ವಿಲ್ಲೀಸ್, ಯುಜೀನ್ ಲ್ಯಾಂಬ್ (1913--) ೧೯೫೫
ಅಸಂಸಂ-ಭೌತಶಾಸ್ತ್ರ-
ವಿಲ್ಲೀಸ್‍ನ ತಂದೆ ಲಾಂಸ್ ಏಂಜಲೇಸ್‍ನಲ್ಲಿ ದೂರವಾಣಿ ಇಂಜಿನಿಯರಾಗಿದ್ದನು. 12 ಜುಲೈ 1913 ರಂದು ವಿಲ್ಲೀಸ್ ಜನಿಸಿದನು. ಮೊದಲ ಮೂರು ವರ್ಷಗಳ ಶಿಕ್ಷಣವನ್ನು ಓಕ್‍ಲ್ಯಾಂಡ್ ಹಾಗೂ ಕ್ಯಾಲಿಫ್ಲೋರ್ನಿಯಾಗಳಲ್ಲಿ ಪಡೆದ ವಿಲ್ಲೀಸ್ ನಂತರ ಕ್ಯಾಲಿಫ್ನ ಸಾರ್ವಜನಿಕ ಶಾಲೆ ಸೇರಿದನು. ಇದೇ ವಿಶ್ವವಿದ್ಯಾಲಯದಿಂದ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪದವಿ ಗಳಿಸಿ, ಶಿಕ್ಷಣ ಮುಂದುವರೆಸಿ 1938ರಲ್ಲಿ ಡಾಕ್ಟರೇಟ್ ಗಳಿಸಿದನು. ಇದೇ ವರ್ಷ ಕೊಲಂಬಿಯಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸೇರಿದನು. 1943ರಲ್ಲಿ ಸಹಾಯ ಉಪನ್ಯಾಸಕನಾಗಿ, 1945ರಲ್ಲಿ ಉಪ ಪ್ರಾಧ್ಯಾಪಕನಾದನು. 1943ರಿಂದ 1951ರವರೆಗೆ ಕೊಲಂಬಿಯಾ ರೇಡಿಯೇಷನ್ ಲ್ಯಾಬೋರೇಟರಿಯಲ್ಲಿ ಸಂಶೋಧನಾ ಸಹಾಯಕನಾಗಿದ್ದನು. 1951ರಲ್ಲಿ ಕ್ಯಾಲಿಫ್ಲೋರ್ನಿಯಾದ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯ ಸೇರಿ, ಅಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1953, 54 ರಲ್ಲಿ ಹಾವರ್ಡ್‍ನಲ್ಲಿ ವಿಶೇಷ ಉಪನ್ಯಾಸಕನಾದನು. 1956ರಿಂದ 1962ರ ವರೆಗೆ, ಇಂಗ್ಲೆಂಡ್ ನ್ಯೂ ಕಾಲೇಜ್‍ನ ಫೆಲೊಹಾಗೂ ವೈಕ್‍ಹೆಮ್ ಪ್ರಾಧ್ಯಾಪಕನಾದನು. ಇದಾದ ನಂತರ ಯೇಲ್ “ವಿಶ್ವವಿದ್ಯಾಲಯದ್ಫಲ್ಲಿ ಸೇವೆ ಸಲ್ಲಿಸಿದನು. ನ್ಯೂಟ್ರಾನ್ ಹಾಗೂ ದ್ರವ್ಯದ ಅಚಿತಕ್ರಿಯೆ, ಬೈಜಿಕ ರಚನೆಗಳ ಕ್ಷೇತ್ರ ಸಿದ್ಧಾಂತ (Nuclear Field Theory) , ಬೀಟಾ ಶೈಥಿಲ್ಯ (Decay) ಸಿದ್ಧಾಂತ, ವಿಶ್ವ ಕಿರಣಗಳಲ್ಲಿ ವಿದಳನಗೊಂಡ ಅವಶೇಷಗಳ ಏರಿಳಿತ ಕ್ರಮ ಕ್ರಮಭಂಗ ಸಮಸ್ಯೆಗಳು ವಿಲ್ಲೀಸ್‍ನ ಆಸಕ್ತಿಯ ವಿಷಯಗಳಾಗಿದ್ದವು. ಅಧಿಕ ಸ್ಥಿರ ಪರಮಾಣುಗಳಿಂದ ಎಲೆಕ್ಟ್ರಾನ್ ಉತ್ಸರ್ಜನೆ, ಬೈಜಿಕ ಅನುರಣನ ಪ್ರಯೋಗಗಳಿಗೆ ಬೇಕಾದ ತಿದ್ದುಪಡಿ, ಮ್ಯಾಗ್ನೆಟಾನ್ ಆಂದೋಳಕಗಳ (Oscillator) ಸಿದ್ಧಾಂತ ಹಾಗೂ ವಿನ್ಯಾಸ ಸೂಕ್ಷ್ಮತರಂಗ ರೋಹಿತಶಾಸ್ತ್ರ ಸಿದ್ಧಾಂತದಲ್ಲಿ ವಿಲ್ಲೀಸ್‍ಗೆ ವಿಶೇಷ ಪರಿಣಿತಿಯಿದ್ದಿತು. ಜಲಜನಕ, ಹೀಲಿಯಂ, ಡ್ಯುಟೋರಿಯಂಗಳ ಸೂಕ್ಷ್ಮ ರಚನೆ ವೈದ್ಯುತ್‍ಗತೀಯ ಚೈತನ್ಯ ಮಟ್ಟಗಳ ಪಲ್ಲಟಗಳ ಸಿದ್ಧಾಂತಗಳಲ್ಲಿ ವಿಲ್ಲೀಸ್ ಗಮನಾರ್ಹ ಕಾಣಿಕೆ ನೀಡಿದ್ದಾನೆ. 1953ರಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಆಟ್ರ್ಸ್ ಅಂಡ್ ಸೈನ್ಸ್‍ನಿಂದ ರಮ್ಫೋರ್ಡ್ ಪ್ರೀಮಿಯಂ ಪ್ರಶಸ್ತಿ ಗಳಿಸಿದನು. 1954ರಲ್ಲಿ ಪೆನ್‍ಸಿಲ್ವೇನಿಯಾದಿಂದ ಗೌರವ ಡಾಕ್ಟರೇಟ್ ಲಭಿಸಿತು. ಅಸಂಸಂದ ನ್ಯಾಷನಲ್ ಅಕಾಡೆಮಿ ಆಫ ಸೈನ್ಸ್‍ನ ಹಾಗೂ ಅಮೆರಿಕನ್ ಫಿಸಿಕಲ್ ಸೊಸೈಟಿಯ ಸದಸ್ಯನಾಗಿಯೂ ವಿಲಿಯಂ ಸೇವೆ ಸಲ್ಲಿಸಿದನು. 1955ರಲ್ಲಿ ವಿಲ್ಲೀಸ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/17/2020