অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಟೌನೆಸ್, ಚಾಲ್ರ್ಸ್ ಹಾರ್ಡ್

ಟೌನೆಸ್, ಚಾಲ್ರ್ಸ್ ಹಾರ್ಡ್

ಟೌನೆಸ್, ಚಾಲ್ರ್ಸ್ ಹಾರ್ಡ್ (1915--) ೧೯೬೪

ಅಸಂಸಂ-ಭೌತಶಾಸ್ತ್ರ- ಮೇಸರ್ ಸಿದ್ಧಾಂತ ನೀಡಿದಾತ.

ಟೌನೆಸ್, ವಕೀಲನ ಮಗನಾಗಿದ್ದನು. ಫರ್ಮನ್ , ಡ್ಯೂಕ್ ವಿಶ್ವವಿದ್ಯಾಲಯ ಕ್ಯಾಲ್‍ಟೆಕ್‍ಗಳಿಂದ ಶಿಕ್ಷಣ ಪೂರೈಸಿದನು.  ಬೆಲ್ ಟೆಲಿಫ್ಲೋನ್ ಲ್ಯಾಬೋರೇಟಎಯಲ್ಲಿ ನೌಕರಿ ಪ್ರಾರಂಭಿಸಿದ ಟೌನೆಸ್, ಎರಡನೇ ಜಾಗತಿಕ ಯುದ್ದದಲ್ಲಿ ರಡಾರ್ ವಲಯದಲ್ಲಿ ಕೆಲಸ ಮಾಡಿದನು.  ರಡಾರ್‍ಗಳು ರೇಡಿಯೋ ಹಾಗೂ ಅವಗೆಂಪು ಕಿರಣ ತರಂಗ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.  ಟೌನೆಸ್, 1947ರಲ್ಲಿ ಕೊಲಂಬಿಯಾದ ಭೌತಶಾಸ್ತ್ರ ವಿಭಾಗಕ್ಕೆ ಸೇರಿದನು.  1961ರಿಂದ 1967ರವರೆಗೆ  ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿದ್ದು  ನಂತರ ಕ್ಯಾಲೊಪೋರ್ನಿಯಾದಲ್ಲಿ ಪ್ರಾಧ್ಯಾಪಕನಾದನು. 1945ರ ವೇಳೆಗೆ ಟೌನೆಸ್, ಪರಮಾಣು ಒಂದು ವಿನ್ಯಾಸದಿಂದ ಇನ್ನೊಂದು ವಿನ್ಯಾಸಕ್ಕೆ ಬದಲಾದಾಗ, ಫ್ಲೋಟಾನ್‍ಗಳನ್ನು ಉತ್ಸರ್ಜಿಸುವ ಅಥಾವ ಹೀರುವ ವಿದ್ಯಾಮಾನದ ಅಧ್ಯಯನ ನಡೆಸಿದ್ದನು.  ಈ ಕ್ರಿಯೆಯಲ್ಲಿ ಫ್ಲೋಟಾನ್‍ಗಳು ನಿರ್ದಿಷ್ಟ ಅವಸ್ಥೆಗಳಲ್ಲಿರುತ್ತವೆ.  ಉದಾಹರಣೆಗೆ ಹೇಳುವುದಾದರೆ ಕೊಡೆಯನ್ನು ಹೊರ ಬಿಚ್ಚುವ ಅಥಾವಾ ಒಳಗೆಳೆಯುವ ಕಾರ್ಯದ ಹೋಲಿಕೆಯಲ್ಲಿ ಅಮೋನಿಯಾ ಪರಮಾಣುಗಳು ಎರಡು ಸ್ಥಿತಿಗಳಲ್ಲಿರಬಲ್ಲವು.  ಇಂತಹ ಸ್ಥಿತಿ ಜರುಗಿದಾಗಲೆಲ್ಲ ಈ ಪರಮಾಣುಗಳು 1.25 ಸೆಂ.ಮೀ ತರಂಗಾಂತರದ ಸೂಕ್ಷ್ಮ ತರಂಗದ ಹೀರಿಕೆಯಲ್ಲಿರುತ್ತವೆ.  ಇಂತಹ ಕ್ರಿಯೆಯನ್ನು ವರ್ಧಿಸಿ ವೀಕ್ಷಿಸಲು ಸಾಧ್ಯವೆಂದು ಐನ್‍ಸ್ಟೀನ್ ಹೇಳಿದ್ದನು.  ಟೌನೆಸ್, ಇಂತಹ ವರ್ಧಕವನ್ನು 1954ರಲ್ಲಿ ನಿರ್ಮಿಸಿ ಮೇಸರ್ ಎಂದು ಕರೆದನು. (MASER-Microwave AmpliCAtion by Sïtimulated Emmusion of Radiation= ಪ್ರೇರಿತ ವಿಕಿರಣ ಉತ್ಸರ್ಜನೆಯಿಂದ ಸೂಕ್ಷ್ಮ ತರಂಗ ವರ್ಧನೆ) ಟೌನೆಸ್ ಅನುಸರಿಸಿದಂತಹ ತಂತ್ರಗಳನ್ನು ರಷ್ಯದಲ್ಲಿ ಪ್ರೊಖೊರೊವ್ ಹಾಗೂ ಬಸೋವ್ ವಿವರಿಸಿದ್ದರು. ಮೇಸರ್ ಅಲ್ಪ ಕಾಲದಲ್ಲೇ ಪರಮಾಣು ಗಡಿಯಾರ, ರೇಡಿಯೋ ದೂರದರ್ಶಕ ಹಾಗೂ ವ್ಯೋಮಾಂತರಿಕ್ಷ ಸಂಪರ್ಕಗಳಲ್ಲಿ ಅಳವಡಿಸಲ್ಪಟ್ಟಿತು. ಟೌನೆಸ್ ಹಾಗೂ ಷ್ವಾಲೋ , ಸೂಕ್ಷ್ಮ ತರಂಗಗಳಂತೆ ಬೆಳಕನ್ನು ಸಹ ವರ್ಧಿಸಿ ಲೇಸರ್ ಪಡೆಯಲು ಸಾಧ್ಯವೆಂದು ಹೇಳಿದರು. ಪ್ರೇರಿತ ವಿಕಿರಣ ಉತ್ಸರ್ಜನೆಯಿಂದ ಬೆಳಕಿನ ವರ್ಧನೆ  1960ರಲ್ಲಿ ವ್ಯಾವಹಾರಿಕ ಬಳಕೆಗೆ ನೆರವಾಗಬಲ್ಲ ಲೇಸರ್‍ಗಳು “ಮೈಮಾನ್‍ನಿಂದ  ನಿರ್ಮಾಣಗೊಂಡವು. 1964ರಲ್ಲಿ ಟೌನೆಸ್, ಬಸೋವ್ ಹಾಗೂ ಪ್ರೊಖೊರೊವ್ ನೊಬೆಲ್ ಪ್ರಶಸ್ತಿಗೆ ಪಾತ್ರರಾದರು.  ಇದು ಕ್ವಾಂಟಂ ಎಲೆಕ್ಟ್ರಾನಿಕ್ಸ್‍ಗೆ ನಾಂದಿಯಾಯಿತು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 11/18/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate