ಲೀ, ಸುಂಗ್ ಡೆವೊ (1926--) ೧೯೫೭
ಚೀನಾ-ಅಸಂಸಂ-ಸೈದ್ಧಾಂತಿಕ ಭೌತಶಾಸ್ತ್ರ- ಕ್ಷೀಣ ಬೈಜಿಕ ಕ್ರಿಯೆಗಳಲ್ಲಿ (Weak Nuclear Interactions) ಸಾಮ್ಯತೆ (Parity) ಸಂರಕ್ಷಿಸಲ್ಪಡದೆಂದು ತೋರಿಸಿದಾತ.
ಲೀ ಸುಂಗ್ ಚೀನಾದಲ್ಲಿ ಭೌತಶಾಸ್ತ್ರದಲ್ಲಿ ಪದವಿ ಗಳಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಜಪಾನ್, ಚೀನಾದ ಮೇಲೆ ಆಕ್ರಮಣವೆಸಗಿದುದರಿಂದ ಲೀಯ ಅಧ್ಯಯನಕ್ಕೆ ತಡೆಯುಂಟಾಯಿತು. ಹೀಗಾಗಿ ಲೀ ಚೀನಾದ ಮತ್ತೊಂದು ದೂರ ಪ್ರಾಂತಕ್ಕೆ ಪಲಾಯನಗೈದನು. 1946ರಲ್ಲಿ ಅನುದಾನ ಪಡೆದು, ಖಭೌತಶಾಸ್ತ್ರದಲ್ಲಿ ಫರ್ಮಿಯ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಅವಕಾಶ ಗಳಿಸಿದನು. ಪ್ರಿನ್ಸ್’ಟನ್, ಕೊಲಂಬಿಯಾಗಳಲ್ಲಿಕೆಲಸ ಮಾಡಿದನು. ವೈದ್ಯುತ್ ಕಾಂತೀಯ ಹಾಗೂ ಪ್ರಬಲ ಬೈಜಿಕ ಅಂತಕ್ರಿಯೆಗಳು ಸ್ಥೂಲದಲ್ಲಿರುವಂತೆ, ಸೂಕ್ಷ್ಮದಲ್ಲೂ ಒಂದೇ ಬಗೆಯದಾಗಿದ್ದು ಸರ್ವ ಸಮಂಜಸವಾಗಿರುತ್ತದೆ. 1956ರಲ್ಲಿ ಯಾಂಗ್ ಜೊತೆಗೂಡಿ ಲೀ ಇದು ಕ್ಷೀಣ ಬೈಜಿಕ ಕ್ರಿಯೆಗಳಿಗೆ ಅನ್ವಯವಾಗುವುದಿಲ್ಲವೆಂದು ತೋರಿಸಿದನು. ಇದಕ್ಕಾಗಿ ಇವರು ಬೀಜದ ಬೀಟಾ ಶ್ಶೆಥಿಲ್ಯವನ್ನು (Decay) ಪರಿಗಣಿಸಿದರು. ಹಲವಾರು ಪ್ರಯೋಗಗಳನ್ನು ಪರಿಶೋಧನೆಗಾಗಿ ರೂಪಿಸಿದರು. ಈ ಪ್ರಯೋಗಗಳನ್ನು ಪರಾಮರ್ಶಿಸಿ, ಲೀ ಹಾಗೂ ಯಾಂಗ್ ತಮ್ಮ ಹೇಳಿಕೆ ನಿಜವೆಂದು ಸಾರಿದರು. ಅತಿ ಹಗುರವಾದ ತಟಸ್ಥ ಕಣವನ್ನು ನ್ಯೂಟ್ರಿನೋ ಎನ್ನುತ್ತಾರೆ. ಲೀ ಹಾಗೂ ಯಾಂಗ್ ಎಲೆಕ್ಟ್ರಾನ್‍ನ ಉತ್ಸರ್ಜನೆಯಲ್ಲಿ ಹೊಮ್ಮಿದ ನ್ಯೂಟ್ರಿನೋ , ಮ್ಯುಯಾನ್‍ನ ಉತ್ಸರ್ಜನೆಯಲ್ಲಿ ಹೊಮ್ಮುವ ನ್ಯೂಟ್ರಿನೋಗಿಂತ ವಿಭಿನ್ನವಾಗಿರುತ್ತದೆಯೆಂದು ಹೇಳಿದರು. 1961ರಲ್ಲಿ ಇದನ್ನು ಪ್ರಯೋಗಗಳಿಂದ ಖಚಿತಪಡಿಸಲಾಯಿತು. ಕ್ಷೀಣ ಬೈಜಿಕ ಬಲ ಹೊಂದಿದ ಡಬ್ಲ್ಯೂ -ಬೊಸಾನ್‍ನ ಅಸ್ತಿತ್ವವನ್ನು ಲೀ ಹಾಗೂ ಯಂಗ್ ಮುನ್ನುಡಿದರು. ನಂತರ ಇದು ಪ್ರಯೋಗಗಳಿಂದ ಖಚಿತಗೊಂಡಿತು. 1977ರಲ್ಲಿ ಲೀ ಹಾಗೂ ಯಾಂಗ್ ನೊಬೆಲ್ ಪುರಸ್ಕೃತರಾದ ಮೊದಲ ಚೀನಿಯರಾದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/17/2020