ಚೇಂಬರ್ಲೇನ್, ಓವೆನ್ (1920--) ೧೯೫೯
ಅಸಂಸಂ -ಭೌತಶಾಸ್ತ್ರ -ಪ್ರತಿ ಪ್ರೋಟಾನ್ ಅನಾವರಣಗೊಳಿಸಿದಾತ.
ಡಾರ್ಮೌತ್ ಹಾಗೂ ಚಿಕಾಗೋದಲ್ಲಿ ವಿದ್ಯಾಭ್ಯಾಸ ಮಾಡಿದ ಚೇಂಬರ್ಲೇನ್ ಬರ್ಕ್ಲೆಯ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ 1958ರಲ್ಲಿ ನೇಮಕಗೊಂಡನು, 1989ರವರೆಗೆ ಇಲ್ಲಿಯೇ ಸೇವೆ ಸಲ್ಲಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಸಮಯದಲ್ಲಿ ಮ್ಯಾನ್‍ಹಟ್ಟನ್‍ನಲ್ಲಿ ಬೈಜಿಕಾಸ್ತ್ರ ತಯಾರಿಕಾ ಯೋಜನೆಯಲ್ಲಿ ಪಾಲ್ಗೊಂಡು , ಭಾರ ಧಾತುಗಳ ಹಠಾತ್ ಪರಮಾಣು ವಿದಳನದ (Atomic Fission) ಬಗ್ಗೆ ಸಂಶೋಧನಾ ಪ್ರಯುಕ್ತನಾದನು. ಯುದ್ದದ ನಂತರ , ಬರ್ಕ್ಲೆಯ ಕಣ ವೇಗೋತ್ಕರ್ಷಕಗಳಲ್ಲಿ ಕೆಲಸ ಮಾಡಿದ ಚೇಂಬರ್ಲೇನ್ ಸೆರ್ಗ್ರೆ ಹಾಗೂ ಇನ್ನಿತರ ಸಂಗಡಿಗರ ಜೊತೆಗೂಡಿ 1955ರಲ್ಲಿ ಪ್ರತಿ ಪ್ರೋಟಾನನ್ನು ಕಂಡು ಹಿಡಿದನು. ಇದು ಪ್ರೋಟಾನನಷ್ಟೇ ತೂಕವಿದ್ದು, ವಿದ್ಯುದಾವಿಷತೆಯಲ್ಲಿ ಅದಕ್ಕೆ ವಿರುದ್ದವಾಗಿರುತ್ತದೆ. 1926ರಲ್ಲೇ ಡಿರಾಕ್ ಸೈದ್ಧಾಂತಿಕವಾಗಿ ಪ್ರತಿ ಪ್ರೋಟಾನಗಳ ಅಸ್ತಿತ್ವವನ್ನು ಮುನ್ನಡಿದಿದ್ದನು. ಪ್ರತಿ ಪ್ರೋಟಾನನ್ನು ಕಂಡು ಹಿಡಿದಿದ್ದಕ್ಕಾಗಿ ಸೆಗ್ರೆ ಜೊತೆ ಸೇರಿ ಚೆಂಬರ್ಲೇನ್ 1959ರ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/15/2019