ಅಲ್ಪರೆಝ್ ಲೂಯಿ, ವಾಲ್ಟರ್ (1911-1988) -1968
ಅಸಂಸಂ-ಭೌತಶಾಸ್ತ್ರ-ಬೈಜಿಕ ಕಣಗಳ ಅಧ್ಯಯನದ ಮುಂದಾಳು.
ಲೂಯಿ ಕ್ಯಾಲಿಫೊರ್ನಿಯಾದ ಚಿಕಾಗೋ ವಿಶ್ವವಿದ್ಯಾಲಯದಿಂದ ವಿಜ್ಞಾನದ ಪದವಿಯನ್ನು 1934ರಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದನು. 1936ರಲ್ಲಿ ಡಾಕ್ಟರೇಟ್ ಗಳಿಸಿ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ರೇಡಿಯೇಷನ್ ಲ್ಯಾಬೋರೇಟರಿ ಸೇರಿ ವೃತ್ತಿ ಜೀವನ ಪ್ರಾರಂಭಿಸಿದನು. ಕಾಂಪ್ಟನ್‍ನ ಶಿಷ್ಯನಾಗಿದ್ದ ಅಲ್ವಾರೆಝ್ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ ಲಾರೆನ್ಸ್‍ನೊಂದಿಗೆ ಸೇರಿದನು. ಅಲ್ಲೇ ಉಳಿದ ಈತ 1945ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಭೌತಶಾಸ್ತ್ರದ ವಿಭಿನ್ನ ಶಾಖೆಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದ ಅತಿ ವಿಶಿಷ್ಟ ವಿಜ್ಞಾನಿ ಅಲ್ವಾರೆಝ್. 1940ರಿಂದ 1943 ರವರೆಗೆ ಎಂಐಟಿಯಲ್ಲಿದ್ದನು. ನಂತರ ಮೂರು ವರ್ಷ ಚಿಕಾಗೋ”ವಿಶ್ವವಿದ್ಯಾಲಯದ ಲೋಹ ತಂತ್ರಜ್ಞಾನ ಪ್ರಯೋಗಾಲಯದಲ್ಲಿದ್ದು 1944 ರಿಂದ 1945 ರವರೆಗೆ ಮ್ಯಾನಹಟನ್‍ನ ಲಾಸ್ ಆಲ್ಮೋಸ್ ಪ್ರಯೋಗಾಲಯದಲ್ಲಿದ್ದನು. ಲೂಯಿ ವೃತ್ತಿ ಜೀವನದ ಆರಂಭದಲ್ಲಿ ದೃಕ್ ಶಾಸ್ತ್ರ ಹಾಗೂ ವಿಶ್ವ ಕಿರಣಗಳಲ್ಲಿ ಆಸಕ್ತಿ ಹೊಂದಿದ್ದನು. ವಿಶ್ವ ಕಿರಣಗಳ ಪೂರ್ವ ಪಶ್ಚಿಮ ಪರಿಣಾಮವನ್ನು ಆವಿಷ್ಕರಿಸಿದನು. ಅಲ್ವರೆಝ್ ಕಕ್ಷೀಯ ಎಲೆಕ್ಟ್ರಾನ್ (Orbital Electron) ಸೆರೆ ಹಿಡಿತದ ವಿದ್ಯಾಮಾನವನ್ನು ಅನಾವರಣಗೊಳಿಸಿದನು. ಈ ವಿದ್ಯಾಮಾನದಂತೆ ಪರಮಾಣುವಿನ ಬೀಜ, ಕಕ್ಷೆಯಲ್ಲಿ ಸುತ್ತುತ್ತಿರುವ ಎಲೆಕ್ಟ್ರಾನ್‍ನನ್ನು ಸೆರೆಹಿಡಿದು, ಕಡಿಮೆ ಪೆÇೀಟಾನ್ ಸಂಖ್ಯೆಯ ಬೀಜಕ್ಕೆ ಕಾರಣವಾಗುತ್ತದೆ. ಲೂಯಿ ,ಹಲವಾರು ವರ್ಷಗಳ ಕಾಲ ಬೈಜಿಕ ಭೌತಶಾಸ್ತ್ರದಲ್ಲಿ ಕಾರ್ಯ ನಿರತನಾಗಿದ್ದನು. 