ಲ್ಯಾಂಡೋ, ಲೆವ್, ಡೆವಿಡೋವಿಟ್ಚ್ (1908-1968) ೧೯೬೨
ರಷ್ಯಾ-ಸೈದ್ಧಾಂತಿಕ ಭೌತಶಾಸ್ತ್ರ- ಹೀಲಿಯಂ ವಿಶಿಷ್ಟ ಗುಣಗಳನ್ನು ವಿವರಿಸಿದಾತ.
ಲ್ಯಾಂಡೋ, ಪೆಟ್ರೋಲಿಯಂ ಇಂಜಿನಿಯರ್‍ನ ಮಗ. ಬಾಕು, ಲೆನಿನ್‍ಗ್ರಾಡ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿದನು. 1929ರಲ್ಲಿ ಕೊಪೆನ್‍ಹೇಗ್‍ನಲ್ಲಿ ಬೊಹ್ರ್‍ನ ಭೇಟಿ ಮಾಡಿದನು, ಮುಂದೆ ಇದು ಬಹು ಫಲಪ್ರದವಾದ ಸ್ನೇಹವಾಗಿ ಮಾರ್ಪಟ್ಟಿತು. 1932ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ಕಾರ್ಖೋವ್‍ಗೆ ಹೋದ ಲ್ಯಾಂಡೋ, 1935ರಲ್ಲಿ ಅಲ್ಲಿ ಪ್ರಾಧ್ಯಾಪಕನಾದನು. ಕಬ್ಬಿಣವನ್ನು ಹೋಲುವ ಕೆಲವು ಪದಾರ್ಥಗಳಲ್ಲಿ, ಕೆಲವು ನಿರ್ದಿಷ್ಟ ವಲಯಗಳಲ್ಲಿ ಪರಮಾಣು ಮಟ್ಟದಲ್ಲಿ ಕಾಂತತ್ವ ನೆಲೆಗೊಂಡಿರುತ್ತದೆ. ಇದು ಫೆರೋಕಾಂತೀಯತೆ (Ferromagnetism) ಇವುಗಳ ಗಣಿತೀಯ ಅಧ್ಯಯನವನ್ನು ಲ್ಯಾಂಡ್ಲೊ ನಡೆಸಿದನು. 1937ರಲ್ಲಿ ಮಾಸ್ಕೋದಲ್ಲಿ ಸ್ಥಾಪನೆಗೊಂಡಿದ್ದ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಪ್ರಾಬ್ಲಮ್ಸ್ ಸಂಸ್ಥೆಗೆ ಕಪಿಟ್ಸಾ ನಿರ್ದೇಶಕನಾಗಿದ್ದನು. ಈತ ಲ್ಯಾಂಡೋನನ್ನು ಅನ್ವಯಿಕ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿ ಬರುವಂತೆ ಅಹ್ವಾನವಿತ್ತನು. ಇಲ್ಲಿ ಲ್ಯಾಂಡೋ, ಸೈದ್ಧಾಂತಿಕ ಭೌತಶಾಸ್ತ್ರ, ಕ್ವಾಂಟಂ ಬಲವಿಜ್ಞಾನ ,ಕಣ ಭೌತಶಾಸ್ತ್ರ, ಕ್ವಾಂಟಂ ಮೈದ್ಯುತ್ ಗತಿಶಾಸ್ತ್ರಗಳಿಗೆ ಭದ್ರ ಬುನಾದಿ ಹಾಕಲು ಶ್ರಮಿಸಿದನು, ಇ.ಎಂ. ಲಿಫ್ಷಿಟ್ಜ್ ಜೊತೆಗೂಡಿ, 1938ರಿಂದ ಲ್ಯಾಂಡೋ ಜಗತ್ಪ್ರಸಿದ್ದ ಪಠ್ಯ ಪುಸ್ತಕಗಳ ಸರಣಿಯನ್ನು ಪ್ರಕಟಿಸಿದನು, ಲ್ಯಾಂಡೋ, 2.19 ಕೆಲ್ವಿನ್‍ಗಿಂತ ಕೆಳಗಿನ ತಾಪಮಾನದಲ್ಲಿ ಸ್ನಿಗ್ದತೆ (Viscosity) ಇಲ್ಲವಾಗುವುದರ ಕಾರಣ ನೀಡಿದನು. ಹೀಲಿಯಂ 2 ರ ಅತಿವಾಹಕತ್ವದ ಗುಣಗಳನ್ನು ವಿವರಿಸಿದನು. ಲ್ಯಾಂಡೋನನ್ನು ಜರ್ಮನಿಯ ಗೂಢಚಾರನೆಂಬ ಸಂಶಯದ ಮೇಲೆ ಬಂಧಿಸಲಾಯಿತು. ಕಪಿಲ್ಸಾ ಇದನ್ನು ಬಲವಾಗಿ ವಿರೋಧಿಸಿದನು. ಲ್ಯಾಂಡೋ 1962ರ ನೊಬೆಲ್ ಪ್ರಶಸ್ತಿ ಪಡೆದನು. 1962ರಲ್ಲಿ ಮೋಟರ್ ಸೈಕಲ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡನು. ಈತನ ಹನ್ನೊಂದು ಮೂಳೆಗಳು ಮುರಿದು ಬುರಡೆ ಸೀಳಿತು. ಲ್ಯಾಂಡೋ ಇದಾದ ನಂತರ ಚೇತರಿಸಿಕೊಳ್ಳಲಾಗದೆ ಆರು ವರ್ಷಗಳ ಕಾಲ ನೋವನ್ನು ಅನುಭವಿಸಿ ಮರಣ ಹೊಂದಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/6/2019