ಬಸೊವ್,ನಿಕೊಲಾಯ್ (ಗೆನ್ನೆಡಿಯೆವಿಚ್) (1922--) -೧೯೬೪
ರಷ್ಯಾ- ಭೌತಶಾಸ್ತ್ರ-ಲೇಸರ್ ಹಾಗೂ ಮೇಸರ್ ಉಪಜ್ಞೆಕಾರ.
ಎರಡನೇ ಜಾಗತಿಕ ಯುದ್ದದಲ್ಲಿ ಕೆಂಪು ಸೇನೆಯಲ್ಲಿ ಸೇವೆ ಸಲ್ಲಿಸಿದ ಬಸೊವ್ ನಂತರ ಮಾಸ್ಕೋದಲ್ಲಿ 1956ರಲ್ಲಿ ಡಾಕ್ಟೋರೇಟ್ ಗಳಿಸಿದನು. ನಂತರ 1962ರಲ್ಲಿ ಅದೇ ವಿಶ್ವ ವಿದ್ಯಾಲಯದ, ವಿಭಾಗ ಮುಖ್ಯಸ್ಥನಾದನು. 1952ಎಂದ ಬಸೊವ್, ಉದ್ರೇಕಿತ ಪರಮಾಣುಗಳನ್ನು ವಿಶ್ರಾಂತಿಗೊಳಿಸಿ ಅವುಗಳು ವಿಕಿರಣ ಸೂಸುವಂತೆ ಮಾಡುವುದರ ಮೂಲಕ ವೈದ್ಯುತ್ ಕಾಂತೀಯ ವಿಕಿರಣವನ್ನು ವರ್ಧನೆಗೊಳಿಸುವ ಸಾಧ್ಯತೆಯ ಬೆನ್ನು ಹತ್ತಿದನು. ಬಸೋವ್‍ನ ಸಹೋದ್ಯೋಗಿಯಾಗಿದ್ದ ಎ.ಎಂ. ಪೆÇ್ರಖೊರೋವ್ ಅನಿಲಗಳು ಹೊರಸೂಸುವ ಸೂಕ್ಷ್ಮ ತರಂಗಗಳ ಕರಾರುವಕ್ಕಾದ ಆವರ್ತನೆ ನಿರ್ಧರಿಸುವಲ್ಲಿ ನಿರತನಾಗಿದ್ದನು. 1955ರಲ್ಲಿ ಇವರಿಬ್ಬರೂ ಸೇರಿ ವೈದ್ಯುತ್ ಕಾಂತೀಯ ವಿಕಿರಣವನ್ನು ವರ್ಧನೆಗೊಳಿಸುವ,ಉದ್ರೇಕಿತ ಅಣುಗಳ ದೂಲಗಳನ್ನು ಪಡೆದರು. ಹಾಗೂ ಅದರ ತಯಾರಿಕೆಗೆ ಬಳಸಿದ ಉಪಯೋಗಿಸಿದ ಸಲಕರಣೆಗಳನ್ನು ಮೆಸರ್ ಎಂದು ಕರೆದರು. (MASER- Microwave Amplication by Stimulated Emission of Radiation ) ಬಸೊವ್, ಪ್ರೊಖೊರೋವ್ ಹಾಗೂ ಅಸಂಸಂಗಳಲ್ಲಿ ಸ್ವತಂತ್ರವಾಗಿ ಇದೇ ಬಗೆಯ ಅಧ್ಯಯನದಲ್ಲಿ ನಿರತವಾಗಿದ್ದ ಟೌನೆಸ್ 1964ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. ಬಸೊವ್ ಹಾಗೂ ಪ್ರೊಖೊರೊವ್ ಇನ್ನು ಮುಂದುವರೆದು, 1958ರಲ್ಲಿ ಲೇಸರ್ (LASER- Light Amplication by Stimulated Emission of Radiation ) ಉಪಜ್ಞೆಗೊಳಿಸಿದರು. ಅರೆವಾಹಕಗಳಲ್ಲಿ ಲೇಸರ್ ಪರಿಣಾಮ ಸಾಧ್ಯವೆಂದು ತೋರಿಸಿದರು.ಬಸೊವ್ ಹಾಗೂ ಫ್ರೊಖರೊವ್, ಮಿಡಿತದ ಲೇಸರ್, ಬೆಳಕಿನೊಂದಿಗೆ ದ್ರವ್ಯದ ಅಂತಕ್ರಿಯೆಯ ಬಗೆಗೂ ಕುರಿತಾದಂತೆಯೂ ಗಮನಾರ್ಹ ಸಂಶೋಧನೆ ನಡೆಸಿದ್ದಾರೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 3/30/2020