1937ರಲ್ಲಿ ಪರಮಾಣುಮಿನ ಬೀಜ ಕೆ ಎಲೆಕ್ಟ್ರಾನ್‍ನ್ನು ಮೊದಲ ಬಾರಿಗೆ ಪ್ರಯೋಗಗಳಿಂದ ತೋರಿಸಿದನು. ಅತಿ ನಿಧಾನಗತಿಯ ನ್ಯೂಟ್ರಾನ್ ದೂಲಗಳನ್ನು (Neutron Beams) ಪಡೆಯುವ ವಿಧಾನವನ್ನು ಲೂಯಿ ರೂಪಿಸಿದನು. ಇದು ಮುಂದೆ ಆರ್ಥೋ ಹಾಗೂ ಪ್ಯಾರಾ ಜಲಜನಕದಲ್ಲಿ ನ್ಯೂಟ್ರಾನ್ ಚದುರಿಕೆಯ ತಪಾಸಣೆಗೆ ನೆರವಾಯಿತು. ಬ್ಲಾಕ್ ಜೊತೆ ಗೂಡಿ, ನ್ಯೂಟ್ರಾನ್ ಕಾಂತೀಯ ಭ್ರಾಮ್ಯತೆಯನ್ನು (magnetic Moment) ಲೂಯಿ ಅಳೆದನು. ಲೂಯಿ ಹಾಗೂ ವೀನ್ಸ್ ಸೇರಿ 198 ಪಾದರಸ ದೀಪ ತಯಾರಿಸಿದರು. ಇದನ್ನು ಪರಿಷ್ಕರಿಸಿದ ಬ್ಯೂರೋ ಆಫ್ ಸ್ಟ್ಯಾಂಡರ್ಡ್ರ್ಸ್ ನವರು ಉದ್ದದ ಅಳತೆಯನ್ನು ವ್ಯಾಖ್ಯಾನಿಸಲು ಬಳಸಿದರು.
ಜಾಗತಿಕ ಯುದ್ದಕ್ಕಿಂತ ಸ್ವಲ್ಪ ಮೊದಲೇ ಲೂಯಿ ಹಾಗೂ ಕಾರ್ನೊಗೆ ಟ್ರೈಷಿಯಂನ ವಿಕಿರಣಶೀಲತೆಯನ್ನು ಪತ್ತೆ ಹಚ್ಚಿ ಇದು, ಸಾಮಾನ್ಯ ಹೀಲಿಯಂನ ಸ್ಥಿರ ಘಟಕವೆಂದು ತೋರಿಸಿದರು. ಟ್ರೈಟಿಯಂ, ಮುಂದೆ ಅತ್ಯುತ್ತಮ ಔಷ್ಣೀಯ ಬೈಜಿಕ ಚೈತನ್ಯದ ಆಕರವೆಂದು (Thermo-Nuclear Energy) ಸಾಬೀತಾಗಿ, ಹೀಲಿಯಂ ನಿಮ್ನ ತಾಪಮಾನಗಳ ಸಂಶೋಧನೆಯಲ್ಲಿ ಬಳಕೆ ಕಂಡಿತು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಎಂಐಟಿಯಲ್ಲಿ ಸೂಕ್ಷ್ಮ ತರಂಗ ಶೀಘ್ರ ಎಚ್ಚರಿಕೆ ವ್ಯವಸ್ಥೆ, ಅತ್ಯುನ್ನತ ಎತ್ತರದಿಂದ ಅಸ್ತ್ರವೆಸಗುವ ವ್ಯವಸ್ಥೆ ಭೂ ನಿಯಂತ್ರಿತ ವಿಮಾನ ಇಳಿಕೆ ವ್ಯವಸ್ಥೆಗಳನ್ನು ಕುರಿತಾಗಿ ಸಂಶೋಧನೆಗೆ ನಿಯೋಜಿಸಲ್ಪಟ್ಟನು. ಅಲ್ಮೋಸ್ ಪ್ರಯೋಗಾಲಯಗಳಲ್ಲಿ ಪ್ಲುಟೋನಿಯಂ ಅಣ್ವಸ್ತ್ರಗಳನ್ನು ಸಿಡಿಸುವ ಸಲಕರಣೆಗಳನ್ನು ಅಭಿವೃದ್ಧಿಗೊಳಿಸಿದನು. ಅಲ್ಮಗೋರ್ಡ್‍ನಲ್ಲಿ ನಡೆದ ಪ್ರಯೋಗಾತ್ಮಕ ಪರಮಾಣು ಅಸ್ತ್ರ ಸ್ಪೋಟ ಹಾಗೂ ಹಿರೋಷಿಮಾಗಳ ಮೇಲೆ ನಡೆಸಿದ ಪರಮಾಣು ಅಸ್ತ್ರ ದಾಳಿಯ ಪರಿಣಾಮಗಳ ವೈಜ್ಞಾನಿಕ ವೀಕ್ಷಕನಾಗಿ ಲೂಯಿ ನಿಯೋಜಿತನಾಗಿದ್ದನು. 