ಹಾಫ್’ಸ್ಟ್ಯಾಡ್ಟರ್, ರಾಬರ್ಟ್ (1915-1990) ೧೯೬೧
ಅಸಂಸಂ-ಭೌತಶಾಸ್ತ್ರಜ್ಞ-ಬೈಜಿಕ ರಚನೆಂಯ ಅಧ್ಯಯನಕ್ಕೆ ಎಲೆಕ್ಟ್ರಾನ್ ಚದುರಿಕೆ ವಿದ್ಯಾಮಾನ ಪರಿಚಯಿಸಿದಾತ.
ನ್ಯೂಯಾರ್ಕ್ ಮತ್ತು ಪಿನ್ಸ್‍ಟನ್‍ನಿಂದ ಪದವಿ ಪಡೆದ ಹಾಫ್’ಸ್ಟ್ಯಾಡ್ಟರ್ ನಾರ್ಡನ್ ಲ್ಯಾಬ್ ಕಾರ್ಪೋರೇಷನ್‍ನಲ್ಲಿ ಕೆಲಸಕ್ಕೆ ಸೇರಿದನು. 1954ರಲ್ಲಿ ಸ್ಟ್ಯಾನ್’ಫೋರ್ಡ್‍ನಲ್ಲಿ ಪ್ರಾಧ್ಯಾಪಕನಾದನು. 1967 ರಿಂದ 1974ರವರೆಗೆ ಸ್ಟ್ಯಾನ್’ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಅಧಿಕ ಚೈತನ್ಯ ಪ್ರಯೋಗಾಲಯದ ನಿರ್ದೇಶಕನಾದನು. 1948ರಲ್ಲಿ ಹಾಫ್ಸ್ಟೆಟರ್ ಥ್ಯಾಲಿಯಂನಿಂದ ಕ್ರಿಯಾಶೀಲಗೊಳಿಸಲ್ಪಟ್ಟ ಸೋಡಿಯಂ ಅಯೋಡೈಡ್ ಬಳಸಿ ,ಮಿನುಗುವ ಗಣನಾಯಂತ್ರ ನಿರ್ಮಿಸಿದನು. ಹಾಫ್’ಸ್ಟ್ಯಾಡ್ಟರ್ ನಡೆಸಿದ ಪ್ರಯೋಗಗಳಿಂದ ಪ್ರೋಟಾನ್ ಮತ್ತು ನ್ಯೂಟ್ರಾನ್ ಬಿಂದು ಮಾತ್ರ ಕಣಗಳಾಗಿರದೆ ಅವುಗಳಿಗೆ ಗಾತ್ರ ಮತ್ತು ಆಕಾರ ಇದೆಯೆಂದು ತಿಳಿದು ಬಂದಿತು. ಇನ್ನು ಮುಂದುವರೆದು ಪರಸ್ಪರ ಆವಿಷ್ಟ ನಿರಸನಗೊಳ್ಳುವ ಮೆಸಾನ್‍ಗಳಿಂದ ಇವು ನಿರ್ಮಿಸಲಟ್ಟಿವೆಯೆಂದು ಒಪ್ಪಲಾಯಿತು. ಹಾಫ್ಸ್ಟೆಟರ್ ಮುನ್ನುಡಿದಂತೆ, ರೋ-ಮೆಸಾನ್ ಹಾಗೂ ಒಮೆಗಾ ಮೆಸಾನ್‍ಗಳು ಬೇರೆಯವರ ಪ್ರಯೋಗಗಳಲ್ಲಿ ಪತ್ತೆಯಾದವು. 1961ರ ನೊಬೆಲ್ ಪ್ರಶಸ್ತಿಯನ್ನು ಹಾಫ್’ಸ್ಟ್ಯಾಡ್ಟರ್ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019