ಇಲ್ಯಾ ,ಮೈಖೆಲೋವಿಖ್ ಫ್ರಾಂಕ್ (1908-1990) ೧೯೫೮
ರಷ್ಯಾ-ಭೌತಶಾಸ್ತ್ರ- ಚೆರ್ನೆಂಕೊವ್ ಪರಿಣಾಮ ಅನಾವರಣಗೊಳಿಸಿದಾತ.
ಇಲ್ಯಾ 23 ಅಕ್ಟೋಬರ್ 1908ರಂದು ಮಾಸ್ಕೋದಲ್ಲಿ ಜನಿಸಿದನು. 1930ರಲ್ಲಿ ಮಾಸ್ಕೋ ವಿಶ್ವ ವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದನು. 1934ರಲ್ಲಿ ಚೆರ್ನೆಂಕೊವ್ ಆವಿಷ್ಟ ಕಣಗಳಿಂದ ಉತ್ಸರ್ಜಿತಗೊಂಡ ಬೆಳಕಿನ ವೇಗ ನೀರಿನಂತಹ ಪಾರದರ್ಶಕ ಮಾಧ್ಯಮಗಳಲ್ಲಿ ಸಾಧಾರಣ ಬೆಳಕಿನ ವೇಗಕ್ಕಿಂತಲೂ ಅಧಿಕವಾಗಿರುವುದನ್ನು ಅನಾವರಣಗೊಳಿಸಿದನು. ಇದು ಚೆರ್ನೆಂಕೊವ್ ಪರಿಣಾಮವೆಂದು ಹೆಸರಾಯಿತು. ಇದಕ್ಕೆ ಇಲ್ಯಾ ಮತ್ತು ಐಗೊರ್ ಸೈದ್ಧಾಂತಿಕ ವಿವರಣೆ ನೀಡಿದರು. ಇದರ ಆಧಾರದ ಮೇಲೆ ಅಧಿಕ ವೇಗ ಹೊಂದಿರುವ ಬೈಜಿಕ ಕಣಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಯಿತು. ಇಲ್ಯಾನ ಈ ಸಾಧನೆಗಾಗಿ 1958ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಗಾಮಾ ಕಿರಣ, ನ್ಯೂಟ್ರಾನ್ ಕಣ ದೂಲಗಳ ಸಂಶೋಧನೆಯಲ್ಲೂ ಇಲ್ಯಾ ಪರಿಶ್ರಮಿಸಿದನು. 1944ರಲ್ಲಿ ಇಲ್ಯಾ ಮಾಸ್ಕೊ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಮುಖ್ಯಸ್ಥನಾದನು. 1946ರಲ್ಲಿ ಸೋವಿಯತ್ ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯನಾಗಿ ನೇಮಕಗೊಂಡನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020