অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಫ್ರಿಟ್ಸ್, ಝರ್ನಿಕ್

ಫ್ರಿಟ್ಸ್, ಝರ್ನಿಕ್

ಫ್ರಿಟ್ಸ್, ಝರ್ನಿಕ್ (1888-1966) ೧೯೫೩

ನೆದರ್‍ಲ್ರ್ಯಾಂಡ್-ಭೌತಶಾಸ್ತ್ರ-ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕ (Phase Contrast Microscope) ಉಪಜ್ಞೆಕಾರ.

ಫ್ರಿಟ್ಸ್ ತಂದೆ ಅ್ಯಮಸ್ಟರ್‍ಡ್ಯಾಂನ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯನೂ ಗಣಿತದ ಉಪಾಧ್ಯಾಯನೂ ಆಗಿದ್ದನು.  ಆತನ ತಾಯಿಯೂ ಗಣಿತದ ಉಪ್ದಾಧ್ಯಾಯಿನಿಯಾಗಿದ್ದಳು.  ಇವರ ಆರು ಜನ ಮಕ್ಕಳಲ್ಲಿ  ಫ್ರಿಟ್ಸ್ ಎರಡನೆಯವನಾಗಿ, 16 ಜುಲೈ 1888 ರಂದು ಜನಿಸಿದನು.  ಬಾಲ್ಯ ಪ್ರತಿಭೆಯೆಂದು ಹೆಸರಾಗಿದ್ದ ಫ್ರಿಟ್ಸ್ ಹಲವಾರು ಪುಸ್ತಕಗಳನ್ನು ವಿಷಯವಾರು ಸಂಪಾದಿಸಿದ್ದನು.  ಫಿû್ರಟ್ಸ್‍ನ ಅಣ್ಣ, ಅಕ್ಕ ತಂಗಿಯರು ಸಹ ತಮ್ಮ ಕ್ಷೇತ್ರಗಳಲ್ಲಿ ಪ್ರತಿಭಾವಂತರೆಂದು ಪರಿಗಣಿಸಲ್ಪಟ್ಟಿದ್ದರು.  ತಂದೆಯಿಂದ ಫ್ರಿಟ್ಸ್ ಭೌತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದನು.  ಪ್ರೌಢಶಾಲೆಯಲ್ಲಿರುವಾಗ ಇತಿಹಾಸ, ಭಾಷೆಗಳನ್ನು ನಿರ್ಲಕ್ಷಿಸಿ, ವಿಜ್ಞಾನದ ವಿಷಯಗಳನ್ನು ಮಾತ್ರ ಅಧ್ಯಯನ ಮಾಡಿದನು.  ಇದರಿಂದ ಕಾಲೇಜು ವಿಧ್ಯಾಭ್ಯಾಸಕ್ಕೆ ಅರ್ಹತೆ ದಕ್ಕಲಿಲ್ಲ.  ನಂತರ ಭಾಷೆ ಹಾಗೂ ಇತಿಹಾಸಗಳಲ್ಲಿ ಸಿದ್ಧನಾಗಿ, ಪರೀಕ್ಷೆ ಎದುರಿಸಿ, “ವಿಶ್ವವಿದ್ಯಾಲಯ ಸೇರಿದನು.  ಪ್ರೌಢಶಾಲೆಯಲ್ಲಿರುವಾಗ, ತಾನೇ ರಾಸಾಯನಿಕಗಳನ್ನು ಸಂಸ್ಕರಿಸಿ, ಬಣ್ಣದ ಛಾಯಾಗ್ರಹಣದ ಯತ್ನ ಮಾಡಿದನು.  ಹಳೆಯ ಗುಜರಿ ಸಾಮಾನುಗಳನ್ನು ಬಳಸಿ, ಧೂಮಕೇತುವಿನ ಛಾಯಾಚಿತ್ರ ಪಡೆಯುವ ಸಾಧನವನ್ನು ಫ್ರಿಟ್ಸ್ ತಾನೇ ತಯಾರಿಸಿಕೊಂಡಿದ್ದನು.  