ಆಲ್ಫ್ರೆಡ್, ಕ್ಯಾಸ್'ಟ್ಲರ್ (1902--) 1966
ಭೌತಶಾಸ್ತ್ರ- ದೃಗ್ ಅನುರಣನ ಹಾಗೂ ಕಾಂತೀಯ ಅನುರಣನಗಳ ಸಂಗಮ ವಿಧಾನ ಪರಿಚಯಿಸಿದಾತ.
ಆಲ್ಫ್ರೆಡ್ 3 ಮೇ 1902ರಂದು ಅಲ್ಲಾಸೆಸ್ ಪ್ರಾಂತದ ಮ್ಯಾಬವೆಲರ್‍ನಲ್ಲಿ ಜನಿಸಿದನು. 1921ರಲ್ಲಿ ಎಕೊಲೆ ನಾರ್ಮಲೆ ಸುಪೀರಿಯರ್ ಸೇರಿದ ಆಲ್ಫ್ರೆಡ್ 1926ರಲ್ಲಿ ಉಪನ್ಯಾಸಕನಾU ಲೈಸಿಗೆ ಮರಳಿದನು. ವಿದ್ಯಾರ್ಥಿಯಾಗಿದ್ದಾಗ ತನ್ನ ಉಪನ್ಯಾಸಕನಿಂದ ಝೋಮರ್¥sóÉಲ್ಟ್ ಅಣು ರಚನೆ ಹಾಗೂ ರೋಹಿತದ ಸಾಲುಗಳ ಬಗೆಗೆ ಬರೆದಿದ್ದ ಪುಸ್ತಕದ ಪರಿಚಯವಾಯಿತು. ಇದು ಮುಂದೆ ಆಲ್ಫ್ರೆಡ್‍ನ ಸಂಶೋಧನೆಗಳಿಗೆ ಕಾರಣವಾಯಿತು. ಉದ್ರೇಕಿತ ಸ್ಥಿತಿಯಲ್ಲಿದ್ದ ಪರಮಾಣುಗಳ ಅಧ್ಯಯನಕ್ಕಾಗಿ, ಆಲ್ಫ್ರೆಡ್ ದ್ವಿಗುಣ ಅನುರಣನ (ಆoubಟe ಖesoಟಿಚಿಟಿಛಿe) ವಿಧಾನ ಪರಿಚಯಿಸಿದನು. ಇದು ದೃಗ್ ಅನುರಣನ ಹಾಗೂ ಕಾಂತೀಯ ಅನುರಣನ ವಿಧಾನಗಳ ಸಂಗಮವಾಗಿದ್ದಿತು. ಈ ಸಾಧನೆಗಾಗಿ 1966ರಲ್ಲಿ ಆಲ್ಫ್ರೆಡ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020