ಬಾಥ್ ವಾಲ್ಟರ್ (1891-1957) ೧೯೫೪
ಜರ್ಮನಿ-ಭೌತಶಾಸ್ತ್ರ -ನ್ಯೂಟ್ರಾನ್ ಪ್ರೋಟಾಗಳನ್ನು ಗುರುತಿಸಿದಾತ.
ಮೊದಲ ಜಾಗತಿಕ ಯುದ್ದದಲ್ಲಿ ,ಯುದ್ದ ಕೈದಿಯಾಗಿದ್ದ ವಾಲ್ಟರ್ ಬರ್ಲಿನ್‍ನಲ್ಲಿ ಪ್ಲಾಂಕ್‍ನ ಶಿಷ್ಯನಾಗಿದ್ದನು. 1925ರಲ್ಲಿ ಸಂಶೋಧನೆಗೆ ಇಳಿಯುವ ಮುನ್ನ ವಾಲ್ಟರ್ ಮೂರು ಜರ್ಮನ್ ವಿಶ್ವ ವಿದ್ಯಾಲಯಗಳಲ್ಲಿ ಬೋಧಕನಾಗಿದ್ದನು. ಗೀಗರ್ ಜೊತೆ ಸೇರಿ ವಾಲ್ಟರ್ , ಕಾಂಪ್ಟನ್ ಪರಿಣಾಮವನ್ನು ಅಭ್ಯಸಿಸತೊಡಗಿದನು. ಪ್ರತ್ಯೇಕ ಸಂಘಟನೆಗಳಲ್ಲಿ ಉದ್ಬವಗೊಂಡ ಒಂದು ಎಲೆಕ್ಟ್ರಾನ್ ಹಾಗೂ ಪ್ರೋಟಾನ್‍ಗಳನ್ನು ಕುರಿತಾಗಿ ಅಧ್ಯಯನ ಮಾಡಲು, ಪ್ರಾರಂಭಿಸಿದ, ವಾಲ್ಟರ್ ಅದಕ್ಕಾಗಿ ಹೊಸ ವಿಧಾನವೊಂದನ್ನು ರೂಪಿಸಿದನು. ಇದರ ಫಲಶೃತಿಯಾಗಿ ವಿಕಿರಣ ಅಲೆಯಂತೆ ವರ್ತಿಸುವುದೆಂದು ಖಚಿತಗೊಂಡಿತು. 1929ರಲ್ಲಿ ಇದೇ ಮಾದರಿಯಲ್ಲಿ ವಿಶ್ವ ಕಿರಣಗಳನ್ನು ಅಭ್ಯಸಿಸಿ, ಅವುಗಳು ಆವರೆಗೆ ನಂಬಿದಂತೆ ಕೇವಲ ಗಾಮಾ ಕಿರಣಗಳಿಂದಾಗಿರದೆ, ಭಾರದ ಇತರ ಕಣಗಳನ್ನು ಹೊಂದಿರುವುವೆಂದು ಸಾಧಿಸಿ ತೋರಿಸಿದನು. 1930ರಲಿ ಗೀಸೆಸ್‍ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದ ವಾಲ್ಟರ್ ಬೆರಿಲಿಯಂನ್ನು ಆಲ್ಫಾ ಕಣಗಳಿಂದ ತಾಡಿಸಿದಾಗ, ಹೊಸ ಬಗೆಯ ಆವಿಷ್ಟರಹಿತ ಕಣಗಳು ಉತ್ಸರ್ಜನೆಯಾಗುವುದನ್ನು ತೋರಿಸಿದನು. ಮುಂದೆ 1932ರಲ್ಲಿ ಚಾಡ್‍ವಿಕ್ ಆವಿಷ್ಟರಹಿತ ಕಣಗಳು ಅಣುವಿನ ಬೀಜಗಳಲ್ಲಿರುವ ನ್ಯೂಟ್ರಾನ್ ಗಳೆಂದು ತೋರಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಬೈಜಿಕ ಶಕ್ತಿಯ (Nuclear Power )ಬಗೆಗೆ ಹಲವಾರು ಸಂಶೋಧನೆ ಕೈಗೊಂಡಿದ್ದ ವಾಲ್ಟರ್, 1954ರಲಿ ನೊಬೆಲ್ ಪುರಸ್ಕಾರವನ್ನು ಹಂಚಿಕೊಂಡನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/23/2020