ಬ್ರಾಟೇನ್, ವಾಲ್ಟರ್ (ಹೌಸರ್) (1902-1987) -೧೯೫೬
ಅಸಂಸಂ- ಭೌತಶಾಸ್ತ್ರ-ಟ್ರಾನ್ಸಿಸ್ಟರ್’ನ ಸಹ ಉಪಜ್ಞೆಕಾರ.
ಚೀನಾದಲ್ಲಿ ಜನಿಸಿದ ವಾಲ್ಟರ್, ವಾಷಿಂಗ್ಟನ್‍ನಲ್ಲಿ ಬೆಳೆದನು. 1929ರಲ್ಲಿ ಮಿನ್ನೆಸೊಟ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಗಳಿಸಿದನು. ಅದೇ ವರ್ಷ ಸಂಶೋಧನೆಗಳಿಗೆ ಹೆಸರುವಾಸಿಯಾಗಿದ್ದು, ಟೆಲಿಪೆÇೀನನ ಉಪಜ್ಞೆಕಾರನಾದ ಗ್ರಹಾಂ ಬೆಲ್‍ನಿಂದ ಸ್ಥಾಪಿಸಲ್ಪಟ್ಟ ಬೆಲ್ ಲ್ಯಾಬೋರೇಟರೀಸ್‍ಗೆ ಸೇರಿದನು. ಅತಿವಾಹಕಗಳ (Super Conductors) ಮೇಲ್ಮೈ ಗುಣಗಳನ್ನು ಕುರಿತಾಗಿ ಅಧ್ಯಯನ ಪ್ರಾರಂಭಿಸಿ ಮೊದಲಿಗೆ ತಾಮ್ರದ ಆಕ್ಸೈಡಗಳನ್ನು ಬಳಸಿದನು ಆದರೆ ಎರಡನೇ ಜಾಗತಿಕ ಯುದ್ದದ ನಂತರ ನಿಜವಾದ ಅರೆವಾಹಕವಾದ ಸಿಲಿಕಾನ್ ಹಾಗೂ ಜರ್ಮೇನಿಯಂ ಸುಲಭವಾಗಿ ದೊರೆಯತೊಡಗಿದವು. ಇದರಿಂದ ಅರೆ ವಾಹಕಗಳ ಮೇಲಿನ ಪ್ರಯೋಗಗಳು ಖಚಿತವೂ ಸ್ಪಷ್ಟವೂ ಆಗತೊಡಗಿದವು. ವಾಲ್ಟರ್, ಬಾರ್ಡೆನ್ ಹಾಗೂ ಷಾಕ್ಲೆ ಜೊತೆ ಸೇರಿ, ಪ್ರಯೋಗ ಹಾಗೂ ಸಿದ್ಧಾಂತಗಳ ಸಮನ್ವಯದ ಹಾದಿಯಲ್ಲಿ, 1947ರಲ್ಲಿ ಬಿಂದು ಸಂಪರ್ಕ ಹೊಂದಿದ ಟ್ರಾನ್ಸಿಸ್ಟರ್‍ನ್ನು ಅಭಿವೃದ್ದಿಗೊಳಿಸಿದನು. ಇದಕ್ಕಾಗಿ ಜರ್ಮೇನಿಯಂ ಸ್ಪಟಿಕಗಳನ್ನು ¨ಳಸಲಾಗಿದ್ದಿತು. ಟ್ರಾನ್ಸಿಸ್ಟಾರ್’ನ ಅಭಿವೃದ್ದಿ ಇಡೀ ಮನುಕುಲದ ಚರಿತ್ರೆಯಲ್ಲಿ ಗಮನಾರ್ಹ ಬದಲಾವಣೆ ತಂದಿತು. ಟ್ರಾನ್ಸಿಸ್ಟರ್ ಆವಿಷ್ಕಾರವಾಗುವ ಮೊದಲು ಎಲೆಕ್ಟ್ರಾನ್ ಉಪಕರಣಗಳಲ್ಲಿ ಶಾಖೋರ್ಜಿತ (Thermionic) ಡೈಯೋಡ್ , ಟ್ರಯೋಡ್ ಕವಾಟಗಳು ಬಳಕೆಯಲ್ಲಿದ್ದವು. ಟ್ರಾನ್ಸಿಸ್ಟರ್‍ಗಳ ಇವುಗಳಿಗೆ ಹೋಲಿಸಿದಂತೆ ಹಲವು ಸಹಸ್ರ ಪಟ್ಟು ಕಿರಿದಾಗಿಯೂ , ಪರಿಷ್ಕೃತವಾಗಿಯೂ ಕಡಿಮೆ ಶಕ್ತಿ ಬಳಕೆ ಹಾಗೂ ಅತ್ಯುತ್ತಮ ದಕ್ಷತೆಯನ್ನು ಹೊಂದಿವೆ. ಅದಲ್ಲದೆ ಟ್ರಾನ್ಸಿಸ್ಟರ್‍ಗಳನ್ನು ಕಿರುಜಾಗದಲ್ಲಿ ಜೋಡಿಸಿ, ಬೃಹತ್ತಾಗಿದ್ದ ಎಲೆಕ್ಟ್ರಾನಿಕ್ ಮಂಡ¯ಗಳನ್ನು ಅಂಗೈ ಅಗಲಕ್ಕೆ ಇಳಿಸುವುದೂ ಸಾಧ್ಯವಾಯಿತು. ಇದು ಇಡೀ ಜಗತ್ತನ್ನು ನೋಡುವ ದೃಷ್ಟಿಯನ್ನು ಬದಲಾಯಿಸಿತು. ಪ್ರಯೋಗಶೀಲನಾಗಿದ್ದ ವಾಲ್ಟರ್, ವಿಟ್‍ಮನ್ ಕಾಲೇಜನ್ನು ಸೇರಿ ಬೈಜಿಕ ಪೆÇರೆಗಳ ಮೇಲ್ಮುಖಗಳ ಗುಣಗಳ ಅಧ್ಯಯನದಲ್ಲಿ ನಿರತನಾದನು. 1956ರಲ್ಲಿ ಬ್ರಾಟೀನ್, ಬಾರ್ಡೀನ್ ಹಾಗೂ ಷಾಕ್ಲೆಯವರೊಂದಿಗೆ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/25/2019