ಗೆಲ್‍ಮನ್,ಮುರ್ರೆ (1929--)೧೯೬೯
ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ- ಮೂಲ ಕಣಗಳ ಸ್ವರೂಪ, ಲಕ್ಷಣ ತಿಳಿಯಲು ಸಮೂಹ ಸಿದ್ಧಾಂತ ಬಳಸಿದಾತ.
ಗೆಲ್‍ಮನ್ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು, 22ನೇ ವರ್ಷಕ್ಕೆ ಡಾಕ್ಟರೇಟ್ ಗಳಿಸಿದನು. ಎನ್ರಿಕೊ ಫರ್ಮಿಯ ಮಾರ್ಗದರ್ಶನದಲ್ಲಿ ದುಡಿದ ಗೆಲ್ ಮಾನ್ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೆ ಸೇರಿ,1967ರಲ್ಲಿ ಅಲ್ಲಿಯೆೀ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಗೆಲ್‍ಮನ್, 24ನೇ ವಯಸ್ಸಿನಲ್ಲಿರುವಾಗ, ಮೂಲಕಣಗಳ ಸೈದ್ಧಾಂತಿಕ ಅಧ್ಯಯನಕ್ಕೆ ಮಹತ್ತರವಾದ ಹೊಸ ದೃಷ್ಟಿ ನೀಡಿದನು. ಗೆಲ್‍ಮನ್ ಯಾವುದೇ ಪ್ರಬಲ ಬೈಜಿಕ ಅಂತಕ್ರಿಯೆ (Nuclear Interaction), ನಡೆದಾಗಲೂ , ಉಳಿಸಲೇ ಕೊಳ್ಳಬೇಕಾದ ಕ್ವಾಂಟಂ ಸಂಖ್ಯೆಯೊಂದನ್ನು ಪರಿಚಯಿಸಿದನು. ಇದನ್ನು ಸೈದ್ಧಾಂತಿಕವಾಗಿ ‘ಸ್ಟ್ರೇಂಜ್‍ನೆಸ್’ ಎಂದು ಕರೆಯಲಾಗುತ್ತದೆ. ಗೆಲ್‍ಮನ್ ಮತ್ತು ಸ್ವತಂತ್ರವಾಗಿ ನೀಮನ್ ‘ಸ್ಟ್ರೆಂಜ್‍ನೆಸ್’ ತತ್ತ್ವ ಬಳಸಿ ಮೂಲ ಕಣಗಳನ್ನು 1,8,10 ಅಥವಾ 27ರ ಗುಣಿಕೆಯ ಗುಂಪುಗಳಾಗಿ ವರ್ಗೀಕರಿಸಿದರು. ಪ್ರತಿಯೊಂದು ಈ ಬಗೆಯ ವರ್ಗವೂ, ಸಮಾಂಗೀಯತೆಯ ಅಭಿಕರ್ಮದಿಂದ (Symmetrical Operator), ಸಂಬಂಧಗೊಳಿಸಲ್ಪಟ್ಟಿದ್ದಿತು. ಗೆಲ್‍ಮನ್ ಸಿದ್ಧಾಂತ ಮತ್ತು ಲೆಕ್ಕಚಾರಗಳು ಒಮೆಗಾ-ಮೈನಸ್ ಎನ್ನುವ ಮೂಲಕಣ ಅಸ್ತಿತ್ವದಲ್ಲಿದೆಯೆಂದು ಮುನ್ನಡಿದವು. 1964ರಲ್ಲಿ ಪ್ರಯೋಗಾಲಯದಲ್ಲಿ ಮೊದಲ ಬಾರಿಗೆ ಈ ಕಣಗಳನ್ನು ಗುರುತಿಸಲಾಯಿತು. ಇದೇ ವರ್ಷ ಗೆಲ್‍ಮನ್ ಜಿ. ಝ್ವೀಗ್ ಜೊತೆ ಸೇರಿ, ಕ್ವಾರ್ಕ್‍ಗಳ ಪರಿಕಲ್ಪನೆ ನೀಡಿದರು. ಕ್ವಾರ್ಕ್‍ಗಳಿಗೆ 1/3,2/3 ವಿದ್ಯುದಾವೇಶವಿದ್ದು, ಇವುಗಳಿಂದ ಬೇರೆಯ ಹ್ಯಾಡ್ರನ್ಸ್ ನಂತಹ ಬೈಜಿಕ ಕಣಗಳನ್ನು ಪಡೆಯುವುದು ಸಾಧ್ಯ. ಈಗ ಒಟ್ಟು ಆರು ಬಗೆಯ ಕ್ವಾರ್ಕ್‍ಗಳನ್ನು ಒಪ್ಪಲಾಗಿದ್ದು, ಇವುಗಳಲ್ಲಿ ಐದನ್ನು 1964ರಲ್ಲೇ ಪತ್ತೆ ಹಚ್ಚಲಾಯಿತಾದರೂ, ಆರನೆಯದು 1995ರವರೆಗೆ ಸಿಕ್ಕಿರಲಿಲ್ಲ. ಕ್ಷೀಣ ಬೈಜಿಕ ಬಲಗಳ (Weak Nuclear Forces)ಬಗೆಗೆ ಫೆಯ್ನ್‍ಮನ್ ಜೊತೆ ಸೇರಿ ಗೆಲ್‍ಮನ್ ಗಮನಾರ್ಹ ಕೊಡುಗೆಯನ್ನು ನೀಡಿದ್ದಾನೆ. ಗೆಲ್‍ಮನ್ 1969ರ ನೊಬೆಲ್ ಪ್ರಶಸ್ತಿಯಿಂದ ಗೌರವಿತನಾಗಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019