ಯಾಂಗ್, ಷೆನ್‍ನಿಂಗ್ (1922--) ೧೯೫೭
ಚೀನಾ-ಅಸಂಸಂ-ಭೌತಶಾಸ್ತ್ರ- ಕ್ಷೀಣ ಬೈಜಿಕ ಕ್ರಿಯೆಗಳಲ್ಲಿ ಕ್ರಿಯಾ ಸಾಮ್ಯಾತೆ ಸಂರಕ್ಷಿಸಲ್ಪಡದೆಂದು ತೋರಿಸಿದಾತ.
ಯಾಂಗ್‍ನ ತಂದೆ ಗಣಿತದ ಪ್ರಾಧ್ಯಾಪಕನಾಗಿದ್ದನು. ಚೀನಾದ ಕುನ್‍ಮಿಂಗ್‍ನಲ್ಲಿ ಶಿಕ್ಷಣ ಪೂರೈಸಿದ ಯಾಂಗ್, ಅಸಂಸಂದಲ್ಲಿ ಟೆಲ್ಲರ್ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಲು ಚಿಕಾಗೋಗೆ ಹೋದನು. 1949ರಲ್ಲಿ ಪ್ರಿನ್ಸ್’ಟನ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್‍ಡ್ ಸ್ಟಡಿ ಸಂಸ್ಥೆ ಸೇರಿದನು. 1966ರಲ್ಲಿ ನ್ಯೂಯಾರ್ಕ್ ರಾಜ್ಯದ ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಯಾಂಗ್, ಲೀ ಜೊತೆಗೆ ನಡೆಸಿದ ಕೆಲಸಗಳಿಂದ ಭೌತಶಾಸ್ತ್ರದ ಸೈದ್ಧಾಂತಿಕ ಚಿಂತನೆಗಳಿಗೆ, ಮಹಾನ್ ತಿರುವು ದಕ್ಕಿತು,. ಭೌತಶಾಸ್ತ್ರದ ನಿಯಮಗಳು ಬಿಂಬ, ಪ್ರತಿಬಿಂಬಗಳೆರಡರಲ್ಲಿ ಒಂದೇ ರೀತಿಯಲ್ಲಿದ್ದು ಕಾರ್ಯ ಸಾರೂಪ್ಯತೆ ಸಂರಕ್ಷಿಸಲ್ಪಡುತ್ತದೆಯೆಂದು ನಂಬಲಾಗಿದ್ದಿತು. ಯಾಂಗ್ ಹಾಗೂ ಲೀ 1956ರಲ್ಲಿ ಕ್ಷೀಣ ಬೈಜಿಕ ಬಲಗಳಿಗೆ ಇದು ಅನ್ವಯವಾಗುವುದಿಲ್ಲ ಎಂಬ ಮುನ್ಸೂಚನೆ ನೀಡಿದರು. ವು ಹಲವಾರು ಕ್ಲಿಷ್ಟ ಪ್ರಯೋಗಗಳಿಂದ ಇದು ನಿಜವೆಂದು ತೋರಿಸಿದಳು. 1957ರಲ್ಲಿ ಯಾಂಗ್ ಹಾಗೂ ಲೀ ನೊಬೆಲ್ ಪ್ರಶಸ್ತಿ ಗಳಿಸಿದರು. ಯಾಂಗ್, ಆರ್.ಎಲ್.ಮಿಲ್ಸ್ ಜೊತೆಗೂಡಿ ಅಬೆಲಿಯನೇತರ ಗಾಜ್ ಸಿದ್ಧಾಂತ ರೂಪಿಸಿದರು. ಇದು ಯಾಂಗ್-ಮಿಲ್ ಸಿದ್ಧಾಂತ ಎಂದು ಹೆಸರಾಗಿದೆ,. ಈ ಸಿದ್ಧಾಂತ ಕಣ ಭೌತಶಾಸ್ತ್ರ ಹಾಗೂ ಕ್ವಾಂಟಂ ಕ್ಷೇತ್ರಗಳಲ್ಲಿನ ವಿಭಿನ್ನ ಮಾರ್ಗವೆಂದು ಪರಿಗಣಿಸಲಾಗಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019