1947ರಲ್ಲಿ ಬಕ್ರ್ಲೆಯಲ್ಲಿ ಪೂರ್ಣಗೊಂಡ 12 ಮೀ ವ್ಯಾಸದ ಪ್ರೊಟಾನ್ ಸರೇಖೀಯ ವೇಗೋತ್ಕರ್ಷಕದ (Accelarator) ವಿನ್ಯಾಸ ಹಾಗೂ ನಿರ್ಮಾಣ ನಿರ್ವಹಣೆಯನ್ನು ಲೂಯಿ ಯಶಸ್ವಿಯಾಗಿ ಮುಗಿಸಿದನು. 1951ರಲ್ಲಿ ಆವಿಷ್ಟ ವರ್ಗಾಂತರಿತ ವೇಗೋತ್ಕರ್ಷವನ್ನು ವಿವರಿಸಿದರು. ಇದಾದ ನಂತರ ಕ್ಯಾಲಿ¥sóÉÇೀರ್ನಿಯಾದ ರೇಡಿಯೇಷನ್ ಲ್ಯಾಬೋರೇಟರಿಯಲ್ಲಿ 600 ಕೋಟಿ ಎಲೆಕ್ಟ್ರಾನ್ ವೋಲ್ಟ್ ಬಳಸುವ ಬೆವೆಟ್ರಾನ್‍ನಲ್ಲಿ ಅಧಿಕ ಚೈತನ್ಯದ ಕಣಗಳನ್ನು ಕುರಿತಾಗಿ ಅಧ್ಯಯನ ನಡೆಸಿದನು. ಬೃಹತ್ ಗಾತ್ರದ ಬುದ್ಭುದ ಕೋಠಿಗಳನ್ನು(Buble Chamber) ಅವುಗಳಲ್ಲಿ ಪಡೆಯಲಾಗುವ ಲಕ್ಷಾಂತರ ಛಾಯಾಚಿತ್ರಗಳನ್ನು ವಿಶ್ಲೇಷಿಸುವ ಸಾಧನಗಳನ್ನು ನಿರ್ಮಿಸಲು ಲೂಯಿ ಯತ್ನಿಸಿದನು. ಇದರ ಫಲವಾಗಿ ಲೂಯಿ ಹಾಗೂ ಸಂಗಡಿಗರು, ಅಜ್ಞಾತವಾಗಿದ್ದ ಹಲವಾರು ಮೂಲ ಕಣಗಳನ್ನು ಪತ್ತೆ ಹಚ್ಚಿದರು.
1967ರ ನಂತರ ಲೂಯಿ ಬಲೂನ್‍ಗಳನ್ನು ಬಳಸಿ ವಿಶ್ವ ಕಿರಣಗಳ ಅಧ್ಯಯನ ನಿರತನಾದನು. ಲೂ¬ ನಿರಂತರ ಸಾಧನೆಗಳಿಗಾಗಿ 1968ರಲ್ಲಿ ನೊಬೆಲ್ ಪ್ರಶಸ್ತಿ ದಕ್ಕಿತು. ಲೂಯಿಸ್ ನ್ಯಾಷನಲ್ ಅಡಾಡೆಮಿ ಆಫ್ ಸೈನ್ಸ್ ಅಮೆರಿಕನ್ ಫಿûಲಾಸಫಿûಕಸಿಕಲ್ ಸೊಸೈಟಿ, ಅಮೆರಿಕನ್ ಫಿಸಿಕಲ್ ಸೊಸೈಟಿ ಅಮೆರಿಕನ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಆಟ್ರ್ಸ್ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್‍ನ ಸದಸ್ಯನಾಗಿದ್ದನು. ವಿಮಾನಗಳ ಭೂ ನಿಯಂತ್ರಿತ ಇಳಿಕೆ ವ್ಯವಸ್ಥೆ ಕುರಿತಾಗಿ ನಡೆಸಿದ ಸಂಶೋಧನೆಗಳಿಗಾಗಿ 1946ರಲ್ಲಿ ನ್ಯಾಷನಲ್ ಏರೋನಾಟಿಕಲ್ ಅಸೋಸಿಯೇಷನ್‍ನಿಂದ ಕೊಲಿಯರ್ ಟ್ರೋಫಿ ಹಾಗೂ ಫಿಲೆಡೆಲ್ಪಿಯಾ ನಗರದ ವತಿಯಿಂದ ಮೆಡಲ್ಯಾಂಡ್ ಪ್ರಶಸ್ತಿಯಿಂದ ಸನ್ಮಾನಿತನಾದನು. ಕ್ಯಾಲಿಫೊರ್ನಿಯಾದಿಂದ 1960ರಲ್ಲಿ ವರ್ಷದ ವಿಜ್ಞಾನಿಯೆಂದು ಗೌರವಿತನಾದನು. 