ಆಲ್ಫ್’ವೆಯ್ನ್, ಹ್ಯಾನ್ನೀಸ್ ಒಲೋಫ್ ಗೋಸ್ಟ (1908-95) -1970
ಸ್ವೀಡನ್-ಸೈದ್ಧಾಂತಿಕ ಭೌತಶಾಸ್ತ್ರ - ಪ್ಲಾಸ್ಲಾ ಭೌತಶಾಸ್ತ್ರದ ಮುಂಚೂಣಿಗ
ಉಪ್ಸಾಲಾ ನಗರದಲ್ಲಿ ಶಿಕ್ಷಣ ಪಡೆದ ಆಲ್ಫ್’ವೆಯ್ನ್ 1967ರವರೆಗೆ ಸ್ವೀಡನ್‍ನಲ್ಲಿದ್ದು ನಂತರ ಕ್ಯಾಲಿಫೋರ್ನಿಯಾಕ್ಕೆ ಸಾಗಿದನು. ಈತನ ಸಂಶೋಧನೆಗಳು ಕಾಂತೀಯ ಹಾಗೂ ವೈದ್ಯುತ್ ಪ್ರಭಾವದಡಿಯಲ್ಲಿ ಪ್ಲಾಸ್ಲಾ ವರ್ತಿಸುವ ಬಗೆಗೆ ಮೀಸಲಾಗಿದ್ದವು. 1942ರಲ್ಲಿ ಅಲ್ಫ್’ವೆಯ್ನ್ ಪ್ಲಾಸ್ಮಾದಲ್ಲಿ ಕಾಂತೋ-ಜಲಗತಿಶೀಲ ಅಲೆಗಳು (Magneto-Hydrodynamic) ಇರುವುದರ ಮುನ್ಸೂಚನೆ ನೀಡಿದನು. ನಂತರ ಅವುಗಳ ಅಸ್ತಿತ್ವ ಖಚಿತಗೊಂಡು ಆಲ್ಫ್‍ವೆಯ್ನ್ ತರಂಗಗಳೆಂದು ಹೆಸರಾದವು. ಆಲ್ಫ್‍ವೆಯ್ನ್ ಪರಿಕಲ್ಪನೆಗಳನ್ನು ತಾರಾ ಪ್ಲಾಸ್ಮಾಗಳಿಗೂ ಹಾಗೂ ಪ್ರಯೋಗಾರ್ಥದ ಬೈಜಿಕ ಸದಳನ ಪ್ರತಿಕ್ರಿಯಾಕಾರಗಳಿಗೂ (Nuclear Fusion Reactor ) ಅನ್ವಯಗೊಂಡವು. ಕಾಂತೋ ಜಲಗತಿಶೀಲ ಕ್ಷೇತ್ರದಲ್ಲಿನ ಸಂಶೋಧನೆಗಳಿಗಾಗಿ 1970 ನೊಬೆಲ್ ಪ್ರಶಸ್ತಿಯನ್ನು ಲೂಯಿ ಯೂಜಿನ್ ಫೆಲಿಕ್ಸ್ ವೀಲ್'ನೊಂದಿಗೆ ಹಂಚಿಕೊಂಡನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/19/2019