ಐಗೊರ್, ಯೆವ್‍ಜೆನಿಯೆವಿಖ್ ತಮ್ (1895--) ೧೯೫೮
ರಷ್ಯಾ- ಭೌತಶಾಸ್ತ್ರ- ಎಲೆಕ್ಟ್ರಾನ್‍ಗಳ ವಿಕಿರಣತ್ವ ವಿವರಿಸಿದಾತ.
ಐಗೊರ್ 8 ಜುಲೈ 1895ರಂದು ವ್ಲಾಡಿವೊಸ್ಟಾಕ್‍ನಲ್ಲಿ ಜನಿಸಿದನು. ಈತನ ತಂದೆ ಇಂಜಿನಿಯರಾಗಿ ಸೇವೆ ಸಲ್ಲಿಸುತ್ತಿದ್ದನು. ಮಾಸ್ಕೊ ವಿಶ್ವವಿದ್ಯಾಲಯದಿಂದ 1918ರಲಿ ಭೌತಶಾಸ್ತ್ರದ ಪದವಿ ಪಡೆದನು. ಉಪನ್ಯಾಸಕ, ಪ್ರಾಧ್ಯಾಪಕನಾಗಿ ಐಗೊರ್ ಸೇವೆ ಸಲ್ಲಿಸಿದನು. 1934 ರಿಂದ ಮಾಸ್ಕೋದ ಲೆಬೆಡೆವ್ ವಿಶ್ವವಿದ್ಯಾಲಯದ ಸೈದ್ಧಾಂತಿಕ ವಿಭಾಗದ ಮುಖ್ಯಸ್ಥನಾದನು 1920ರಿಂದ 1944ರವರೆಗೆ ಐಗೊರ್, ಮ್ಯಾಂಡೆಲ್‍ಸ್ಟ್ಯಾಮ್‍ನ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದನು. ಈತನ ಸಂಶೋಧನೆ ಸ್ಪಟಿಕ ದೃಗ್‍ಶಾಸ್ತ್ರ ,ಸಾಪೇಕ್ಷ ಸಿದ್ಧಾಂತ ಮತ್ತು ಘನ ಕಾಯಗಳಲ್ಲಿ ವಿಸರಿಸುವ ಬೆಳಕಿನ ಕ್ವಾಂಟಂ ಅಧ್ಯಯನಗಳಲಿ ಕೇಂದ್ರಕೃತವಾಗಿದ್ದವು. ಐಗೊರ್, ಐ.ಎಂ.ಫ್ರಾಂಕ್ ಸಹ ಯೋಗದಲ್ಲಿ ನಿರ್ದಿಷ್ಟ ಮಾಧ್ಯಮದಲ್ಲಿ ಬೆಳಕಿನ ವೇಗಕ್ಕಿಂತಲೂ ಅಧಿಕ ವೇಗ ಗಳಿಸಬಲ್ಲ ಎಲೆಕ್ಟ್ರಾನ್‍ಗಳ ವಿಕಿರಣತ್ವ ವಿವರಿಸುವ ಚೆರ್ನೆಂಕೊವ್ ಪರಿಣಾಮ ಹಾಗೂ ವಿಶ್ವ ಕಿರಣ ವೃಷ್ಟಿಯನ್ನು ಕುರಿತಾಗಿ ಸೈದ್ಧಾಂತಿಕ ಚಿಂತನೆ ನಡೆಸಿದನು. ಔಷ್ಣೀಯ ಬೈಜಿಕ (Theronuclear) ಕ್ರಿಯಾ ನಿಯಂತ್ರಣ ಕುರಿತಾಗಿ ಐಗೊರ್ ನಡೆಸಿದ ಸಂಶೋಧನೆಗಳು ಸಹ ಗಮನಾರ್ಹವಾಗಿವೆ. ಪ್ರಾಥಮಿಕ ಕಣಗಳನ್ನು ಮತ್ತು ನ್ಯೂಟ್ರಾನ್ ಕಾಂತೀಯ ಭ್ರಾಮ್ಯತೆ (Magnetic Moment) ವಿವರಿಸುವ ಕೃತಿಗಳನ್ನು ಐಗೊರ್ ರಚಿಸಿದ್ದಾನೆ. ಈ ಸಂಶೋಧನೆಗಳಿಗಾಗಿ ಐಗೊರ್ 1958ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/29/2019