ತಂದೆ, ತಾಯಿಗಳೊಂದಿಗೆ ಸವಾಲೆಸೆಯುವಂತೆ ಗಣಿತದ ಪರಿಹಾರಗಳನ್ನು ಹುಡುಕುತ್ತಿದ್ದನು.1905ರಲ್ಲಿ ಅ್ಯಮಸ್ಟರ್ ಡ್ಯಾಂ ವಿಶ್ವವಿದ್ಯಾಲಯ ಸೇರಿ ರಾಸಾಯನಿಕ ಶಾಸ್ತ್ರವನ್ನು ಪ್ರಥಮ ಹಾಗೂ ಗಣಿತ ಭೌತಶಾಸ್ತ್ರವನ್ನು ದ್ವಿತೀಯ ವಿಷಯಗಳಾಗಿ ಆರಿಸಿಕೊಂಡನು.  1908ರಲ್ಲಿ ಸಂಭವನೀಯತೆ ಕುರಿತಾಗಿ ಲೇಖನ ಬರೆದು ಗಟ್ಟಿಂಜೆನ್ “ವಿಶ್ವವಿದ್ಯಾಲಯದ ಬಂಗಾರದ ಪದಕ ಪಡೆದನು.  1912ರಲ್ಲಿ ಹಾರ್ಲೆಮನ್ ಡಚ್ ಸೊಸೈಟಿ  ಆಫ್ ಸೈನ್ಸ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರತಿಫಲನ ಕುರಿತು ಲೇಖನವೊಂದು ಬರೆದು, ಅದರ ತೀರ್ಪುಗಾರರಾಗಿದ್ದ ಖ್ಯಾತ ವಿಜ್ಞಾನಿ ಲೊಹ್ರೆಂಟ್ಸ್ ಹಾಗೂ ವ್ಯಾಂಡರ್ ವಾಲ್ಸ್‍ರನ್ನು ಮೆಚ್ಚಿಸಿ, ಪ್ರಶಸ್ತಿ ಗಳಿಸಿದನು.  ಪ್ರಶಸ್ತಿಯಾಗಿ ಪದಕ ಅಥವಾ ಹಣದ ಆಯ್ಕೆ ನೀಡಿದಾಗ, ಹಣವನ್ನೇ ಬಯಸಿದನು.  ಈ ಲೇಖನವನ್ನು ವಿಸ್ತೃತಗೊಳಿಸಿ, ಸಂಪ್ರಂಬಂಧವಾಗಿಸಿ 1915ರಲ್ಲಿ ಡಾಕ್ಟರೇಟ್ ಗಳಿಸಿದನು.  1913ರಲ್ಲಿ ಗಟ್ಟಿಂಜೆನ್‍ನಲ್ಲಿದ್ದ ಖ್ಯಾತ ಖಗೋಳಶಾಸ್ತ್ರಜ್ಞನಾಗಿದ್ದ ಕ್ಯಾಪ್ಟೆಯ್ನ್, ತನ್ನ ಸಹಾಯಕನಾಗಿ ಬರುವಂತೆ ಫಿû್ರಟ್ಸ್‍ನನ್ನು ಆಹ್ವಾನಿಸಿದನು.  1915ರಲ್ಲಿ ಫ್ರಿಟ್ಸ್ ಗಟ್ಟಿಂಜೆನ್‍ನಲ್ಲಿ ಓರ್ನ್‍ಸ್ಟೀನ್‍ನಿಂದ ತೆರವುಗೊಂಡಿದ್ದ ಗಣಿತ ಉಪನ್ಯಾಸಕನ ಹುದ್ದೆ ವಹಿಸಿಕೊಂಡು ವೃತ್ತಿ ಜೀವನ ಪ್ರಾರಂಭಿಸಿದನು.  1920ರಲ್ಲಿ ಇಲ್ಲಿ ಪೂರ್ಣಾವಧಿ  ಪ್ರಾಧ್ಯಾಪಕನಾಗಿ ನೇಮಕಗೊಂಡನು.  ಜೆ.ಎ.ಪ್ರಿಟ್ಸ್‍ನ ಜೊತೆಗೆ ದ್ರವದಲ್ಲಿನ ಎರಡು ಅಣುಗಳ ಸ್ಥಾನ ನಿರ್ಧಾರ ಫಲನ (Function)   ನೀಡಿದನು.  ಬಹು ಸೂಕ್ಷ್ಮವಾದ ಗ್ಯಾಲ್ಬನೋ ಮಾಪಕವನ್ನು ಸಹ ಒಟ್ಟೋ ತಯಾರಿಸಿದನು.  1930ರಿಂದ ದೃಕ್ ಶಾಸ್ತ್ರದಲ್ಲಿ ಆಸಕ್ತಿ ತಳೆದು ಮಸೂರ, ಬಿಂಬಗಳನ್ನು ಪಡೆಯುವಲ್ಲಿ ಹಲವಾರು ಸುಧಾರಣೆಗಳನ್ನು ತಂದನು. 