1961ರಲ್ಲಿ ಐನ್‍ಸ್ಟೀನ್ ಪ್ರಶಸ್ತಿ 1963ರಲ್ಲಿ ಪಯೋನಿಯರ್ ಪ್ರಶಸ್ತಿ 1964ರಲ್ಲಿ ವಿಜ್ಞಾನದ ರಾಷ್ಟ್ರೀಯ ಪದಕ ಹಾಗೂ 1965ರಲ್ಲಿ ಮೈಖೇಲ್‍ಸನ್ ಪ್ರಶಸ್ತಿಗಳು ಲೂಯಿನನ್ನು ಅರಸಿ ಬಂದವು. ಅಲ್ಪಾರೆಝ್ ಭೌತಶಾಸ್ತ್ರವನ್ನು ಅನ್ವಯಗೊಳಿಸುವಲ್ಲಿ ಅನನ್ಯ ಪ್ರತಿಭೆ ನೈಸರ್ಗಿಕ ವಿಶ್ವ ವಿಕಿರಣದಲ್ಲಿನ ಕ್ಷ-ಕಿರಣದ ಘಟಕ ಬಳಸಿ, ವಿಶ್ವ ವಿಖ್ಯಾತವಾದ ಈಜಿಪ್ತಿನ ಷೆಫ್ರೆನ್ ಪಿರಮಿಡ್‍ನಲ್ಲಿ ಯಾವುದೇ ಗುಪ್ತ ಕೊಠಡಿ ಇಲ್ಲವೆಂದು ತೋರಿಸಿದನು. ಭೌತಶಾಸ್ತ್ರದ ನೆರವಿನೊಂದಿಗೆ ಜಾನ್ ಎಫ್ ಕೆನಡಿಯ ಹಂತಕ ಒಬ್ಬನೇ ಎಂದು ನಿರೂಪಿಸಿದನು. ಮಗನಾದ ವಾಲ್ಟರ್ ಜೊತೆ ಸೇರಿ , ಆರೂವರೆ ಕೋಟಿ ವರ್ಷಗಳ ಹಿಂದೆ ಡೈನೋಸರಾಸ್ ಸಂತತಿ ಅಳಿಯಲು, ಕಾರಣವಾದ, ನೈಸರ್ಗಿಕ ಉತ್ಪಾತವನ್ನು ಕುರಿತಾಗಿ ಸಂಶೋಧನೆ ನಡೆಸಿದನು. ಈ ಸಂಶೋಧನೆಯಿಂದ ಭೂಮಿಗೆ ಅಪ್ಪಳಿಸಿದ ಉಲ್ಕೆಯಿಂದ ಉದ್ಭವಿಸಿದ ಬೆಂಕಿ, ಅಥವಾ ಕವಿದ ಧೂಳಿನಿಂದ ಡೈನೋಸಾರಸ್ ಸಂತತಿ ಕೊನೆಗೊಂಡಿರಬಹುದೆಂದು, ವಾದಿಸಿದನು. ಕನ್ನಡಕಧಾರಿಯಾಗಿದ್ದ ಅವನಿಗೆ ದ್ವಿನಾಭಿ ಮಸೂರಗಳು (Bifocal Lenses) ಆರಾಮದಾಯಕವಲ್ಲವೆನಿಸಿ ಎರಡು ದೃಗೋಪಕರಣ ಕಂಪನಿಗಳನ್ನು ಸ್ಥಾಪಿಸಿದನು. ಒಂದು ಕಂಪನಿ ವ್ಯತಸ್ತನಾಭಿ (Variable Focus) ಮಸೂರ ಮಾಡಿದರೆ, ಮತ್ತೊಂದು ದೃಗ್ ಸ್ಥಿರಕಾರಕ ನಿರ್ಮಾಣದಲ್ಲಿ ನಿರತವಾಯಿತು. ಈ ಸ್ಥಿರಕಾರಕ ಸಿನಿಮಾ ಕ್ಯಾಮೆರಾ ಹಾಗೂ ದುರ್ಬೀನುಗಳಲ್ಲಿನ ಅಲುಗಾಟವನ್ನು ನಿವಾರಿಸುತ್ತದೆ. ಬೇರೆ ವಿಜ್ಞಾನಿಗಳಿಗೆ ಹೋಲಿಸಿದಂತೆ ಆಲ್ಪಾರೆಝಜದು ಬಹು ವಿಭಿನ್ನ ವ್ಯಕ್ತಿ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/12/2019