ಬ್ಲಾಖ್ ಫೆಲಿಕ್ಸ್ (1905-1983) -೧೯೫೨
ಸ್ವಿಟ್ಸರ್’ಲ್ಯಾಂಡ್-ಅಸಂಸಂ- ಭೌತಶಾಸ್ತ್ರ- ಬೈಜಿಕ ಕಾಂತೀಯ ಅನುರಣನ ರೋಹಿತಮಾಪಕ (NMR-Nuclear Magnetic Resonance Spectrometer )ಉಪಜ್ಞೆಕಾರ
ಜೂರಿಕ್ ಹಾಗೂ ಲೀಪ್‍ಜೀಗ್‍ನಲ್ಲಿ ಶಿಕ್ಷಣ ಪಡೆದ ಬ್ಲಾಖ್ ಸ್ವಲ್ಪ ಕಾಲ ಜರ್ಮನಿಯಲ್ಲಿ ಉಪನ್ಯಾಸಕನಾದನು. 1933ರಲ್ಲಿ ಅಮೆರಿಕಾಕ್ಕೆ, ತೆರಳಿ ಸ್ಕ್ಯಾನ್‍ಫೆÇೀರ್ಡ್‍ನಲ್ಲಿ ನೆಲೆಸಿದನು. ಘನಸ್ಥಿತಿ ಭೌತಶಾಸ್ತ್ರಕ್ಕೆ ಭದ್ರಬುನಾದಿ ಹಾಕಿದ ಬ್ಲಾಖ್ ಘನಗಳಲ್ಲಿ ಎಲೆಕ್ಟ್ರಾನ್‍ಗಳ ನಡವಳಿಕೆಯನ್ನು ಸ್ಪುಟಗೊಳಿಸಿದನು. ಘನವೊಂದರಲ್ಲಿ ಮುಕ್ತವಾಗಿ ಚಲಿಸುವ ಎಲೆಕ್ಟ್ರಾನನ್ನು ಬ್ಲಾಖ್ ತರಂಗ ಫಲನ (Wave Function) ವಿವರಿಸುತ್ತದೆ. ಅಲ್ಲದೆ ಅನುಕಾಂತೀಯ (Paramagnetic) ಸಾಮಾಗ್ರಿಯಲ್ಲಿ ಎರಡು ಕಾಂತ ವಲಯಗಳ ಮಧ್ಯದ ಗಡಿಯ ಸ್ವರೂಪವನ್ನು ಬ್ಲಾಖ್ ತರಂಗ ವಿವರಿಸುತ್ತದೆ. 1946ರಲ್ಲಿ ಬ್ಲಾಖ್ ಬೈಜಿಕ ಕಾಂತೀಯ ಅಮರಣದ ತಂತ್ರವನ್ನು ಪರಿಚಯಿಸಿದನು. ಇದೇ ತಂತ್ರವನ್ನು ಸ್ವತಂತ್ರವಾಗಿ ಪರ್ಸೆಲ್ ಸಹ ಅಭಿವೃದ್ದಿಗೊಳಿಸಿದನು. ಬ್ಲಾಖ್‍ನ ತಂತ್ರದಿಂದ ಯಾವುದೇ ಬೀಜದ ಚೈತನ್ಯದ ಸ್ಥಿತಿಯನ್ನು ಅರಿಯುವ ಮೂಲಕ, ಅದರ ನೆರೆಹೊರೆಯ ಪರಮಾಣುಗಳ ಸ್ಥಿತಿಯನ್ನು ಲೆಕ್ಕಚಾರ ಹಾಕಿ ತಿಳಿಯಬಹುದು. 1952ರಲ್ಲಿ ಬ್ಲಾಖ್ ಪರ್ಸೆಲ್ ಜೊತೆ ನೊಬೆಲ್ ಪ್ರಶಸ್ತಿ ಪಡೆದನು. ಬ್ಲಾಖ್ ಹಾಗೂ ಪರ್ಸೆಲ್ ರೂಪಿಸಿದ ತಂತ್ರ ರಸಾಯನಶಾಸ್ತ್ರದಲ್ಲಿ ಪ್ರಮುಖ ವಿಶ್ಲೇಷಣಾ ತಂತ್ರವಾಗಿ ನೆಲೆಗೊಂಡಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/17/2020