ನೆಯಲ್,ಲೂಯಿಸ್ (ಯೂಜಿನ್, ಫೆಲಿಕ್ಸ್) –(1904--) ೧೯೭೦
ಫ್ರಾನ್ದ್-ಭೌತಶಾಸ್ತ್ರ- ಪ್ರತಿ ಫೆರೋಕಾಂತೀಯತೆ (Anti Ferromagnetism)ಅನಾವರಣಕಾರ.
ಎಕೊಲೆ ನಾರ್ಮಲ್ ಸುಪೀರಿಯರ್‍ನಿಂದ ಪದವಿಗಳಿಸಿದ ನೆಯಲ್, ಪಿ.ವೀಸ್‍ನ ಕೆಳಗೆ ಸ್ಟ್ರಾಸ್‍ಬೋರ್ಗ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದನು. 1940ರಲ್ಲಿ ಗ್ರೆನೋ ಬಿಲ್‍ಗೆ ಹೋಗಿ ಅದನ್ನು ಫ್ರಾನ್ಸಿನ ಅತ್ಯುತ್ತಮ ವೈಜ್ಞಾನಿಕ ಕೇಂದ್ರವಾಗುವಂತೆ ಶ್ರಮಿಸಿದನು. 1956ರಲ್ಲಿ ಬೈಜಿಕ ಅಧ್ಯಯನ ಕೇಂದ್ರದ ನಿರ್ದೇಶಕನಾದನು. ನೇಯಲ್, ಘನಗಳಲ್ಲಿನ ಕಾಂತತ್ವದ ಬಗೆಗೆ ಸಂಶೋಧಿಸಿದನು. 1936ರಲ್ಲಿ ವಿಶಿಷ್ಟ ಬಗೆಯದಾದ ಕಬ್ಬಿಣ ವಿರೋಧಿ ಕಾಂತತ್ವ ಅಸ್ತಿತ್ವದಲ್ಲಿರುವ ಮುನ್ಸೂಚನೆ ನೀಡಿದನು. ಕಬ್ಬಿಣದ ಕಾಂತಗಳಲ್ಲಿ ಎಲೆಕ್ಟ್ರಾನ್‍ನ ಗಿರಕಿ ಒಂದೇ ದಿಶೆಯಲ್ಲಿ ಪಂಜ್ತೀಕರಣಗೊಂಡಿದ್ದರೆ (Alignment) , ಕಬ್ಬಿಣ ವಿರೋದಿ ಸಾಮಾಗ್ರಿಗಳಲ್ಲಿ ಇವು ಪರಸ್ಪರ ವಿರುದ್ದ ದಿಕ್ಕಿನಲ್ಲಿ ಮೇಲೆ, ಕೆಳಗೆ ಪಂಜ್ತೀಕರಣಗೊಂಡಿರುತ್ತವೆ. ಒಂದು ನಿರ್ದಿಷ್ಟ ತಾಪಮಾನ ತಲುಪಿದ ನಂತರ ಇವು ಅನುಕಾಂತತೆಯತ್ತ ಹೊರಳುತ್ತವೆ. 1938ರಲ್ಲಿ ನೇಯಲ್‍ನ ಮುನ್ಸೂಚನೆ ಸರಿಯೆಂದು ಪ್ರಯೋಗಗಳಿಂದ ಸಾಬೀತಾದರೆ, 1940ರಲ್ಲಿ ನ್ಯೂಟ್ರಾನ್ ವಕ್ರೀಭವನದಿಂದ (Refraction)ಇದು ಖಚಿತಗೊಂಡಿತು ಇದು ಎಲೆಕ್ಟ್ರಾನಿಕ್ಸ್‍ನಲ್ಲಿ ¨ಹು ಉಪಯೋಗಿ ವಿದ್ಯಾಮಾನವಾಗಿ ಪರಿಗಣಿತವಾಗಿದೆ. 1970ರಲ್ಲಿ ನೇಯಲ್ ನೊಬೆಲ್ ಪ್ರಶಸ್ತಿ ಪಡೆದನು. ಭೂ ಕಾಂತತ್ವ ಚರಿತ್ರೆಯ ನಿರ್ಧಾರದಲ್ಲಿ ನೇಯಲ್ ಶ್ರಮಿಸಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/24/2019