1930ರ ಒಂದು ಸಂಜೆ, ಜೆನಾದಲ್ಲಿರುವ ಝೀಸ್ ಕಾರ್ಖಾನೆಯಲ್ಲಿರುವಾಗ ಸಂಪೂರ್ಣ ಕಪ್ಪು ಬಣ್ಣ ಬಳಿಯಲಾಗಿದ್ದ ದೃಕ್ ಪ್ರಯೋಗಾಲಯದಲ್ಲಿ ಒಂದು ವಿಶಿಷ್ಟವಾದ ವಿದ್ಯಾಮಾನವನ್ನು ಗಮನಿಸಿದನು.  ಈ ವಿದ್ಯಾಮನದಿಂದ ಫ್ರಿಟ್ಸ್ ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕ ನಿರ್ಮಾಣದ ಸಾಧ್ಯತೆ ವಿವರಿಸಿದನು.  ಇದನ್ನು ಕಾರ್ಖಾನೆಯ ಆಡಳಿತ ಮಂಡಳಿಯ ಗಮನಕ್ಕೆ ತಂದನು.  ಆದರೆ ಇದರ ಪ್ರಾಮುಖ್ಯತೆ ಅವರಿಗೆ ಅರಿವಾಗಲಿಲ್ಲ. 1941ರಲ್ಲಿ ಜರ್ಮನಿ ನೆದರ್’ಲ್ಯಾಂಡ್’ನ್ನು ಆಕ್ರಮಿಸಿ ಯುದ್ದಕ್ಕೆ ನೆರವಾಗುವ ಎಲ್ಲಾ ಬಗೆಯ ಸಂಶೋಧನೆಗಳನ್ನು ದಾಖಲುಗೊಳಿಸತೊಡಗಿತು.  ಫ್ರಿಟ್ಸ್’ನ  ಪ್ರಾವಸ್ಥಾ ವೈದೃಶ್ಯ ಸೂಕ್ಷದರ್ಶಕದ ವೈಶಿಷ್ಟತೆ, ಗುರುತಿಸಿದ ಜರ್ಮನಿಯ ಪರಿಶೀಲನಾ ಸಮಿತಿ, ಅಂತಿಮವಾಗಿ ಅದರ ನಿರ್ಮಾಣ ಕೈಗೆತ್ತಿಕೊಂಡಿತು.  ಮುಂದೆ ಇದು ಬೃಹತ್ ಉದ್ದಿಮೆ ರೂಪ ತಾಳಿತು.  ಈ ಕಾಲಕ್ಕೆ ಜರ್ಮನಿ, ನೆದರ್’ಲ್ಯಾಂಡನ್ನು ಆಕ್ರಮಿಸಿದ್ದಿತಲ್ಲದೆ, ಈ ಕಾರಣವಾಗಿ ಫ್ರಿಟ್ಸ್’ಗೆ ಅದರ ಉಪಜ್ಞೆಯ ಗೌರವ ದಕ್ಕಲಿಲ್ಲ. ವಿಜ್ಞಾನದಲ್ಲಿ ಅದರಲ್ಲೂ ವಿಶೇಷತವಾಗಿ ವೈದ್ಯಕೀಯದಲ್ಲಿ ಈ ಸೂಕ್ಷ್ಮ ದರ್ಶಕದ ಬಳಕೆಯಾಗಲಿಲ್ಲ. ಯುದ್ದದ ನಂತರ ಬೇರೆ ಕಂಪನಿಗಳು, ಪ್ರಾವಸ್ಥಾ ವೈದೃಶ್ಯ ಸೂಕ್ಷ್ಮದರ್ಶಕದ ತಯಾರಿಸಿ, ವಿಜ್ಞಾನದಲ್ಲಿ ವ್ಯಾಪಕವಾಗಿ ಬಳಕೆಗೆ ತಂದವು.  ಫ್ರಿಟ್ಸ್’ನ ಸಾಧನೆಯನ್ನು ರಾಯಲ್ ಸೂಕ್ಷ್ಮದರ್ಶಕದ ಸಂಸ್ಥೆ ಗುರುತಿಸಿತು.  ಲಂಡನ್‍ನ ರಾಯಲ್ ಸೊಸೈಟಿ ರಮ್’ಫೋರ್ಡ್ ಪದಕ ಪ್ರಿಟ್ಸ್‍ಗೆ ಪ್ರಧಾನಿಸಿತು.  ಅ್ಯಮಸ್ಟರ್ ಡ್ಯಾಂ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು.  ಫ್ರಿಟ್ಸ್’ನ ಈ ಸಾಧನೆಗಾಗಿ 1953ರ ನೊಬೆಲ್ ಪ್ರಶಸ್ತಿ ನೀಡಲಾಯಿತು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 11/17/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate