ಪಾಲಿಕಾರ್ಪ್, ಕುಷ್ಕ್ (1911-1993) ೧೯೫೫
ಜರ್ಮನಿ-ಅಸಂಸಂ -ಭೌತಶಾಸ್ತ್ರ-ಅಣ್ವಯಿಕ ದೂಲ ವಿಧಾನದಲ್ಲಿ ಜೈವಿಕ ಅಣುಗಳ ರಾಚನಿಕ ಅಧ್ಯಯನದ ಮುಂಚೂಣಿಗ.
ಪಾಲಿಕಾರ್ಪ್ 26 ಜನವರಿ 1911ರಂದು ಬ್ಲಾಕೆನ್‍ಬರ್ಗ್‍ನಲ್ಲಿ ಜನಿಸಿದನು. ಈತ ಒಂದು ವರ್ಷದವನಿರುವಾಗ ಈತನ ತಂದೆ ಅಸಂಸಂಗಳಿಗೆ ಬಂದು ನೆಲೆಸಿದನು. ಆರಂಭದಲ್ಲಿ ಪಾಲಿಕಾರ್ಪ್ ಆಸಕ್ತಿಗಳು ರಸಾಯನಶಾಸ್ತ್ರದಲ್ಲಿದ್ದವು. ಪದವಿಗಾಗಿ ಕ್ಲೀವ್‍ಲ್ಯಾಂಡ್‍ನ ಕೇಸ್ ಇನ್ಸ್ಟಿಟ್ಯೂಟ್’ ಆಫ್ ಟೆಕ್ನಾಲಜಿ ಸೇರಿದ ನಂತರ ಭೌತಶಾಸ್ತ್ರಕ್ಕೆ ಬದಲಾಗಿ 1931ರಲ್ಲಿ ಪದವಿ ಗಳಿಸಿದನು. ಇಲಿನಾಯ್ ವಿಶ್ವವಿದ್ಯಾಲಯದಿಂದ 1936ರಲ್ಲಿ ಡಾಕ್ಟರೇಟ್ ಗಳಿಸಿದನು. ಪಾಲಿಕಾರ್ಪ್ ದೃಗ್ ಅಣ್ವಯಿಕ ರೋಹಿತದರ್ಶಕಶಾಸ್ತ್ರ ಮತ್ತು ದ್ರವ್ಯ ರೋಹಿತಶಾಸ್ತ್ರಗಳಲ್ಲಿ ವಿಶೇಷ ಪರಿಣಿತಿ ಹೊಂದಿದ್ದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಪಾಲಿಕಾರ್ಪ್ ಸೂಕ್ಷ್ಮತರಂಗ ಜನಕಗಳ ಸಂಶೋಧನೆಯಲ್ಲಿ ನಿರತನಾಗಿದ್ದನು. 1949ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿ ಐ.ಐ.ರಬಿಯ ಸಾಂಗತ್ಯದಲ್ಲಿ ಅಣ್ವಯಿಕ ದೂಲ (Molecular Beam) ವಿಧಾನ ಬಳಸಿ ರಾಸಾಯನಿಕಗಳ ರಾಚನಿಕ ಸ್ವರೂಪ ನಿರ್ಧರಿಸಿದನು. ಮುಂದೆ ಅಣ್ವಯಿಕ ದೂಲ ವಿಧಾನ ರಸಾಯನ ಮತ್ತು ಜೀವಶಾಸ್ತ್ರದ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ದಿಶೆಯಲ್ಲಿ ನೀಡಿದ ಗಮನಾರ್ಹ ಕಾಣಿಕೆಗಳಿಗಾಗಿ ಪಾಲಿಕಾರ್ಪ್ 1955ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019