ಬ್ಲಾಕೆಟ್ ಪ್ಯಾಟ್ರಿಕ್ (ಮೇನಾರ್ಡ್ ಸ್ಟುವಾರ್ಟ್) ಬ್ಯಾರೊನ್ ಬ್ಲಾಕೆಟ್ (1897-1974)-೧೯೪೮
ಬ್ರಿಟನ್-ಭೌತಶಾಸ್ತ್ರ- ವಿಶ್ವಕಿರಣಗಳನ್ನು ಬಳಸಿ ಸಂಶೋಧನೆ ಕೈಗೊಳ್ಳಲು ನೆರವಾಗುವ ವಿಲ್ಸನ್ ಮೇಘ ಕೋರಿಯನ್ನು ನಿರ್ಮಿಸಿ ಪರಿಷ್ಕರಿಸಿ, ಉತ್ತಮಗೊಳಿಸಿದಾತ.
ಸ್ಟಾಕ್ ಬ್ರೋಕರನ ಮಗನಾಗಿದ್ದ. ಬ್ಲಾಕೆಟ್ ಓಸ್ಟೋನ್ ಹಾಗೂ ಡಾರ್ಮತ್ ನೇವಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿ ,1914ರಲ್ಲಿ ಹಾಗೂ1916ರಲ್ಲಿ ನಡೆದ ಫಾಕ್‍ಲ್ಯಾಂಡ್ ಹಾಗೂ ಬೂಟ್ಲ್‍ಲ್ಯಾಂಡ್ ಯುದ್ದಗಳಲ್ಲಿ ಭಾಗವಹಿಸಿದನು. ಮುಂದೆ, ಬ್ಲಾಕೆಟ್ ಕೇಂಬ್ರಿಜ್‍ನಲ್ಲಿ ಭೌತಶಾಸ್ತ್ರವನ್ನು ಓದಿ, ಸಂಶೋಧನೆಗೆ ಇಳಿದು, 1924ರಲ್ಲಿ ಮೊದಲ ಬಾರಿಗೆ ಮೇಘ ಕೋಠಿಯ ಛಾಯಾಚಿತ್ರಗಳನ್ನು ಪಡೆದು, ಸಾರಜನಕವನ್ನು ಆಲ್ಪಾ ಕಣಗಳಿಂದ (ಹೀಲಿಯಂ ಬೀಜ) ತಾಡಿಸಿದಾಗ ಆಮ್ಲಜನಕ (ಆಮ್ಲಜನಕ-17) ಪಾರವಿಕಲ್ಪಗೊಳ್ಳುವುದನ್ನು (Tranasmutation ) ನಿರೂಪಿಸಿದನು. 1933ರಲ್ಲಿ ಲಂಡನ್ ವಿಶ್ವವಿದ್ಯಾಲಯ, 1937ರಲ್ಲಿ ಮ್ಯಾಂಚ್‍ಸ್ಟರ್’ನಲ್ಲೂ 1953ರಲ್ಲಿ ಇಂಪೀರಿಯಲ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದನು. ಎರಡನೇ ಜಾಗತಿಕ ಯುದ್ದದಲ್ಲಿ ಮಿಲಿಟರಿ ಸಂಪನ್ಮೂಲಗಳ ಬಳಕೆಯಲ್ಲಿ ಹಾಗೂ ಚಟುವಟಿಕೆಗಳಲ್ಲಿ ಮಿತವ್ಯಯ ತರಲು ಅಭಿಕರ್ಮಕ ಸಂಶೋಧನಾ (operation Research) ವಿಧಾನವನ್ನು ಬಳಸಿದನು. ಜಲಾಂತರ್ಗಾಮಿಗಳ ಯುದ್ದ ಕೌಶಲವನ್ನು ನಿರ್ದೇಶಿಸಲು ಹಲವಾರು ಮಾರ್ಗೋಪಾಯಗಳನ್ನು ನಿರ್ಧರಿಸನಲ್ಲದೆ , ವಿಮಾನಗಳಲ್ಲಿ ಬಾಂಬ್ ನೋಟಕವನ್ನು ಅಳವಡಿಸಿದನು. ಜಾಗತಿಕ ಯುದ್ದದ ನಂತರ , ಸಾರ್ವಜನಿಕ ವಲಯದಲ್ಲಿ ಕ್ರಿಯಾಶೀಲನಾದ ಬ್ಲಾಕೆಟ್, ಅಣ್ವಸ್ತ್ರ ವಿರೋಧಿ ಜಾಗೃತಿಯನ್ನು ಜನರಲ್ಲಿ ತರಲು ಶ್ರಮಿಸಿದನು. 1948ರಲ್ಲಿ ಬ್ಲಾಕೆಟ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಬ್ಲಾಕೆಟ್, ಒಖಿಯಲಾನಿ ಜೊತೆ ಸೇರಿ ಮೇಘ ಕೋಠಿ ನಿರ್ಮಿಸಿ, ಅದರಲ್ಲಿ ಡಿರಾಕ್ ಮುನ್ರ್ಸಚಿಸಿದ್ದ ಪಾಸಿಟ್ರಾನ್‍ನ್ನು ಮೊದಲ ಬಾರಿಗೆ ಗುರುತಿಸಿದನು. ಆದರೆ ಇದರ ಖಚಿತತೆಗಾಗಿ ಇವರು ಇನ್ನು ಹೆಚ್ಚಿನ ಪ್ರಯೋಗಗಳನ್ನು ಹಮ್ಮಿಕೊಂಡರು. ಇವರು ಪ್ರಯೋಗಶೀಲವಾಗಿದ್ದಾಗಲೇ, ಸಿ.ಡಿ.ಆ್ಯಂಡರ್ಸನ್ ಪಾಸಿಟ್ರಾನ್ ಅಸ್ಥಿತ್ವವನ್ನು ಇವರಿಗಿಂತ ಮುಂಚೆ ಪ್ರಕಟಿಸಿ ಖ್ಯಾತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019