ಚೆರೆಂಕೊವ್, ಪಾವೆಲ್ ಅಲೆಕ್ಸೆಯೆವಿಖ್ (1904-1990 ) ೧೯೫೮
ರಷ್ಯಾ-ಭೌತಶಾಸ್ತ್ರ - ಚೆರೆಂಕೊವ್ ಪರಿಣಾಮ ಅನಾವರಣಗೊಳಿಸಿದಾತ.
ವೊರೊನೆಝ್ ರಾಜ್ಯ ವಿಶ್ವವಿದ್ಯಾಲಯದಿಂದ ಪದವೀಧರನಾದ ಚೆರೆಂಕೊವ್ , ಲೆಬೆಡೆವ್‍ನ್ ಭೌತಶಾಸ್ತ್ರದ ಸಂಶೋಧನ ಸಂಸ್ಥೆಯಲ್ಲಿ 1930ರಲಿ ವೃತ್ತಿ ಜೀವನ ಪ್ರಾರಂಭಿಸಿದನು. 1934ರಲ್ಲಿ ಚೆರೆಂಕೊವ್ ಮೊದಲ ಬಾರಿಗೆ ರೇಡಿಯಂ ಧಾತುವಿನ ವಿಕಿರಣಕ್ಕೊಳಗಾದ ನೀರು ನೀಲ ಕಿರಣಗಳನ್ನು ಉತ್ಪರ್ಜಿಸುವುದನ್ನು ಗಮನಿಸಿದನು. ಇದನ್ನು ಹಲವರು ಈ ಮೊದಲೇ ಗಮನಿಸಿದ್ದಾದರೂ ಅದು ಪ್ರದೀಪ್ತಿಯಿಂದ (Luminiance) ಹಾಗಾಗುವ್ಯದೆಂದು ಭಾವಿಸಿದ್ದರು.ಆದರೆ ಕೆಲ ಸಮಯದಲ್ಲಿ , ನಾನಾ ದ್ರಾವಣಗಳೂ ಈ ಪರಿಣಾಮಗಳನ್ನು ತೋರಿಸಿರುವನ್ನು ಅರಿತ ಚೆರೆಂಕೊವ್ ಇದಕ್ಕೆ ಪ್ರದೀಪ್ತಿ ಕಾರಣವಲ್ಲವೆಂದು ಅರಿತನು. ಈ ದಿಶೆಯಲ್ಲಿ ಸಂಶೋಧನೆ ನಡೆಸಿ ರೇಡಿಯಂನಿಂದ ಹೊರಹೊಮ್ಮುವ ಕ್ಷಿಪ್ರ ಎಲೆಕ್ಟ್ರಾನ್ (ಬೀಟಾ ಕಿರಣಗಳಿಂದ) ಬೆಳಕು ಧೃವೀಕೃತಗೊಳ್ಳುವ್ಯದರಿಂದ ಹೀಗಾಗುವುದೆಂದು ತೋರಿಸಿದನು. 1937ರಲ್ಲಿ ಐ.ಎಂ.ಫ್ರಾಂಕ್ ಹಾಗೂ ಎ.ಇ.ಟ್ಯಾಮ್ ಜೊತೆ ಸೇರಿ, ಈ ಪರಿಣಾಮಕ್ಕೆ ವಿವರಣೆ ನೀಡಿದನು. ಇವರ ಸಹ ಸಂಶೋಧನೆಯಿಂದ ಆವಿಷ್ಟಿತ ಕಣಗಳು (Charged Particles) ದ್ರವ ಹಾಗೂ ಘನ ಮಾಧ್ಯಮದಲ್ಲಿ ಆ ಮಾಧ್ಯಮದಲ್ಲಿನ ಬೆಳಕಿನ ವೇಗಕ್ಕಿಂತಲೂ ಅಧಿಕ ವೇಗದಲ್ಲಿ ಸಾಗುವುದಎಂದ ಬೆಳಕು ಧೃವೀಕೃತಗೊಳ್ಳುವುದೆಂದು ತಿಳಿಯಿತಲ್ಲದೆ, ಬೆಳಕಿನ ಧೃವೀಕರಣ ಹಾಗೂ ಧೃವೀಕರಣ ದಿಕ್ಕನ್ನು ಖಚಿತವಾಗಿ ನಿರ್ಧರಿಸುವುದು ಸಾಧ್ಯವಾಯಿತು. ಭಾರ ಜಲ ಹೊಂದಿರುವ ಯುರೇನಿಯಂ ಪ್ರತಿಕ್ರಿಯಾಕಾರಕದ (Reactor ) ತಿರುಳಿನಲ್ಲಿ ನೀಲಿ ದೀಪ್ತಿ ಹೊಮ್ಮಿ ಚೆರೆಂಕೊವ ಪರಿಣಾಮ ಎದ್ದು ಕಾಣುತ್ತದೆ. ಅಧಿಕ ಆವಿಷ್ಟಿತ ಕಣಗಳ ಪತ್ತೆಗೆ ಒಂಟಿ ಕಣಗಳ ಪತ್ತೆಗೆ ಚೆರೆಂಕೊವ್ ಪರಿಣಾಮ ನೆರವಿಗೆ ಬರುತ್ತದೆ. ಗಾಳಿಯಲ್ಲಿ ವಿಮಾನ ಶಬ್ಧಾತೀತ ವೇಗ ಗಳಿಸಿದಾಗ, ಆಘಾತದಲೆ ಹಾಗೂ ಸ್ಥನಿಕ ಮೊಳಗು Sonic Boom ) ಉಂಟಾಗುವ ಕ್ರಿಯೆಯನ್ನು ಚೆರೆಂಕೊವ್ ಪರಿಣಾಮ ಹೋಲುತ್ತದೆ. ಚೆರೆಂಕೊವ್ ಫ್ರಾಂಕ್ ಹಾಗೂ ಟ್ಯಾಮ್ 1958ರ ನೊಬೆಲ ಪ್ರಶಸ್ತಿ ಪುರಸ್ಕೃತರಾದರು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/5/2019