ಸೆಗ್ರೆ ಎಮಿಲಿಯೋ ಜಿನೊ (1905-1989) ೧೯೫೯
ಇಟಲಿ-ಅಸಂಸಂ ಭೌತಶಾಸ್ತ್ರ-ಪ್ರತಿ ಪ್ರೋಟಾನ್ ಅನಾವರಣಗೊಳಿಸಿದಾತ.
ಸೆಗ್ರೆ, ರೋಮ್‍ನಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನಾದರೂ 1927ರಲ್ಲಿ ಭೌತಶಾಸ್ತ್ರ ವಿಭಾಗಕ್ಕೆ ಬದಲಾಯಿಸಿಕೊಂಡನು. ಇಲ್ಲಿಫರ್ಮಿ ಕೈಕೆಳಗೆ ಮೊದಲ ಸಂಶೋಧನಾ ವಿದ್ಯಾರ್ಥಿಯಾದನು. 1928ರಲ್ಲಿ ಡಾಕ್ಟರೇಟ್ ಗಳಿಸಿದನು. ಸೆಗ್ರೆ ,ಪಾಲೆರ್ಮೋ ಪ್ರಯೋಗಾಲಯಗಳ ನಿರ್ದೇಶಕ ಸ್ಥಾನಕ್ಕೇರಿದನು. 1938ರಲ್ಲಿ ಯಹೂದಿಯೆಂಬ ಕಾರಣಕ್ಕೆ ಆ ಹುದ್ದೆಯಿಂದ ಉಚ್ಛಾಟಿಸಲ್ಪಟ್ಟನು. ನಂತರ ಅಸಂಸಂಗಳಿಗೆ ಹೋಗಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ ಸೇರಿದನು. ಎರಡನೇ ಜಾಗತಿಕ ಯುದ್ದದಲ್ಲಿ ಪರಮಾಣು ಅಸ್ತ್ರ ತಯಾರಿಕೆಯ ಮ್ಯಾನ್‍ಹಟನ್ ಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸಿದನು. ಸೆಗ್ರೆ 1937ರಲ್ಲಿ ಟೆಕ್ನೇಷಿಯಂ 1940ರಲ್ಲಿ ಅಸ್ಟಟೈನ್ ಹಾಗೂ ಪ್ಲುಟೋನಿಯಂ ಎಂಬ ಮೂರು ಹೊಸ ಧಾತುಗಳನ್ನು ಅನಾವರಣಗೊಳಿಸಿದ ತಂಡದಲ್ಲಿ ಪ್ರಮುಖನಾಗಿದ್ದನು. ಸೈಕ್ಲೊಟ್ರಾನ್‍ನಲ್ಲಿ, ಮಾಲಿಬ್ಡಿನಮ್ ಧಾತುವನ್ನು ಡ್ಯುಟೋರಿಯಂ ಬೀಜದಿಂದ ವಿನಾಶಗೊಳಿಸಿ, ಟೆಕ್ನೇಷಿಯಂ ಪಡೆಯಲಾಯಿತು. ಇದು ಜಗತ್ತಿನಲ್ಲಿ ಮೊಟ್ಟ ಮೊದಲು ಕೃತಕವಾಗಿ ಸೃಜಿತಗೊಂಡ ಧಾತುವಾಗಿದೆ. ಟೆಕ್ನೇಷಿಯಂ ವಿಕಿರಣಶೀಲವಾಗಿದ್ದು , ಇದರ ಸಮಸ್ಥಾನಿ ವೈದ್ಯಕೀಯದಲ್ಲಿ ಬಳಕೆಯಾಗುತ್ತದೆ. ಎರಡನೇ ಜಾಗತಿಕ ಯುದ್ದದ ನಂತರ ಸೆಗ್ರೆ, ಡಿರಾಕ್‍ನಿಂದ ಮುನ್ಸೂಚಿಸಲ್ಪಟ್ಟಿದ್ದ, ಪ್ರೋಟಾನ್‍ನ ಪ್ರತಿಕಿರಣ ಹುಡುಕಲು ಯತ್ನಿಸಿದನು. 1955ರಲ್ಲಿ ಬಕ್ರ್ಲೆ ಬೆವಟ್ರಾನ್ ಪ್ರೋಟಾನ್ ಅ್ಯಕ್ಸಿಲರೇಟರ್‍ನಲ್ಲಿ ಪ್ರೋಟಾನ್ ಪ್ರೋಟಾನ್‍ನ್ನು ತಾಮ್ರದ ಲಕ್ಷ್ಯದ ಮೇಲೆ ಘಟ್ಟಿಸಿ, ಪ್ರತಿ ಪ್ರೋಟಾನ್ ಪಡೆಯಲಾಯಿತು. 1959ರಲ್ಲಿ ಸೆಗ್ರೆ ಹಾಗೂ ಚೇಂಬರ್‍ಲಿನ್ ಪ್ರತಿಪ್ರೋಟಾನ್ ಅನಾವರಣಗೊಳಿಸಿದ್ದಕ್ಕೆ ನೊಬೆಲ್ ಪ್ರಶಸ್ತಿ ಪಡೆದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020