಸ್ಟ್ರಾಸ್‍ಬರ್ಗ್ ಪ್ರಾಂತದ ಆಲ್ಸೆಸ್ ಲೊರಾಯಿನ್ ಪಟ್ಟಣದಲ್ಲಿ ಜನಿಸಿದನು. 1915ರಿಂದ 1924ರವರೆಗೆ ಫ್ರಾಂಕ್ಫರ್ಟ್‍ನ ಜೆಮ್ನಾಷಿಯಂನಲ್ಲಿ ಓದಿದನು.  ಕಾಲೇಜು ಶಿಕ್ಷಣವನ್ನು ಎರಡು ವರ್ಷ ಫ್ರಾಂಕ್ಫರ್ಟ್ ಹಾಗೂ ಇನ್ನೆರಡು ವರ್ಷ ಮ್ಯೂನಿಕ್‍ಗಳಲ್ಲಿ ಮುಂದುವರಿಸಿದನು.  ಅರ್ನಾಲ್ಡ್  ಝೋಮರ್ಫೆಲ್ಟ್ ಮಾರ್ಗದರ್ಶನದಲ್ಲಿ ಸಂಪ್ರಬಂಧ ಮಂಡಿಸಿ 1928ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದನು.  ನಂತರ ಆರು ತಿಂಗಳ ಕಾಲಫ್ರಾಂ’ಫರ್ಟ್ ಹಾಗೂ ಇನ್ನೂ ಆರು ತಿಂಗಳ ಕಾಲ ಸ್ಟುಟ್‍ಗರ್ಟ್‍ನಲ್ಲಿ ಭೌತಶಾಸ್ತ್ರದ ತರಬೇತುದಾರನಾಗಿದ್ದನು. 1929ರಿಂದ 1933ರ ಅವಧಿಯಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿದ್ದನು.  1930ರಲ್ಲಿ ಅಂತರಾಷ್ಟ್ರೀಯ ಶಿಕ್ಷಣ ಮಂಡಳಿಯಿಂದ ಸಂಶೋಧಕ ವೇತನ ಪಡೆದು, ಇಂಗ್ಲೆಂಡ್‍ಗೆ ಹೋಗಿ, ಕೇಂಬ್ರಿಜ್‍ನಲ್ಲಿ ಉಳಿದನು.  ಇದೇ ಕಾರ್ಯಕ್ರಮದಡಿಯಲ್ಲಿ 1932ರಿಂದ 1933 ರವರೆಗೆ ರೋಮ್‍ನಲ್ಲಿದ್ದನು.  ಇದೇ ಅವಧಿಯಲ್ಲಿ ಟುಬಿನ್‍ಜೆನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಇದು ನಾಝಿಗಳ ಆಡಳಿತ ವಶವಾದಾಗ ಹ್ಯಾನ್ಸ್ ತನ್ನ ಈ ಹುದ್ದೆಯನ್ನು ಕಳೆದುಕೊಳ್ಳಬೇಕಾಯಿತು. 1933ರಲ್ಲಿ ಇಂಗ್ಲೆಂಡ್‍ಗೆ ವಲಸೆ ಹೋಗಿ, ಒಂದು ವರ್ಷದಕಾಲ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಉಪನ್ಯಾಸಕನಾದನು.  1934ರಲ್ಲಿ ಬ್ರಿಸ್ಟಲ್‍ನ ಫೆಲೋಷಿಪ್ ದೊರಕಿತು. 1935ರಲ್ಲಿ ಅಸಂಸಂ ಇಥಾಕಾದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ನೇಮಕಗೊಂಡನು. ಮುಂದಿನ ಎರಡೇ ವರ್ಷಗಳ ಪ್ರಾಧ್ಯಾಪಕನಾಗಿ ಬಡ್ತಿ  ದೊರೆಯಿತು.  ಎರಡನೇ ಜಾಗತಿಕ ಯುದ್ದದ ಕಾಲದಲ್ಲಿ  ಎಂಐಟಿಯ ರೇಡಿಯೇಷನ್ ಲ್ಯಾಬೋರೇಟರಿಯಲ್ಲಿ ಸೂಕ್ಷ್ಮತರಂಗದ ರಡಾರ್ ಸಂಶೋಧನೆಗೆ ನಿಯೋಜಿಸಲ್ಪಟ್ಟನು.  ಇದರ ನಂತರ ಪ್ರಥವi ಬೈಜಿಕಾಸ್ತ್ರ ಜೋಡಣೆಗೊಳಿಸಿದ ಲಾಸ್ ಅಲ್ಮೋಸ್ ಪ್ರಯೋಗಾಲಯಕ್ಕೆ ವರ್ಗಾಯಿಸಲ್ಪಟ್ಟನು.  