ಯುಕಾವಾ, ಹಿಡೆಕಿ (1907-1981) 1949
ಜಪಾನ್-ಭೌತಶಾಸ್ತ್ರ- ಪ್ರಬಲ ಬೈಜಿಕ ಬಲಗಳನ್ನು ವಿವರಿಸಿ ಪೈ-ಮೆಸಾನ್ ಅಸ್ತಿತ್ವವನ್ನು ಮುನ್ಸೂಚಿಸಿದಾತ.
ಯುಕಾವಾ, ಕ್ಯೋಟೋ “ವಿಶ್ವವಿದ್ಯಾಲಯದಿಂದ 1929ರಲ್ಲಿ ಪದವಿ ಪದೆದನು. ಒಸಾಕಾ “ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು. ನಂತರ ಕ್ಯೋಟೋಗೆ ಮರಳಿ, 1939ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 27ನೇ ವಯಸ್ಸಿನಲ್ಲಿ ಯುಕಾವಾ ಪ್ರಬಲ ಬೈಜಿಕ ಬಲಗಳ ಸಿದ್ಧಾಂತ ಸ್ಥಾಪಿಸಿದನು. 1932ರಲ್ಲಿ ಚಾಡ್‍ವಿಕ್ ನ್ಯೂಟ್ರಾನ್‍ನ್ನು ಅನಾವರಣಗೊಳಿಸಿದ್ದನು. ಯುಕಾವಾ, ಪರಮಾಣುವಿನ ಬೀಜದಲ್ಲಿ ನ್ಯೂಟ್ರಾನ್ ಹಾಗೂ ಪ್ರೋಟಾನ್‍ಗಳಿರುತ್ತವೆ. ಇವೆರಡರ ಮಧ್ಯೆ ಅತ್ಯಂತ ಅಲ್ಪ ದೂರದಲ್ಲಿ 10-15 ಮೀಟರ್ ದೂರದಲ್ಲಿ ಭಾರಿ ಪ್ರಬಲವಾದ ಬಲವಿದ್ದು, ಇವನ್ನು ಬಂಧಿಸಿರುತ್ತದೆ. ಇದು ಪೆÇ್ರೀಟಾನ್‍ಗಳು ಪರಸ್ಪರ ದೂರ ವಿಕರ್ಷಿಸುವುದನ್ನು ಮೀರಿಸುವಷ್ಟಿರುತ್ತದೆಯಾದರೂ, ಎಲೆಕ್ಟ್ರಾನ್‍ಗಳ ಮೇಲೆ ಯಾವುದೇ ಪರಿಣಾಮ ಬೀರಲಾರದೆಂದು ವಿವರಿಸಿದನು. ನ್ಯೂಟ್ರಾನ್ ಹಾಗೂ ಪ್ರೋಟಾನ್‍ಗಳು ಕಣವೊಂದರ ಮಧ್ಯಸ್ಥಿಕೆಯಲ್ಲಿ ಈ ಬಲವನ್ನು ವರ್ಗಾಂತರಿಸಿಕೊಳ್ಳುವುದೆಂದು ಅಂತಹ ಕಣ ಎಲೆಕ್ಟ್ರಾನ್‍ಗಿಂತ ಇನ್ನೂರು ಪಟ್ಟು ಭಾರವಿರುವುದೆಂದು ಯುಕಾವಾ ಸ್ಪಷ್ಟಗೊಳಿಸಿದನು. 1936ರಲ್ಲಿ ಸಿ.ಡಿ.ಆ್ಯಂಡರ್ಸನ್ ಯುಕಾವಾ ಸೂಚಿಸಿದಂತಹ ಕಣಗಳನ್ನು ಪತ್ತೆ ಹಚ್ಚಿ ಮ್ಯು-ಮೆಸಾನ್‍ಗಳೆಂದು ಕರೆದನು. ಈಗ ಇವನ್ನು ಮ್ಯೂಯಾನ್‍ಗಳೆನ್ನುತ್ತಾರೆ.. ಆದರೆ ಇದು ಯುಕಾವಾ ಸೂಚಿಸಿದಷ್ಟು ಪ್ರಬಲವಾಗಿರಲಿಲ್ಲ. 1947ರಲ್ಲಿ ಪೊವೆಲ್ ಹಾಗೂ ಸಂಗಡಿಗರು, ವಿಶ್ಬ ಕಿರಣಗಳಲ್ಲಿ ಇನ್ನೊಂದು ಮೆಸಾನ್-ಪೈ ಮೆಸಾನ್(ಪೈಯಾನ್)- ಕಣವನ್ನು ಪತ್ತೆ ಹಚ್ಚಿದನು. ಇದು ಯುಕಾವಾ ಸೂಚಿಸಿದ ಕಣವನ್ನು ಎಲ್ಲ ರೀತಿಯಲ್ಲಿ ಹೋಲುತ್ತಿದ್ದಿತು. ಇದರಿಂದ ಯುಕಾವನ ಪ್ರಬಲ ಬೈಜಿಕ ಬಲದ ಸಿದ್ಧಾಂತ ಸ್ಥಿರ ನೆಲೆ ಕಂಡಿತು. ಮುಂದಿನ ಒಂದೆರಡು ದಶಕಗಳಲ್ಲಿ ಹಲವಾರು ಬಗೆಯ ಪೈಯಾನ್, ಮ್ಯೂಯಾನ್‍ಗಳು ಗುರುತಿಸಲ್ಪಟ್ಟವು. ಇವು ಬಹು ಅಲ್ಪಾಯುಗಳು, ಈಗ ಪ್ರೋಟಾನ್, ನ್ಯೂಟ್ರಾನ್‍ಗಳು ಕ್ವಾರ್ಕ್‍ಗಳಿಂದಾಗಿವೆಯೆಂದು ಒಪ್ಪಲಾಗಿದೆ. ಕ್ವಾರ್ಕ್ ಹಾಗೂ ಗ್ಲುಯಾನ್‍ಗಳು ಅಂತರ್‍ಕ್ರಿಯೆಯಿಂದ ಪ್ರಬಲ ಬೈಜಿಕ ಬಲಗಳು ಕಾಣಿಸಿಕೊಳ್ಳುತ್ತವೆ. ಯುಕಾವಾ, 1936ರಲ್ಲಿ ಪರಮಾಣು ಬೀಜ ಅತ್ಯಂತ ಒಳಗಿನ ಶಲ್ಕದಲ್ಲಿನ ಎಲೆಕ್ಟ್ರಾನ್‍ನ್ನು ಹೀರಿಕೊಳ್ಳಬಲ್ಲದೆಂದು ಸೂಚಿಸಿದನು. ಈ ವಿದ್ಯಾಮಾನವನ್ನು ಸಹ ಈಗಗುರುತಿಸಲಾಗಿದೆ. 1949ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಜಪಾನಿಯನಾಗಿ ಯುಕೋವ್ ಖ್ಯಾತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019