1952ರಲ್ಲಿ ಆರು ತಿಂಗಳ ಕಾಲ ಈ ಪ್ರಯೋಗಾಲಯದಲ್ಲಿ ಕೆಲಸ ಮಾಡಿದನು. ಹ್ಯಾನ್ಸ್ , ಪೀಲ್ರ್ಸ್ ಸಂಗಡ ಪರಮಾಣು ಬೀಜದ ಸಿದ್ಧಾಂತ ಮಂಡಿಸಿದನು. 1934ರಲ್ಲಿ ಡ್ಯುಟೆರಾನ್ ಸಿದ್ಧಾಂತ ರೂಪಿಸಿ 1949ರಲ್ಲಿ ಅದನ್ನು ವಿಸ್ತರಿಸಿದನು. ಬೈಜಿಕ ದ್ರವ್ಯ ಮಾಪಕದಲ್ಲಿದ್ದ ಕೆಲವು ಅಸಂಗತಗಳನ್ನು ಪರಿಹರಿಸಿದನು. 1935 ರಿಂದ 1938 ರವರೆಗೆ ಬೈಜಿಕ ಪ್ರತಿಕ್ರಿಯೆಗಳ  ಅಧ್ಯಯನ ನಡೆಸಿದ ಹ್ಯಾನ್ಸ್, ಬೊಹ್ರ್ ಸಂಯುಕ್ತ ಬೀಜಗಳ ಸಿದ್ಧಾಂತ ನೀಡಿದನು.  ಹ್ಯಾನ್ಸ್ ಬೈಜಿಕ ಕ್ರಿಯೆಗಳನ್ನು ಕುರಿತಾಗಿ ನಡೆಸಿದ ಅಧ್ಯಯನಗಳು, ತಾರೆಗಳು ಸತತ ಚೈತನ್ಯ ನೀಡುವ ಹಿನ್ನೆಲೆ ಹಾಗೂ ಆಕರಗಳನ್ನು ವಿವರಿಸುವಲ್ಲಿ ಯಶಸ್ವಿಯಾದವು.  ಅತ್ಯಂತ ಉಜ್ವಲ ತಾರೆಗಳಲ್ಲಿ ಇಂಗಾಲ ಸಾರಜನಕ ಚಕ್ರವಿರುವುದೆಂದು ತಿಳಿಸಿದನು. ಸೂರ್ಯನಂತಹ ಮಂಕು ತಾರೆಗಳಲ್ಲಿ ಪ್ರೋಟಾನ್-ಪ್ರೋಟಾನ್ ಚಕ್ರದಿಂದ ಚೈತನ್ಯ ಲಭ್ಯವಾಗುವುದೆಂದು ವಿವರಿಸಿದ ಖ್ಯಾತಿ ಹ್ಯಾನ್ಸ್‍ಗಿದೆ.  ಇದಕ್ಕಾಗಿ ಹ್ಯಾನ್ಸ್ 1967ರ ನೊಬೆಲ್ ಪ್ರಶಸ್ತಿಗೆ ಭಾಜನನಾದನು. 1955ರಿಂದ ನ್ಯೂಕ್ಲಿಯಾನ್‍ಗಳ ಮಧ್ಯದ ಅಂತಕ್ರಿಯೆಯ ಆಧಾರದ ಮೇಲೆ ಪರಮಾಣು ಬೀಜದ ಸ್ವರೂಪದ ವಿವರಣೆಯ ಯತ್ನದಲ್ಲಿದ್ದ ಹ್ಯಾನ್ಸ್ ನಿರತನಾಗಿದ್ದಾನೆ. ಕಣಗಳ ಸಂಘಟನಾ ಸಿದ್ಧಾಂತಕ್ಕೂ ಹ್ಯಾನ್ಸ್ ಕಾಣಿಕೆಯಿತ್ತಿದ್ದಾನೆ. ವೇಗಗಾಮಿ ಕಣ ಹಾಗೂ ಪರಮಾಣುಗಳ  ಸ್ಥಿತಿಸ್ಥಾಪಕ ರಹಿತ ಸಂಘಟನೆಯನ್ನು  ವಿವೇಚಿಸಿ, ಅಧಿಕ ಆವೇಶಿತ ಕಣಗಳನ್ನು ನಿಲ್ಲಿಸಬಲ್ಲ ದ್ರವ್ಯ ನಿರ್ಧಾರ ಮಾಡಿ, ಬೈಜಿಕ ಪ್ರಯೋಗಗಳಿಗೆ ನೆರವಾಗಿದ್ದಾನೆ.  ಪರಮಾಮಾಣುವೊಂದನ್ನು ಸ್ಪಟಿಕವೊಂದಕ್ಕೆ ಸೇರಿಸಿದಾಗ ಪರಮಾಣುವಿನ ಚೈತನ್ಯದ ಮಟ್ಟದಲ್ಲಾಗುವ ವಿಭಜನೆಯನ್ನು ಹೀಟ್ಲರ್‍ನೊಂದಿಗೆ ವಿವರಿಸಿದ್ದಾನೆ.  1947ರಲ್ಲಿ ಜಲಜನಕದ ರೋಹಿತದಲ್ಲಿನ ಲ್ಯಾಂಬ್ ಪಲ್ಲಟಕ್ಕೆ ಕಾರಣ ನೀಡಿ ಆಧುನಿಕ ಕ್ವಾಂಟಂ ವೈದ್ಯುತ್‍ಗತಿಶಾಸ್ತ್ರಕ್ಕೆ ನಾಂದಿ ಹಾಡಿದನು.  ಪೈ-ಮೆಸಾನ್‍ಗಳ ಚದುರಿಕೆ, ವೈದ್ಯುತ್ ಕಾಂತೀಯ ವಿಕಿರಣದಿಂದ ಅವುಗಳ ಉತ್ಪಾದನೆ ಕುರಿತಾಗಿಯೂ ಹ್ಯಾನ್ಸ್ ಸಾಧನೆಗಳು ಗಮನಾರ್ಹ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate